Advertisement
ಗುಣಮಟ್ಟದ ಸೇವೆಗೆ ಹೆಸರುವಾಸಿಯಾಗಿರುವ ನಗರದ ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣ ಬಳಿಯಿರುವ ಸರ್.ಸಿ.ವಿ.ರಾಮನ್ ಸಾರ್ವಜನಿಕ ಆಸ್ಪತ್ರೆ ಸರ್ಕಾರಿ ಮತ್ತು ಸಿಎಸ್‌ಆರ್‌ಅನುದಾನವನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡು ಐಟೆಕ್ ಮಾದರಿಯಲ್ಲಿ ಅಭಿವೃದ್ಧಿಗೊಂಡಿದೆ.
Related Articles
Advertisement
ಪ್ರತಿದಿನ ಸರಾಸರಿ 600 ರಿಂದ 700 ಮಂದಿ ಹೊರರೋಗಿಗಳು ಹಾಗೂ 150 ರಿಂದ 200 ಜನ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದಲ್ಲದೇ ನಿರ್ಗತಿಕ ಮಾನಸಿಕ ರೋಗಿಗಳಿಗೆ ಆರೈಕೆ ಮಾಡಲು 22 ಬೆಡ್ ವ್ಯವಸ್ಥೆ ಮತ್ತು ನವಜಾತ ಶಿಶುಗಳಿಗೆ ವಿಶೇಷ ತುರ್ತು ಆರೈಕೆ ಮಾಡಲು 13 ಟೇಲಿ ಎನ್‌ಐಸಿಯು ವ್ಯವಸ್ಥೆ ಹೊಂದುವ ಮೂಲಕ ಖಾಸಗಿ ಆಸ್ಪತ್ರೆಗಳಿಗೆ ಸಡ್ಡು ಹೊಡೆಯುವಂತೆ ಸೇವೆಗಳು ಇಲ್ಲಿ ಲಭ್ಯವಿದೆ.
ಶೀಘ್ರ ಕ್ಯಾಥ್ಲಾಬ್: ಹೃದಯ ಸಂಬಂಧಿ ತೊಂದರೆ ಇರುವವರಿಗೆ ಚಿಕಿತ್ಸೆಗಾಗಿ ಕ್ಯಾಥ್ಲಾಬ್ ಸೇವೆ ಸದ್ಯ ದಲ್ಲೇ ಬರಲಿದೆ. ಇಲ್ಲಿನ ಆಸ್ಪತ್ರೆಯಲ್ಲಿ ಕ್ಯಾಥ್ಲಾಬ್ ಒದಗಿಸಲು ಆರೋಗ್ಯ ಸಚಿವರು ಒಪ್ಪಿಗೆ ಸೂಚಿಸಿದ್ದಾರೆ. ಈ ಸಂಬಂಧ ಜೆಡಿ ಮೆಡಿಕಲ್ ಸಭೆಯಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತಿರ್ಮಾನಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಸೂಪರ್ ಸ್ಪೆಷಾಲಿಟಿ ಮಾದರಿಯ ಒಪಿಡಿ ಹಾಗೂ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡುವ ಸೌಲಭ್ಯಗಳನ್ನು ಒದಗಿಸಲು ಖಾಸಗಿ ಸಂಸ್ಥೆಗಳು ಮುಂದೆ ಬಂದಿದ್ದು ಸರ್ಕಾರದ ಮಟ್ಟದಲ್ಲಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.
ಹೆಚ್ಚುವರಿಯಾಗಿ 100 ಹಾಸಿಗೆ ಆಸ್ಪತ್ರೆ ಹಾಗೂ ನ್ಯೂರಾಲಾಜಿ, ಗ್ರಾಸ್ಟ್ರೋಲಾಜಿ, ನೆಪ್ರಾಲಾಜಿ, ಯುರೋಲಾಜಿ, ಕಾರ್ಡಿಯಲಾಜಿ ಯುನಿಟ್ ಸ್ಥಾಪಿಸುವಂತೆ ಅರೋಗ್ಯ ಸಚಿವರು ಮತ್ತು ಇಲಾಖೆ ಆಯುಕ್ತರ ಅವರ ಗಮನಕ್ಕೆ ತರಲಾಗಿದೆ.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಶೀಘ್ರ ಶುರು: ಡಾ.ರಾಜೇಶ್ ಚೈಲ್ಡ್ ಹೆಲ್ಪ್ ಫೌಂಡೇಷನ್ ಸಂಸ್ಥೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವ ಮೂಲಕ ಉಚಿತವಾಗಿ ಸೇವೆ ನೀಡಲು ಮುಂದೆ ಬಂದಿದೆ. ಅಧುನಿಕ ಸೌಲಭ್ಯಗಳನ್ನು ಒಳಗೊಂಡಂತೆ ಮುಂದಿನ ದಿನಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭವಾಗಲಿದೆ ಎಂದು ಸರ್ ಸಿ.ವಿ.ರಾಮನ್ ಆಸ್ಪತ್ರೆ ಅಧೀಕ್ಷಕ ರಾಜೇಶ್ ಹೇಳಿದರು. ಈ ಆಸ್ಪತ್ರೆಯಲ್ಲಿ ಎಲ್ಲಾ ತರಹದ ಸೌಲಭ್ಯಗಳಿದ್ದರೂ ಅರಿವಿನ ಕೊರತೆಯಿಂದ ರೋಗಿಗಳ ಸಂಖ್ಯೆ ಕಡಿಮೆ ಇತ್ತು. ಸಿಬ್ಬಂದಿ ಮತ್ತು ಎಲ್ಲಾ ವೈದ್ಯರ ತಂಡ ಅರೋಗ್ಯ ಶಿಬಿರ, ರಕ್ತದಾನ ಶಿಬಿರ, ಕಣ್ಣಿನ ತಪಾಸಣೆ ಶಿಬಿರಗಳನ್ನು ಹೆಚ್ಚಾಗಿ ಆಯೋಜನೆ ಮಾಡುವ ಮೂಲಕ ಜನರಲ್ಲಿ ಅರಿವು ಮೂಡಿಸಿರುವುದರಿಂದ ರೋಗಿಗಳ ಸಂಖ್ಯೆ ಏರಿಕೆಯಾಗಿದೆ. ಎಲ್ಲಾ ಬಡವರು ದುಪ್ಪಟ್ಟು ದರ ಹಣ ನೀಡಿ ಹೋಗುವ ಬದಲು ಸಮರ್ಪಕವಾಗಿ ಆಸ್ಪತ್ರೆ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಡಾ. ರಾಜೇಶ್ ಮನವಿ ಮಾಡಿದ್ದಾರೆ.