ಒಂದು ಪ್ರಕರಣದಲ್ಲಿ 900 ಕೆಜಿ, ಮತ್ತೂಂದು ಪ್ರಕರಣದಲ್ಲಿ 500 ಕೆ.ಜಿ. ಗೋಮಾಂಸ ಪತ್ತೆ ; ವಾಹನ ನೋಂದಣಿ ಸಂಖ್ಯೆ ಆಧರಿಸಿ ತನಿಖೆ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅಕ್ರಮ ಗೋಮಾಂಸ ಸಾಗಣೆ ದಂಧೆ ಜೋರಾಗಿದೆ. ಅಕ್ರಮವಾಗಿ ನಗರಕ್ಕೆ ಗೋಮಾಂಸ ಸಾಗಾಟ ಮಾಡುತ್ತಿದ್ದ ಸಂಬಂಧ ಅಮೃತಹಳ್ಳಿ ಹಾಗೂ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ಒಟ್ಟಾರೆ 1.5 ಟನ್ ಗೋಮಾಂಸ ಜಪ್ತಿ ಮಾಡಿಕೊಳ್ಳಲಾಗಿದೆ.
ಅಮೃತಹಳ್ಳಿ ಠಾಣೆ ಪೊಲೀಸರು ತನ್ವೀರ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಚಿಕ್ಕಜಾಲ ಠಾಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತ ಕೆಟ್ಟು ನಿಂತ ಕಾರಿನಲ್ಲಿ ಗೋಮಾಂಸ ಪತ್ತೆಯಾಗಿದ್ದು, ಆರೋಪಿಗಾಗಿ ತಲಾಶ್ ನಡೆಸುತ್ತಿದ್ದಾರೆ.
ಅಮೃತಹಳ್ಳಿ ಠಾಣೆ: ಚಿಕ್ಕಬಳ್ಳಾಪುರದ ಗೌರಿಬಿದ ನೂರಿನ ಅಲ್ಲಿಪುರ ಅಕ್ರಮ ಕಸಾಯಿಖಾನೆಯಿಂದ ಗೋವಿಂದಪುರ, ಕೆ.ಜಿ. ಹಳ್ಳಿ ಕಡೆಗೆ ಗೋಮಾಂಸ ಸಾಗಿಸಲಾಗುತ್ತಿತ್ತು. ಈ ಬಗ್ಗೆ ಬಂದ ಖಚಿತ ಮಾಹಿತಿ ಆಧರಿಸಿ ಹೆಬ್ಟಾಳ ಮೇಲ್ಸೇತುವೆ ಸಮೀಪದಲ್ಲಿ ಅಮೃತಹಳ್ಳಿ ಠಾಣೆ ಪೊಲೀಸರು ಟವೇರಾ ವಾಹನ ಅಡ್ಡಗಟ್ಟಿ ಪರಿಶೀಲಿಸಿದ್ದರು. ಅದರಲ್ಲಿ 900 ಕೆಜಿ ಗೋಮಾಂಸ ಪತ್ತೆಯಾತ್ತು. 6 ಹಸುಗಳು ಹಾಗೂ 16 ಕರುಗಳನ್ನು ಕಟಾವು ಮಾಡಿದ ಗೋಮಾಂಸ ತುಂಬಿ ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ವಾಹನ ಚಾಲಕ ತನ್ವೀರ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಅಮೃತಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕೆಟ್ಟು ನಿಂತ ಕಾರಿನಲ್ಲಿ 500 ಕೆ.ಜಿ. ಮಾಂಸ: ಮತ್ತೂಂದು ಪ್ರಕರಣದಲ್ಲಿ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯ ತರಬನಹಳ್ಳಿ ಬಳಿ ಕೆಟ್ಟು ನಿಂತಿದ್ದ ಫೋರ್ಡ್ ಕಾರೊಂದರಲ್ಲಿ ಗೋಮಾಂಸ ಪತ್ತೆಯಾಗಿತ್ತು. ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಚಿಕ್ಕಜಾಲ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದಾಗ ಕಾರಿನಲ್ಲಿ ಸುಮಾರು 500 ಕೆ.ಜಿ.ಯಷ್ಟು ಗೋಮಾಂಸ ಇರುವುದು ಕಂಡು ಬಂದಿದೆ. ಆದರೆ, ಈ ಕಾರು ಯಾರಿಗೆ ಸೇರಿರುವುದು ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ. ಕಾರಿನ ಸಂಖ್ಯೆ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ವಾಹನ ಜಪ್ತಿ ಮಾಡಲಾಗಿದೆ. ಕೆಟ್ಟು ನಿಂತ ಕಾರಲ್ಲಿ ಗೋಮಾಂಸ ತುಂಬಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.ಮ ಇನ್ನು ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರಕ್ಕೆ ಎಗ್ಗಿಲ್ಲದೆ ಗೋಮಾಂಸ ಸರಬರಾಜು? ಎರಡೂ ವಾಹನಗಳಲ್ಲಿ ಸಿಕ್ಕಿರುವ ಗೋಮಾಂಸವನ್ನು ಚಿಕ್ಕಬಳ್ಳಾಪು ರದ ಅಲ್ಲಿಪುರ ಕಸಾಯಿಖಾನೆ ಯಿಂದ ನಗರಕ್ಕೆ ಸಾಗಿಸಲಾಗು ತ್ತಿತ್ತು ಎಂದು ತಿಳಿದು ಬಂದಿದೆ. ಎಲ್ಲಿಗೆ ಸಾಗಿಸಲಾಗುತ್ತಿತ್ತು, ಇದರ ಹಿಂದೆ ಯಾರು ಇದ್ದಾರೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದೇ ಮಾದರಿ ಯಲ್ಲಿ ಚಿಕ್ಕಬಳ್ಳಾಪುರದಿಂದ ಹಲವು ಸಮಯಗಳಿಂದ ಟನ್‌ಗಟ್ಟಲೆ ಗೋಮಾಂಸವು ಸಾಗಾಟ ಮಾಡುತ್ತಿರುವ ಆರೋಪವೂ ಕೇಳಿ ಬಂದಿದೆ.
ಬೆಂಗಳೂರಿನ ವಿವಿಧೆಡೆ ಗೋಮಾಂಸಗಳು ರವಾನೆಯಾಗುತ್ತಿದೆ. ಆದರೆ, ಪೊಲೀಸರ ಕಣ್ಣುತಪ್ಪಿಸಿ ದಂಧೆಕೋರರು ಕೃತ್ಯ ಎಸಗುತ್ತಿದ್ದಾರೆ ಎನ್ನಲಾಗಿದೆ. ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಮಾಂಸ ಸಾಗಾಟ ಪ್ರಕರಣವು ಭಾರಿ ಸದ್ದು ಮಾಡಿದೆ. ಇತ್ತೀಚೆಗಷ್ಟೆ ಮಟನ್ ಮಾಂಸದ ಜೊತೆಗೆ ದನದ ಮಾಂಸ ಮಿಶ್ರಣ ಮಾಡಿ ಹೋಟೆಲ್ ಗಳಿಗೆ ಸರಬರಾಜು ಮಾಡಲಾಗುತ್ತಿದೆ ಎಂದು ಹಿಂದೂ ಕಾರ್ಯಕರ್ತ ಪುನಿತ್ ಕೆರೆಹಳ್ಳಿ ಆರೋಪಿಸಿದ್ದರು. ಈ ಪ್ರಕರಣ ಇನ್ನೇನು ಮಾಸುವ ಮುನ್ನವೇ ನಗರದಲ್ಲಿ ಅಕ್ರಮ ಗೋಮಾಂಸ ಸಾಗಾಟ ಜಾಲ ಪತ್ತೆಯಾಗಿದೆ.