Advertisement

ಬೆಂಗಳೂರು: ಮುನಾವರ್ ಫಾರೂಕಿ ಹಾಸ್ಯ ಕಾರ್ಯಕ್ರಮಕ್ಕೆ ಪೊಲೀಸರ ತಡೆ

05:30 PM Nov 28, 2021 | Team Udayavani |

ಬೆಂಗಳೂರು : ಇಂದು ಬೆಂಗಳೂರಿನ  ಗುಡ್‌ ಶೆಫರ್ಡ್‌ ಸಭಾಂಗಣದಲ್ಲಿ ನಡೆಯಬೇಕಿದ್ದ ಹಾಸ್ಯನಟ ಮುನಾವರ್ ಫಾರೂಕಿ ಅವರ ಕಾರ್ಯಕ್ರಮಕ್ಕೆ ಪೊಲೀಸರು ತಡೆ ಹಾಕಿದ್ದಾರೆ. .

Advertisement

ಬೆಂಗಳೂರಿನ ಅಶೋಕ್‌ನಗರದಲ್ಲಿರುವ ಗುಡ್‌ ಶೆಫರ್ಡ್‌ ಸಭಾಂಗಣಕ್ಕೆ ಪತ್ರ ಬರೆದಿರುವ ಪೊಲೀಸರು, ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳಿರುವ ಕಾರಣ ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಸಂಘಟಕರಿಗೆ ಸೂಚಿಸಿದ್ದಾರೆ.

ಬಲಪಂಥೀಯ ಸಂಘಟನೆಗಳ ಬೆದರಿಕೆಗಳ ನಂತರ ಕಳೆದ ತಿಂಗಳು ಮುಂಬೈನಲ್ಲಿ ಇದೇ ರೀತಿಯ ಸ್ಟ್ಯಾಂಡ್-ಅಪ್ ಕಾಮಿಡಿ ಕಾರ್ಯಕ್ರಮವನ್ನು ರದ್ದು ಗೊಳಿಸಲಾಗಿತ್ತು.

ಫಾರುಕಿ ಈ ವರ್ಷದ ಆರಂಭದಲ್ಲಿ ಅವರ ಹಾಸ್ಯ ಕಾರ್ಯಕ್ರಮವೊಂದರಲ್ಲಿ “ಹಿಂದೂ ದೇವರು ಮತ್ತು ದೇವತೆಗಳನ್ನು ಅವಮಾನಿಸಿದ” ಆರೋಪದ ಮೇಲೆ ಜೈಲಿನಲ್ಲಿ ಒಂದು ತಿಂಗಳು ಕಳೆದಿದ್ದರು.

ಮುನಾವರ್ ಫಾರೂಕಿ ವಿವಾದಾತ್ಮಕ ವ್ಯಕ್ತಿಯಾಗಿದ್ದು, ಇತರ ಧರ್ಮಗಳ ದೇವರುಗಳ ಬಗ್ಗೆ ಹೇಳಿಕೆ ನೀಡಿದ್ದಾಗಿ ತಿಳಿದುಬಂದಿದೆ. ಅನೇಕ ರಾಜ್ಯಗಳು ಅವರ ಹಾಸ್ಯ ಕಾರ್ಯಕ್ರಮಗಳನ್ನು ನಿಷೇಧಿಸಿವೆ. ಈತನ ವಿರುದ್ಧ ಮಧ್ಯಪ್ರದೇಶದಲ್ಲಿ ಪ್ರಕರಣ ದಾಖಲಾಗಿದೆ. ಇತರ ರಾಜ್ಯಗಳಲ್ಲಿ ಆತನ ವಿರುದ್ಧ ಇದೇ ರೀತಿಯ ಪ್ರಕರಣಗಳು ದಾಖಲಾಗಿವೆ ಎಂದು ಅಶೋಕ್ ನಗರ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

Advertisement

‘ನಫ್ರತ್ ಜೀತ್ ಹೈ, ಕಲಾವಿದ ಸೋತಿದ್ದಾನೆ.ನಾನು ಮುಗಿಸಿದ್ದೇನೆ! ವಿದಾಯ! ಅನ್ಯಾಯ..’ ಎಂದು ಮುನಾವರ್ ಫಾರೂಕಿ ಟ್ವೀಟ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next