Advertisement

ಫೆ. 20ರಿಂದ 26: ಬೆಂಗಳೂರು ಓಪನ್‌ ಟೆನಿಸ್‌ ಪಂದ್ಯಾವಳಿ

11:32 PM Feb 03, 2023 | Team Udayavani |

ಬೆಂಗಳೂರು: ಬೆಂಗಳೂರಿನ ಕೆಎಸ್‌ಎಲ್‌ಟಿಎ ಮೈದಾನದಲ್ಲಿ ಫೆ. 20ರಿಂದ 26ರ ವರೆಗೆ “ಬೆಂಗಳೂರು ಓಪನ್‌ ಟೆನಿಸ್‌’ ಪಂದ್ಯಾವಳಿ ನಡೆಯಲಿದೆ. ಇದರಲ್ಲಿ ವಿಶ್ವದ ಮಾಜಿ ನಂ.10 ಆಟಗಾರ ಲೂಕಾಸ್‌ ಪೌಲೆ, ಕಳೆದ ವರ್ಷದ ಚಾಂಪಿಯನ್‌ ಚುನ್‌ ಹ್ಸಿನ್‌ ತ್ಸೆಂಗ್‌ ಭಾಗವಹಿಸಲಿದ್ದು, ಕೂಟದ ಮುಖ್ಯ ಆಕರ್ಷಣೆ ಆಗಲಿದ್ದಾರೆ.

Advertisement

ಈ ಪ್ರತಿಷ್ಠಿತ ಎಟಿಪಿ ಚಾಲೆಂಜರ್‌ ಟೆನಿಸ್‌ ಕೂಟವನ್ನು ಕರ್ನಾಟಕ ರಾಜ್ಯ ಲಾನ್‌ ಟೆನಿಸ್‌ ಸಂಸ್ಥೆ (ಕೆಎಸ್‌ಎಲ್‌ಟಿಎ) ಆಯೋಜಿಸುತ್ತಿದೆ.

“ಬೆಂಗಳೂರು ವಿಶ್ವದ ಟೆನಿಸ್‌ ಆಟಗಾರರಿಗೆ ಮೆಚ್ಚಿನ ಸ್ಥಳ. ಈ ವರ್ಷವೂ ನಮಗೆ ವಿಶ್ವಾದ್ಯಂತ ಉತ್ತಮ ಪ್ರತಿಕ್ರಿಯೆ ಬಂದಿರುವುದಕ್ಕೆ ಸಂತೋಷವಾಗಿದೆ. ಹಲವು ಪ್ರಮುಖ ಆಟಗಾರರು ಈ ಬಾರಿಯೂ ಕಣಕ್ಕಿಳಿಯಲಿದ್ದಾರೆ.

ಗ್ರ್ಯಾನ್‌ಸ್ಲಾಮ್‌ಗಳಲ್ಲಿ ಕಣಕ್ಕಿಳಿಯಲು, ಎಟಿಪಿ ಟೂರ್‌ಗಳಲ್ಲಿ ಆಡಲು ಈ ಕೂಟ ಅಡಿಗಲ್ಲಿನಂತೆ ನೆರವಾಗುತ್ತದೆ. ಈ ಬಾರಿ 5ನೇ ಆವೃತ್ತಿ ಯಶಸ್ವಿಯಾಗುತ್ತದೆ ಎಂಬ ಭರವಸೆ ನಮಗಿದೆ’ ಎಂದು ಕೂಟದ ನಿರ್ದೇಶಕ ಸುನೀಲ್‌ ಯಜಮಾನ್‌ ಹೇಳಿದ್ದಾರೆ.

ಈ ಬಾರಿ ಆಡಲಿರುವ ಫ್ರೆಂಚ್‌ ಆಟಗಾರ ಲೂಕಾಸ್‌ ಪೌಲೆ 2016ರ ಅಮೆರಿಕ ಗ್ರ್ಯಾನ್‌ಸ್ಲಾಮ್‌ನ 4ನೇ ಸುತ್ತಿನಲ್ಲೇ ರಫೆಲ್‌ ನಡಾಲ್‌ ಅವರನ್ನು ಮಣಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next