Advertisement
ಬನಶಂಕರಿ 3ನೇ ಹಂತದ ಇಟ್ಟಮಡು ಮುಖ್ಯರಸ್ತೆಯ ಕೃಷ್ಣಯ್ಯ ಲೇಔಟ್ ನಿವಾಸಿ ಕೃಷ್ಣನಾಯ್ಡು(84) ಮತ್ತು ಅವರ ಪತ್ನಿ ಸರೋಜಮ್ಮ(74) ಆತ್ಮಹತ್ಯೆ ಮಾಡಿಕೊಂಡವರು.
Related Articles
Advertisement
ಈ ಮಧ್ಯೆ ಕೆಲ ತಿಂಗಳಿಂದ ಪುತ್ರ ಅಶೋಕ್ ಮತ್ತು ಪೋಷಕರ ನಡುವೆ ಕೌಟುಂಬಿಕ ವಿಚಾರವಾಗಿ ಜಗಳವಾಗಿತ್ತು. ಹೀಗಾಗಿ ವೃದ್ಧ ದಂಪತಿ ಕಟ್ಟಡದ ಮೂರನೇ ಮಹಡಿಯಲ್ಲಿರುವ ರೂಮ್ ನಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದು, ದಂಪತಿ ನಡುವೆಯೂ ಸಣ್ಣ-ಪುಟ್ಟ ವಿಚಾರಕ್ಕೆ ಜಗಳ ನಡೆಯುತ್ತಿತ್ತು ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.
ಸೊಸೆ ಬಂದಾಗ ಬೆಳಕಿಗೆ: ಗುರುವಾರ ಬೆಳಗ್ಗೆ ಪುತ್ರ ಅಶೋಕ್ ಪತ್ನಿ ನೀರು ಹಿಡಿಯಲು ಮೂರನೇ ಮಹಡಿಗೆ ಹೋದಾಗ ರೂಮ್‌ನ ಕಿಟಕಿಗೆ ಪಂಚೆ ಕಟ್ಟಿರುವುದು ಪತ್ತೆಯಾಗಿದೆ. ಅನುಮಾನಗೊಂಡು ಸಮೀಪ ಹೋಗಿ ನೋಡಿದಾಗ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಕೂಡಲೇ ಪತಿ ಅಶೋಕ್‌ಗೆ ಮಾಹಿತಿ ನೀಡಿದ್ದಾರೆ. ನಂತರ ಅಶೋಕ್ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ತೆರಳಿದ ಪೊಲೀಸರು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ, ಕೌಟುಂಬಿಕ ವಿಚಾರವಾಗಿ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆಂದು ಚನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಹೇಳಿದರು.