Advertisement

ಬೆಂಗಳೂರಿನಲ್ಲಿ ಭೂಕಂಪದ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ: ಅಧಿಕಾರಿಗಳು

03:49 PM Nov 26, 2021 | Team Udayavani |

ಬೆಂಗಳೂರು : ನಗರದ ವಿವಿಧ ಭಾಗಗಳ ನಿವಾಸಿಗಳು ಶುಕ್ರವಾರ ಲಘು ಕಂಪನದೊಂದಿಗೆ ಗೆ ಜೋರಾದ ಧ್ವನಿ ಕೇಳಿರುವ ಬಗ್ಗೆ ಹೇಳಿಕೊಂಡ ಬಳಿಕ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ(KSNDMC) ಪ್ರತಿಕ್ರಿಯಿಸಿದ್ದು, ಬೆಂಗಳೂರಿನಲ್ಲಿ ಕಂಪನ ಅಥವಾ ಭೂಕಂಪದ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ ಎಂದು ತಿಳಿಸಿದೆ.

Advertisement

ಬೆಳಿಗ್ಗೆ 11.50 ರಿಂದ 12.15 ರ ನಡುವೆ ಬೆಂಗಳೂರಿನ ಹೆಮ್ಮಿಗೆಪುರ, ಕೆಂಗೇರಿ, ಜ್ಞಾನಭಾರತಿ, ರಾಜರಾಜೇಶ್ವರಿ ನಗರ ಮತ್ತು ಕಗ್ಗಲಿಪುರದ ಸ್ಥಳೀಯ ನಿವಾಸಿಗಳಿಂದ ಇಂದು ಕಂಪನಗಳಿಗೆ ಸಂಬಂಧಿಸಿದ ವರದಿಗಳನ್ನು ಸ್ವೀಕರಿಸಲಾಗಿದೆ. ಈ ಅವಧಿಯಲ್ಲಿ ಯಾವುದೇ ಭೂಕಂಪನ ಲಕ್ಷಣಗಳು ಸಂಭವನೀಯ ಭೂಕಂಪದ ಸಂಕೇತಗಳಿಗಾಗಿ ನಮ್ಮ ಭೂಕಂಪನ ವೀಕ್ಷಣಾಲಯದಲ್ಲಿ ಕಂಡು ಬಂದಿಲ್ಲ.ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತನಿಖೆ ಅಗತ್ಯ ಇದ್ದರೆ ಆದೇಶ : ಸಚಿವ ಸಿ ಸಿ ಪಾಟೀಲ್

ಕಲಬುರಗಿ ಭಾಗದಲ್ಲಿ ಕಂಪನದ ಅನುಭವ ಆದಾಗ ಕಂದಾಯ ಸಚಿವರು ಬಂದು ವಿಚಾರ ಮಾಡಿದ್ದರು. ನಮ್ಮ ಇಲಾಖೆಯಿಂದ ತನಿಖೆ ಅಗತ್ಯ ಇದ್ದರೆ ಆದೇಶ ಮಾಡುತ್ತೇನೆ,ಹೆಚ್ಚಿನ ಮಳೆಯಾದಂತಹ ಸಂದರ್ಭದಲ್ಲಿ ಇತಂಹ ಅನುಭವ ಕಾಣುತ್ತದೆ. ಈ ಬಾರೀಯೂ ಹೆಚ್ಚಿನ ಮಳೆಯಾಗಿದೆ ಹಾಗಾಗಿ ಗುಲ್ಬರ್ಗ ಭಾಗದಲ್ಲಿ ಹೆಚ್ಚಿನ ಅನುಭವ ಕಾಣುತ್ತಿದ್ದೇವೆ. ನಮ್ಮ ಇಲಾಖೆಯ ಕಾರ್ಯದರ್ಶಿ ಗಳಿಂದ ಮಾಹಿತಿ ಪಡೆದು, ನಮ್ಮ ತಂತ್ರಜ್ಞರ ಉಪಯೋಗ ಪಡೆಯುತ್ತೇವೆ ಎಂದು ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ್ ಹೇಳಿಕೆ ನೀಡಿದ್ದಾರೆ.

ದೇಶದ ಈಶಾನ್ಯ ಭಾಗದಲ್ಲೂ ಕಂಪನ

Advertisement

ಶುಕ್ರವಾರ ಮುಂಜಾನೆ ಅಸ್ಸಾಂ ಮತ್ತು ಮಿಜೋರಾಂ ಸೇರಿದಂತೆ ಈಶಾನ್ಯ ಪ್ರದೇಶದಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪನ ಇಲಾಖೆ ತಿಳಿಸಿದೆ.

ಇಲಾಖೆ ಹಂಚಿಕೊಂಡ ಮಾಹಿತಿಯ ಪ್ರಕಾರ, ಭೂಕಂಪವು ಮಿಜೋರಾಂ ಬಳಿಯ ಮ್ಯಾನ್ಮಾರ್‌ನ ಗಡಿಯ ಸಮೀಪ ಕೇಂದ್ರೀಕೃತವಾಗಿತ್ತು.

ಅಲ್ಲಿ ಇದುವರೆಗೆ ಯಾವುದೇ ಜೀವ ಹಾನಿ ಅಥವಾ ಆಸ್ತಿ ಹಾನಿಯ ವರದಿಯಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next