Advertisement

ಇಂದು ಮೋದಿ ದಶಪಥ ಸಂಚಲನ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೇ ಲೋಕಾರ್ಪಣೆ

12:38 AM Mar 12, 2023 | Team Udayavani |

ಬೆಂಗಳೂರು: ಮೈಸೂರು- ಬೆಂಗಳೂರು ಎಕ್ಸ್‌ಪ್ರೆಸ್‌ ಹೈವೇ ಉದ್ಘಾಟನೆಗಾಗಿ ಪ್ರಧಾನಿ ನರೇಂದ್ರ ಮೋದಿ ರವಿವಾರ ಮಂಡ್ಯಕ್ಕೆ ಆಗಮಿಸುತ್ತಿದ್ದು, ಬಿಜೆಪಿಗೆ ನೆಲೆಯೇ ಇಲ್ಲದ ಒಕ್ಕಲಿಗರ ನೆಲದಲ್ಲಿ ಪ್ರಧಾನಿ ಕೇಸರಿ ಕಹಳೆ ಮೊಳಗಿಸಲಿದ್ದಾರೆ.

Advertisement

ಕಳೆದೊಂದು ವರ್ಷದಿಂದ ಈ ಹೆದ್ದಾರಿ ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ದಶಪಥ ಯೋಜನೆಯ ಲಾಭ ಪಡೆಯು ವುದಕ್ಕೆ ಮೂರೂ ರಾಜಕೀಯ ಪಕ್ಷಗಳು ಹಣಾ ಹಣಿ ನಡೆಸುತ್ತಿವೆ. ಹಳೆ ಮೈಸೂರು ಭಾಗದ ರಾಮನಗರ, ಮಂಡ್ಯ, ಮೈಸೂರು ಜಿಲ್ಲೆಯಲ್ಲಿ ಇದು ರಾಜಕೀಯ ಮೇಲಾಟಕ್ಕೂ ಕಾರಣವಾಗಿದೆ. ಆದರೆ ಅದೇ ಮಾರ್ಗದ ಉದ್ಘಾಟನೆಗೆ ಈಗ ಪ್ರಧಾನಿ ಮೋದಿಯೇ ಆಗಮಿಸುತ್ತಿರುವುದರಿಂದ ಚುನಾವಣೆಯ ಹೊಸ್ತಿಲಲ್ಲಿ ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಮಂಡ್ಯ ಒಕ್ಕಲಿಗರ ಪ್ರಾಬಲ್ಯದ ಜಿಲ್ಲೆ. ಈ ಜಿಲ್ಲೆಯೂ ಸೇರಿದಂತೆ ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ ಭದ್ರ ನೆಲೆ ಇಲ್ಲ. ಮೈಸೂರು ಭಾಗದಲ್ಲಿ ತುಸು ಅಸ್ತಿತ್ವವಿದ್ದರೂ ಮಂಡ್ಯ ಜಿಲ್ಲೆಯಲ್ಲಿ ಉಪ ಚುನಾವಣೆ ಹೊರತುಪಡಿಸಿದರೆ ರಾಮ ನಗರದಲ್ಲಿ ಇದುವರೆಗೂ ಖಾತೆ ತೆರೆಯುವುದಕ್ಕೆ ಸಾಧ್ಯವಾಗಿಲ್ಲ. ಆದರೆ ಈ ಭಾಗದಲ್ಲಿ ಕಮಲ ವನ್ನು ಅರಳಿಸಲೇಬೇಕೆಂಬುದು ಬಿಜೆಪಿ ರಾಷ್ಟ್ರೀಯ ನಾಯಕರ ಬಹುದಿನಗಳ ಕನಸು. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಈ ವಿಚಾರದಲ್ಲಿ ರಾಜ್ಯ ನಾಯಕರಿಗೆ ಅನೇಕ ಬಾರಿ ಕ್ಲಾಸ್‌ ತೆಗೆದುಕೊಂಡಿದ್ದರೂ ಫ‌ಲಿತಾಂಶ ಲಭಿಸಿಲ್ಲ. ಹೀಗಿರುವಾಗ ಮಂಡ್ಯಕ್ಕೆ ಪ್ರಧಾನಿ ಆಗಮಿಸುತ್ತಿ ರುವುದು ಬಿಜೆಪಿ ಪಾಳಯದಲ್ಲಿ ತುಸು ಚೇತರಿಕೆ ತರಬಹುದೆಂದು ನಿರೀಕ್ಷಿಸಲಾಗಿದೆ.

ಮೋದಿ ರಸ್ತೆ
ಕ್ರೆಡಿಟ್‌ ಕಲಹದ ಮಧ್ಯೆಯೂ ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ ಹೈವೇಯನ್ನು “ಮೋದಿ ರಸ್ತೆ’ ಎಂದು ಜನ ಕರೆಯಲಾರಂಭಿಸಿದ್ದಾರೆ. ಇದ ರಿಂದಾಗಿ ಈ ಯೋಜನೆ ಮತದಾರರ ಮನಸ್ಸಿ ನಲ್ಲಿ ಮನೆ ಮಾಡಿದೆ ಎಂದೇ ಹೇಳ ಬಹುದು. ಇದರ ಜತೆಗೆ ಇನ್ನಷ್ಟು ಅಭಿವೃದ್ಧಿ ಯೋಜನೆ ಗಳಿಗೂ ಪ್ರಧಾನಿ ಶಂಕು ಸ್ಥಾಪನೆ ಮಾಡಲಿದ್ದಾರೆ. ಜತೆಗೆ ರಾಜಕೀಯವಾಗಿ ಒಂದಿಷ್ಟು ಕುಟುಕು ವಂಥ ಮಾತುಗಳನ್ನು ಮೋದಿ ಆಡಲೂ ಬಹುದು. ಇದು ಚುನಾವಣೆಯವರೆಗೂ ಚರ್ಚೆಗೆ ಕಾರಣವಾಗಬಹುದು.

ಕುತೂಹಲಕಾರಿ ಸಂಗತಿ ಎಂದರೆ ಹಿಜಾಬ್‌ ವಿವಾದ ಸಂದರ್ಭ ಮಂಡ್ಯದಲ್ಲಿ ನಡೆದ ಪ್ರತಿಭಟನೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರ ಆತಂಕಕ್ಕೆ ಕಾರಣವಾಗಿತ್ತು. ತಮ್ಮ ಪರಂಪರಾಗತ ಕ್ಷೇತ್ರದಲ್ಲಿ ಕೇಸರಿಪಡೆ ವಿಜೃಂಭಿಸಿದ ರೀತಿ ತುಸು ಆತಂಕಕ್ಕೆ ಕಾರಣವಾಗಿತ್ತು. ಇದರ ಜತೆಗೆ ತಳಹಂತದಲ್ಲಿ ಬಿಜೆಪಿ ಸದ್ದಿಲ್ಲದೇ ಒಂದಿಷ್ಟು ಕೆಲಸ ಮಾಡುತ್ತಿದೆ. ಈ ಮಧ್ಯೆ ಸಂಸದೆ ಸುಮಲತಾ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿ ಜಿಲ್ಲೆಯ ರಾಜಕಾರಣವನ್ನು ಹದಗೊಳಿಸಿದ್ದಾರೆ. ಒಟ್ಟಾರೆಯಾಗಿ ಮಂಡ್ಯ ಹಾಗೂ ಹಳೆ ಮೈಸೂರು ಭಾಗದಲ್ಲಿ ಚಟುವಟಿಕೆ ಗಳು ಗರಿಗೆದರುತ್ತಿರುವಾಗಲೇ ಮೋದಿ ಆಗಮನ ಹಲವು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

Advertisement

ಐಐಟಿಗೆ ಚಾಲನೆ
ಹೈವೇ ಉದ್ಘಾಟನೆ ಬಳಿಕ ಮೋದಿ ಧಾರವಾಡ ಐಐಟಿ ಉದ್ಘಾಟಿಸಲಿದ್ದಾರೆ. ಜತೆಗೆ ವಿಶ್ವದ ಅತಿ ಉದ್ದನೆಯ ಹುಬ್ಬಳ್ಳಿ ರೈಲು ನಿಲ್ದಾಣ ಉದ್ಘಾಟನೆ ಹಾಗೂ ಜಯದೇವ ಆಸ್ಪತ್ರೆ ನಿರ್ಮಾಣಕ್ಕೂ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ಹೊಸಪೇಟೆಯಲ್ಲಿ ಹಂಪಿ ವಾಸ್ತುಶಿಲ್ಪ ಮಾದರಿ ಯಲ್ಲಿ ನವೀಕರಣ ಗೊಂಡಿರುವ ರೈಲು ನಿಲ್ದಾಣವನ್ನೂ ಮೋದಿ ವರ್ಚುವಲ್‌ ಆಗಿ ಉದ್ಘಾಟಿಸಲಿದ್ದಾರೆ.

ಇದೇ ರವಿವಾರ ನಾನು ಕರ್ನಾಟಕಕ್ಕೆ ಭೇಟಿ ನೀಡುತ್ತಿದ್ದು, ಮಂಡ್ಯ ಮತ್ತು ಹುಬ್ಬಳ್ಳಿ – ಧಾರವಾಡದಲ್ಲಿ 16 ಸಾವಿರ ಕೋಟಿ ರೂ. ವೆಚ್ಚದ ಯೋಜನೆಗಳ ಶಿಲಾನ್ಯಾಸ, ಉದ್ಘಾ ಟನೆ ನೆರವೇರಿಸಲಿದ್ದೇನೆ. ಈ ಯೋಜನೆಗಳು ಸಂಪರ್ಕ ಮತ್ತು ಸಾಮಾಜಿಕ-ಆರ್ಥಿಕ ಪ್ರಗತಿಗೆ ಉತ್ತೇಜನ ನೀಡಲಿವೆ.
-ನರೇಂದ್ರ ಮೋದಿ, ಪ್ರಧಾನಿ

ಇದು ಎನ್‌ಡಿಎಯ ಯೋಜನೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ನಿರ್ಮಾಣದ ವಾಸ್ತಾವಂಶಗಳನ್ನು ಜನರ ಮುಂದಿಡಲಾಗುವುದು. ಅದನ್ನು ನಿರ್ಮಿಸಿದ್ದು ಯಾರು ಎಂಬುದನ್ನು ಸಾರ್ವಜನಿಕರೇ ತೀರ್ಮಾನಿಸಲಿ.
– ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next