Advertisement
ಈ ರೈಲು ಮಂಗಳೂರು ಮತ್ತು ಬೆಂಗಳೂರು ಮಧ್ಯೆ ಆರಂಭವಾಗಿತ್ತು. ಬಳಿಕ ಈ ಭಾಗದ ಜನರ ವಿರೋಧದ ನಡುವೆಯೇ ರೈಲನ್ನು ಕೇರಳದ ಕಣ್ಣೂರಿಗೆ ವಿಸ್ತರಿಸಲಾಗಿತ್ತು. ಪ್ರಸ್ತುತ ರೈಲು ಮಂಗಳೂರು- ಬೆಂಗಳೂರನ್ನು ಸಂಪರ್ಕಿಸುತ್ತಿದ್ದು, ಬಹುಬೇಡಿಕೆಯ ರೈಲಾಗಿದೆ. ಬಹುತೇಕ ದಿನಗಳಲ್ಲೂ ವೈಟಿಂಗ್ ಲಿಸ್ಟ್‌ನಲ್ಲೇ ಇರುತ್ತದೆ. ಹಾಗಾಗಿ ಕಣ್ಣೂರಿನಿಂದಲೂ ದಕ್ಷಿಣಕ್ಕೆ ಕೋಯಿಕ್ಕೋಡ್‌ಗೆ ಈ ರೈಲು ವಿಸ್ತರಣೆ ಮಾಡಿರುವುದಕ್ಕೆ ಜನರಿಂದ ತೀವ್ರ ಪ್ರತಿರೋಧ ಬಂದಿದೆ. ಜನರ ದೂರು ಸಹಜವಾಗಿದ್ದು, ಪರಿಗಣಿಸಲೇಬೇಕು, ಈ ವಿಸ್ತರಣೆಯಿಂದಾಗಿ ಮಂಗಳೂರು ಭಾಗದ ಪ್ರಯಾಣಿಕರಿಗೆ ಟಿಕೆಟ್ ಲಭ್ಯವಾಗುವ ಪ್ರಮಾಣ ಕಡಿಮೆಯಾಗಲಿದೆ. ಅಲ್ಲದೆ ಪ್ರಸ್ತುತ 16527/28 ರೈಲು ಕಣ್ಣೂರು-ಬೆಂಗಳೂರು ಮಧ್ಯೆ ಕೋಯಿಕ್ಕೋಡ್ ಮೂಲಕವಾಗಿ ಸಂಚರಿಸುತ್ತಿದ್ದು ಕೋಯಿಕ್ಕೋಡ್ ಭಾಗದವರಿಗೆ ಸೇವೆಯಲ್ಲಿದೆ. ಹಾಗಾಗಿ ಈ ಹೊಸ ವಿಸ್ತರಣೆ ಅಗತ್ಯವಿರುವುದಿಲ್ಲ ಎಂದು ಪತ್ರದಲ್ಲಿ ನಳಿನ್ ತಿಳಿಸಿದ್ದಾರೆ. Advertisement
Bengaluru-Kannur ರೈಲು ಕೋಯಿಕ್ಕೋಡ್‌ಗೆ ವಿಸ್ತರಣೆ ಬೇಡ- ಸಂಸದ ನಳಿನ್ ಆಗ್ರಹ
01:22 AM Feb 02, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.