Advertisement
ಸಿಲಿಕಾನ್ ಸಿಟಿಯ ಹಲವು ಖಾಸಗಿ ಆಸ್ಪತ್ರೆಯಲ್ಲಿ ಹಿಂದಿ, ಮಲಯಾಳಂ ಸೇರಿದಂತೆ ಹಲವು ಭಾಷೆಗಳನ್ನು ಮಾತನಾಡುವವರು ನರ್ಸ್‌ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಂತವರು ಆಸ್ಪತ್ರೆಗೆ ಭೇಟಿ ನೀಡುವ ಕನ್ನಡಿಗರೊಂದಿಗೆ ಸುಲಲಿತವಾಗಿ ಸಂವಹನ ನಡೆಸಲು ಅನುಕೂಲವಾಗಲಿ ಎಂಬ ಉದ್ದೇಶದಿಂದ “ಕನ್ನಡ ಕಲಿಕಾ’ ತರಗತಿಗಳನ್ನು ಆಯೋ ಜಿಸುತ್ತಿದೆ. ಅದರ ಪ್ರಾರಂಭಿಕ ಭಾಗವಾಗಿಯೇ ಕೇಂದ್ರ ಸರ್ಕಾರ ಸ್ವಾಮ್ಯದ ನಿಮ್ಹಾನ್ಸ್ ಆಸ್ಪತ್ರೆಯಲ್ಲಿರುವ ಕನ್ನಡೇತರ ಭಾಷೆಯ ನರ್ಸಿಂಗ್ ವಿದ್ಯಾರ್ಥಿಗಳಿಗೆ ಕನ್ನಡ ತರಗತಿಗಳನ್ನು ಆರಂಭಿಸಿದೆ.
Related Articles
Advertisement
ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಕೇರಳಿಗರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಚಹಾ ಮಾರಾಟದಿಂದ ಉದ್ಯಮದ ವಲಯದಲ್ಲಿ ತೊಡಗಿ ಸಿಕೊಂಡಿದ್ದಾರೆ. ಜತೆಗೆ ಹಲವು ಖಾಸಗಿ ಆಸ್ಪತ್ರೆಗಳಲ್ಲಿ ನರ್ಸ್‌ಗಳಾಗಿ ಹಲ ವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಭವಿಷ್ಯದ ದೃಷ್ಟಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕೇರಳಿಗರು ಕನ್ನಡ ಭಾಷೆ ಕಲಿಕೆಗೆ ಆಸಕ್ತಿ ಹೊಂದಿದ್ದು, ಕನ್ನಡ ಕಲಿಕಾ ತರಗತಿ ಆರಂಭಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಮನವಿ ಮಾಡಿದ್ದಾರೆ ಎಂದು ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ. ಈಗಾಗಲೇ ಮಾಗಡಿ ರಸ್ತೆಯ ಖಾಸಗಿ ನರ್ಸಿಂಗ್ ಹೋಮ್ ನಲ್ಲಿ 150 ನರ್ಸಿಂಗ್ ವಿದ್ಯಾರ್ಥಿಗಳಿಗೆ ಕನ್ನಡ ಕಲಿಕಾ ತರಗತಿಗಳನ್ನು ಆರಂಭಿಸಲಾಗಿದ್ದು, ವಿದ್ಯಾರ್ಥಿಗಳು ಆಸಕ್ತಿಯಿಂದ ಕನ್ನಡ ಕಲಿಯು ತ್ತಿದ್ದಾರೆ. ಬೆಂಗಳೂರಿನ ಕೇರಳ ಸಮಾಜದವರು ಕೂಡ ಕನ್ನಡ ಕಲಿಕಾ ತರಗತಿಗಳನ್ನು ಮತ್ತಷ್ಟು ನಡೆಸುವಂತೆ ಮನವಿ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಲಯಾಳಂ ಮತ್ತು ಕನ್ನಡ ಭಾಷೆ ಬಲ್ಲ 25 ಮಂದಿಯನ್ನು ಆಯ್ಕೆ ಮಾಡಿ ಅವರಿಗೆ ಕನ್ನಡ ಕಲಿತಾ ತರಗತಿಗಳನ್ನು ನಡೆಸುವ ಬಗ್ಗೆ ತರಬೇತಿ ನೀಡಲಾಗಿದೆ. ಕೆಲವು ಖಾಸಗಿ ಬ್ಯಾಂಕ್‌ಗಳು ಕೂಡ ನಮ್ಮ ಸಂಸ್ಥೆಯ ಸಿಬ್ಬಂದಿಗೆ ಕನ್ನಡ ಕಲಿಕಾ ತರಗತಿ ಆರಂಭಿಸಿ ಎಂದು ಮನವಿ ಮಾಡಿವೆ ಎಂದು ತಿಳಿಸಿದ್ದಾರೆ.
ನಗರದ ಹಲವು ಖಾಸಗಿ ಆಸ್ಪತ್ರೆ ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಾದಿಯರು ಕಾರ್ಯ ನಿರ್ವಹಿಸು ತ್ತಿದ್ದಾರೆ. ಅಂತಹ ಆಸ್ಪತ್ರೆಗಳಿಗೆ ಆರೋಗ್ಯ ಸೇವೆಗಾಗಿ ಭೇಟಿ ನೀಡುವ ಕನ್ನಡಿಗರ ಜತೆಗೆ ಸುಲಭವಾಗಿ ಸಂವಹನಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಪ್ರಾಧಿಕಾರವು ಕನ್ನಡ ಕಲಿಕಾ ಆಸಕ್ತಿ ಹೊಂದಿದ ನರ್ಸಿಂಗ್ ಹೋಮ್ ವಿದ್ಯಾರ್ಥಿಗಳಿಗೆ ಕನ್ನಡ ಕಲಿಕಾ ತರಗತಿಗಳನ್ನು ಉಚಿತವಾಗಿ ನಡೆಸಲಿದೆ. ನಿಮ್ಹಾನ್ಸ್ ಆಸ್ಪತ್ರೆಯಲ್ಲಿರುವ ಕನ್ನಡೇತರ ನರ್ಸಿಂಗ್ ವಿದ್ಯಾರ್ಥಿಗಳಿಗೆ ಕನ್ನಡ ಕಲಿಕಾ ತರಗತಿ ಆರಂಭಿಸಲಾಗಿದೆ. ●ಡಾ.ಪುರುಷೋತ್ತಮ ಬಿಳಿಮಲೆ, ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ
■ ದೇವೇಶ ಸೂರಗುಪ್ಪ