Advertisement

ಬೆಂಗಳೂರು: ಪದವಿ ಮೊದಲ ಸೆಮಿಸ್ಟರ್‌ ವೇಳಾಪಟ್ಟಿ ಪ್ರಕಟ

12:53 AM May 25, 2023 | Team Udayavani |

ಬೆಂಗಳೂರು: ಉನ್ನತ ಶಿಕ್ಷಣ ಇಲಾಖೆಯು ವಿಶ್ವವಿದ್ಯಾನಿಲಯ, ಕಾಲೇಜು (ತಾಂತ್ರಿಕ ಶಿಕ್ಷಣ ಹೊರತುಪಡಿಸಿ)ಗಳ ಶೈಕ್ಷಣಿಕ ವೇಳಾಪಟ್ಟಿ ಪ್ರಕಟಿಸಿದೆ. ಜುಲೈ 17 ರಂದು ಪ್ರಥಮ ಸೆಮಿಸ್ಟರ್‌ ಆರಂಭಗೊಳ್ಳಲಿದ್ದು, ಜು. 31ರೊಳಗೆ ಮೊದಲ ಸೆಮಿಸ್ಟರ್‌ಗೆ ಸೇರ್ಪಡೆ ಆಗಲು ಅವಕಾಶ ಇದೆ.

Advertisement

ದಂಡವಿಲ್ಲದೆ ಮೊದಲ ಸೆಮಿಸ್ಟರ್‌ ಸೇರಲು ಜು. 15 ಕೊನೆಯ ದಿನ. ಜು. 31 ರೊಳಗೆ ದಂಡ ಸಹಿತ ಸೇರ್ಪಡೆ ಆಗಲು ಅವಕಾಶ ವಿದೆ. ಮೊದಲ ಸೆಮಿಸ್ಟರ್‌ ತರಗತಿಗಳು ಜು. 17ಕ್ಕೆ ಆರಂಭ ಗೊಳ್ಳಲಿದ್ದು, ನ. 18ಕ್ಕೆ ಕೊನೆಗೊಳ್ಳಲಿವೆ. ನ. 20ರಿಂದ ಮೊದಲ ಸೆಮಿಸ್ಟರ್‌ ಪರೀಕ್ಷೆಗಳು ಆರಂಭಗೊಳ್ಳಲಿವೆ. ರಜೆ, ಪರೀಕ್ಷೆ, ಮೌಲ್ಯ ಮಾಪನ ಮತ್ತು ಫ‌ಲಿತಾಂಶ ಪ್ರಕ್ರಿಯೆ 2024ರ ಜ. 15ರೊಳಗೆ ಮುಕ್ತಾಯಗೊಳ್ಳಬೇಕು.

2024ರ ಜ. 16ರಿಂದ ಎರಡನೇ ಸೆಮಿಸ್ಟರ್‌ ಆರಂಭಗೊಳ್ಳಲಿವೆ.

Advertisement

Udayavani is now on Telegram. Click here to join our channel and stay updated with the latest news.

Next