ಬೆಂಗಳೂರು: ನಗರದಲ್ಲಿ ಸಂಚಾರ ಸಮಸ್ಯೆಗಳ ನಿಯಂತ್ರಿಸಲು ಪ್ರಥಮ ಬಾರಿಗೆ ನಗರದ ಸಂಚಾರ ದಕ್ಷಿಣ ವಿಭಾಗದಲ್ಲಿ ಡಿಸಿಪಿ ಶಿವಪ್ರಕಾಶ್ ದೇವರಾಜು ಅವರ ನೇತೃತ್ವದಲ್ಲಿ ಆರಂಭವಾದ “ಜಾಯಿನ್ ದಿ ಕಮ್ಯೂಟ್’ ಎಂಬ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಮೊದಲ ದಿನವೇ 500 ಮಂದಿ ಕಮ್ಯೂಟರ್ ಗಳು ನೋಂದಣಿಯಾಗಿದ್ದಾರೆ.
ಅಲ್ಲದೆ, ಎರಡು ದಿನಗಳಲ್ಲಿ ನಾಲ್ಕು ಮಂದಿ ಕಮ್ಯೂಟರ್‌ಗಳ ಜತೆ ಡಿಸಿಪಿ ಶಿವಪ್ರಕಾಶ್ ದೇವರಾಜ್ ಕೆಲ ಮಾರ್ಗಗಳಲ್ಲಿ ಖುದ್ದು ಸಂಚರಿಸಿ ಸಂಚಾರ ದಟ್ಟಣೆ ಹಾಗೂ ಇತರೆ ಸಮಸ್ಯೆಗಳ ಮಾಹಿತಿ ಪಡೆದುಕೊಂಡಿದ್ದಾರೆ.
ಮೊದಲಿಗೆ ಕುಮಾರನ್ ಎಂಬ ಕಮ್ಯೂಟರ್ ಜತೆ ಹುಳಿಮಾವುನಿಂದ ಕೋರಮಂಗಲ, ವಾಟರ್ ಟ್ಯಾಂಕ್ ಜಂಕ್ಷನ್, ಬನ್ನೇರುಘಟ್ಟ ರಸ್ತೆವರೆಗೂ ಅವರೊಂದಿಗೆ ಕಾರಿನಲ್ಲಿ ಸಂಚರಿಸಿದ್ದೇನೆ. ಹಾಗೆಯೇ ಇತರೆ ಕಮ್ಯೂಟರ್‌ಗಳ ಜತೆ ಜೆ.ಪಿ.ನಗರ, ಅರಕೆರೆ ರಸ್ತೆ, ಮಾರುತಿನಗರ, ಎಸ್ಪಿ ರೋಡ್ ಜಂಕ್ಷನ್ ಸೇರಿ ಕೆಲ ಮಾರ್ಗದಲ್ಲಿ ತೆರಳಿದ್ದೇನೆ. ಹೀಗೆ ನಾಲ್ಕು ಮಂದಿ ಕಮ್ಯೂಟರ್‌ಗಳ ಜತೆ ಸಂಚರಿಸಿದಾಗ ಕೆಲವೆಡೆ ಸಿಗ್ನಲ್ ಗಳ ಟೈಮ್‌ಗಳ ವ್ಯತ್ಯಾಸ, ರಸ್ತೆ ಸರಿ ಇಲ್ಲ. ರಸ್ತೆ ಗುಂಡಿಗಳು, ಪಾರ್ಕಿಂಗ್ ಸೇರಿ ಕೆಲ ಸಮಸ್ಯೆಗಳ ಬಗ್ಗೆ ಪ್ರತ್ಯಕ್ಷವಾಗಿ ತೋರಿಸಿ ಮಾಹಿತಿ ನೀಡಿದ್ದಾರೆ. ಎಲ್ಲಾ ಅಂಶಗಳನ್ನು ದಾಖಲಿಸಿಕೊಂಡಿದ್ದು, ಪರಿಹಾರ ಕಂಡುಕೊಳ್ಳುವ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸುತ್ತೇನೆ ಎಂದು ಡಿಸಿಪಿ ಶಿವಪ್ರಕಾಶ್ ದೇವರಾಜು ಮಾಹಿತಿ ನೀಡಿದರು.
ನಾಗರಿಕರು ತಮ್ಮ ದೈನಂದಿನ ಪ್ರಯಾಣದ ಮಾರ್ಗಗಳು ಮತ್ತು ಪ್ರಯಾಣದ ವಿಧಾನಗಳನ್ನು ನೋಂದಣಿ ಮಾಡಿಕೊಳ್ಳಲು ಜಾಯಿನ್ ದಿ ಕಮ್ಯೂಟ್ ಅಭಿಯಾನದ ಮೂಲಕ ಆಹ್ವಾನಿಸ ಲಾಗಿದೆ. ಅದರಲ್ಲಿ ಆಯ್ಕೆಯಾದ ನಾಗರಿಕರು ನನ್ನೊಂದಿಗೆ ಸಂಚಾರ ಮಾಡುವ ಅವಕಾಶ ದೊರಯಲಿದೆ. ಈ ವೇಳೆ ಸಂಚಾರ ದಟ್ಟಣೆ, ವಿಳಂಬ ಅಥವಾ ಸುರಕ್ಷತೆ ಕಾಳಜಿಗಳು ಸೇರಿ ನಾಗರಿಕರು ಸಂಚಾರ ಸಮಸ್ಯೆಗಳನ್ನು ನೇರವಾಗಿ ವಿವರಿಸಬಹುದು. ಈ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ದೊರಕಿದೆ. ಪ್ರತಿದಿನ ಒಬ್ಬ ಕಮ್ಯೂಟರ್ ಜೊತೆಗೆ ಪ್ರಯಾಣಿಸುತ್ತೇನೆ ಎಂದು ಹೇಳಿದರು. ರಾಜಧಾನಿಯಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ನಿಯಂತ್ರಿಸಲು ನಗರದ ದಕ್ಷಿಣ ವಿಭಾಗದಲ್ಲಿ ವಿಭಿನ್ನ ಪ್ರಯೋಗ ಕೈಗೊಳ್ಳಲಾಗಿದೆ.
ಡಿಸಿಪಿ ಜತೆಗೆ ಸಂಚರಿಸಲು ನೋಂದಾಯಿಸಿ
ಪ್ರಯಾಣಿಕರು ತಮ್ಮ ಪ್ರತಿದಿನದ ಪ್ರಯಾಣದ ಮಾರ್ಗಗಳು ಮತ್ತು ಸಂಚಾರ ಮಾಧ್ಯಮದ ವಿವರ ಗಳನ್ನು ಆನ್‌ಲೈನ್ (https://jointhecom mutebstp.in) ಮೂಲಕ ನೋಂದಾಯಿಸಬೇಕು. ಬಳಿಕ ಡಿಸಿಪಿ ಜತೆಗೆ ಪ್ರಯಾಣಿಸುವ ಪ್ರಯಾಣಿಕರನ್ನು ಆಯ್ಕೆ ಮಾಡಲಾಗುತ್ತದೆ. ಪ್ರಯಾಣದ ವೇಳೆ ಸಂಚಾರ ಕಿರಿಕಿರಿ, ವಿಳಂಬ ಮತ್ತು ಸುರಕ್ಷತಾ ಸಮಸ್ಯೆಗಳನ್ನು
ಡಿಸಿಪಿ ಗಮನಿಸುವುದರ ಜತೆಗೆ ಸಂಚಾರ ಹೇಗಿತ್ತು?
ನೋಂದಾಯಿಸಿಕೊಂಡ ಕಮ್ಯೂಟರ್ ಜತೆಗೆ ಡಿಸಿಪಿ ಖುದ್ದು ಕಾರಿನಲ್ಲಿ ಸಂಚಾರ
ಕೋರಮಂಗಲ, ಜೆಪಿ ನಗರ, ಬನ್ನೇರುಘಟ್ಟ ಸೇರಿ ವಿವಿಧ ರಸ್ತೆಗಳಲ್ಲಿ ಪ್ರಯಾಣ
ಸಿಗ್ನಲ್ ಟೈಮ್‌ಗಳ ವ್ಯತ್ಯಾಸ, ರಸ್ತೆ ಅವ್ಯವವಸ್ಥೆ, ಪಾರ್ಕಿಂಗ್ ಸಮಸ್ಯೆ ಬಗ್ಗೆ ಹೇಳಿಕೊಂಡ ಸವಾರರು
ಇಲಾಖೆ ಅಧಿಕಾರಿಗಳ ಜೊತೆಗೆ ಚರ್ಚಿಸಿ ಪರಿಹಾರ ನೀಡುವುದಾಗಿ ಭರವಸೆ