Advertisement

ಬೆಂಗಳೂರು ಗಲಭೆ: ವಾಜೀದ್‌ ಸಹಚರರ ಸೆರೆ

03:44 AM Aug 20, 2020 | Hari Prasad |

ಬೆಂಗಳೂರು: ಕಾಡುಗೊಂಡನಹಳ್ಳಿ ಮತ್ತು ದೇವರ ಜೀವನಹಳ್ಳಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಪುಲಕೇಶಿ ನಗರದ ಜೆಡಿಎಸ್‌ ಮುಖಂಡ ವಾಜೀದ್‌ ಪಾಷಾನ ನಾಲ್ವರು ಸಹಚರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

Advertisement

ಡಿ.ಜೆ. ಹಳ್ಳಿಯ ತೌಸಿಫ್‌, ಫಾಜಿಲ್‌, ಅಫ್ಜಲ್‌ ಪಾಷಾ ಮತ್ತು ಸಯ್ಯದ್‌ ಬಂಧಿತರು. ಇನ್ನೂ ಆರೇಳು ಮಂದಿ ಪ್ರಮುಖ ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಲಭೆ ಹಿನ್ನೆಲೆಯಲ್ಲಿ ವಿಧಿಸಿರುವ ಕರ್ಫ್ಯೂವನ್ನು ಸಡಿಲಿಸಬೇಕು ಎಂದು ಕೆಲವು ಜನಪ್ರತಿನಿಧಿಗಳ ಜತೆ ಮುಸ್ಲಿಂ ಧರ್ಮಗುರುಗಳು ನಗರ ಪೊಲೀಸ್‌ ಆಯುಕ್ತರನ್ನು ಭೇಟಿಯಾಗಿ ಆಗ್ರಹಿಸಿದ್ದಾರೆ.

ಡಿ.ಜೆ. ಠಾಣೆಗೆ ಆಯುಕ್ತರ ಭೇಟಿ
ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಅವರು ಬುಧವಾರ ಡಿ.ಜೆ. ಹಳ್ಳಿ ಠಾಣೆಗೆ ಭೇಟಿ ನೀಡಿ ಸಿಸಿಬಿಯ ಅಧಿಕಾರಿಗಳು ಹಾಗೂ ಡಿಸಿಪಿಗಳ ಜತೆ ಚರ್ಚಿಸಿದರು.

ಸಮೀವುದ್ದೀನ್‌ ತೀವ್ರ ವಿಚಾರಣೆ
ಆರೆಸ್ಸೆಸ್‌ ಕಾರ್ಯಕರ್ತ ರುದ್ರೇಶ್‌ ಹತ್ಯೆ ಆರೋಪಿಗಳ ಜತೆಗಿನ ಸಂಪರ್ಕ ಹಾಗೂ ಅಲ್‌ – ಹಿಂದ್‌ ಸಂಘಟನೆಯ ಸದಸ್ಯನೂ ಆಗಿರುವ ಸಮೀವುದ್ದೀನ್‌ ವಿಚಾರಣೆಯನ್ನು ಸಿಸಿಬಿ ಅಧಿಕಾರಿ ಗಳು ತೀವ್ರಗೊಳಿಸಿದ್ದಾರೆ. ಸಮೀವುದ್ದೀನ್‌ ಮಡಿಕೇರಿ ಮೂಲದವನಾಗಿದ್ದು, ಹಲವು ವರ್ಷಗಳಿಂದ ಪತ್ನಿ ಜತೆ ನಗರದಲ್ಲಿ ವಾಸವಾಗಿದ್ದಾನೆ. ಈತ ಪತ್ನಿ ಹೆಸರಿನಲ್ಲಿ ಎನ್‌ಜಿಒ ಸಂಸ್ಥೆ ನಡೆಸುತ್ತಿದ್ದು, ಅದಕ್ಕೆ ವಿದೇಶಗಳಿಂದ ಹಣ ಬರುತ್ತಿರುವುದು ಗೊತ್ತಾಗಿದೆ.
ಆತ ಕೋಟಿಗೂ ಅಧಿಕ ಮೊತ್ತದ ಆಸ್ತಿ ಹೊಂದಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದ್ದು, ಹಣದ ಮೂಲವನ್ನು ಶೋಧಿಸಬೇಕಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

Advertisement

73 ಎಫ್‌ಐಆರ್‌
ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಬುಧವಾರದ ವರೆಗೆ 73 ಎಫ್‌ಐಆರ್‌ಗಳು ದಾಖಲಾಗಿವೆ.

ಪ್ರಥಮ್‌ಗೆ ನೋಟಿಸ್‌
ಗಲಭೆ ಸಂಬಂಧಿಸಿ ಸಿನೆಮಾ ನಟ ಹಾಗೂ ಬಿಗ್‌ ಬಾಸ್‌ ಖ್ಯಾತಿಯ ಪ್ರಥಮ್‌ ಸಾಮಾಜಿಕ ಜಾಲತಾಣದಲ್ಲಿ ಸಮುದಾಯವೊಂದರ ಬಗ್ಗೆ ಅವಹೇಳನಕಾರಿ ಪೋಸ್ಟ್‌ ಮಾಡಿದ್ದಾರೆ ಎಂದು ಆರೋಪಿಸಿ ಉಮರ್‌ ಫಾರೂಕ್‌ ಎಂಬವರು ಹಲಸೂರುಗೇಟ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕ್ಲೇಮ್‌ ಕಮಿಷನರ್‌ ನೇಮಕ ಅರ್ಜಿ: ಇಂದು ವಿಚಾರಣೆ
ಗಲಭೆ ಪ್ರಕರಣದಲ್ಲಿ ಉಂಟಾದ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟದ ಅಂದಾಜು ಮಾಡಿ ಹೊಣೆಗಾರಿಕೆ ನಿಗದಿಪಡಿಸಲು ‘ಕ್ಲೇಮ್‌ ಕಮಿಷನರ್‌’ ನೇಮಕ ಮಾಡಲು ಕೋರಿ ರಾಜ್ಯ ಸರಕಾರ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದೆ. ಬುಧವಾರ ಮುಖ್ಯ ನ್ಯಾ| ಎ. ಎಸ್‌. ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಧ್ಯಾನ್‌ ಚಿನ್ನಪ್ಪ ಅವರು ಅರ್ಜಿಯನ್ನು ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next