Advertisement

ಬೆಂಗಳೂರು:ಎಲೆಕ್ಟ್ರಾನಿಕ್ ಸಿಟಿ ಪ್ಲೈ ಓವರ್ ನಿಂದ ಬಿದ್ದು ಬೈಕ್ ಸವಾರ ದುರ್ಮರಣ

06:16 PM Oct 24, 2022 | Team Udayavani |

ಬೆಂಗಳೂರು : ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಪ್ಲೈ ಓವರ್ ರಸ್ತೆಯ ಸ್ಕೈವಾಕ್ ಹತ್ತಿರ ಸೋಮವಾರ ಬೈಕ್ ಅವಘಡ ಸಂಭವಿಸಿ ಸವಾರ ಸ್ಥಳದಲ್ಲೇ ಮೃತ ಪಟ್ಟಿದ್ದಾನೆ. ಮೃತ ಯುವಕ ಆಂಧ್ರ ಮೂಲದ ಕೋರೆ ನಾಗಾರ್ಜುನ (33) ಎನ್ನುವವರಾಗಿದ್ದಾರೆ.

Advertisement

ಬೈಕನ್ನು ಎಲಿವೇಟೆಡ್ ಫ್ಲೈಓವರ್ ರಸ್ತೆ ಯಲ್ಲಿ ಸಿಲ್ಕ್ ಬೋರ್ಡ್ ಕಡೆಯಿಂದ ಎಲೆಕ್ಟ್ರಾನಿಕ್ ಸಿಟಿ ಕಡೆಗೆ ಅತ್ಯಂತ ವೇಗವಾಗಿ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದಿದ್ದು, ತಡೆಗೋಡೆಗೆ ಸ್ವಯಂ ಢಿಕ್ಕಿ ಮಾಡಿಕೊಂಡು ಪ್ಲೈಓವರ್ ಮೇಲಿಂದ ಕೆಳಗಡೆ ಹೊಸೂರು ಮುಖ್ಯ ರಸ್ತೆಯ ಸ್ಕೈವಾಕ್ ಹತ್ತಿರ ಬಿದ್ದ ಪರಿಣಾಮ ತಲೆ ಮತ್ತು ದೇಹದ ಇತರೆ ಭಾಗಗಳಿಗೆ ತ್ರೀರ್ವ ಸ್ವೂರಪದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ದೂರು ದಾಖಲಾಗಿದೆ.

ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next