Advertisement

Bengaluru: ಮಾಟ ಮಾಡಿ ಪತ್ನಿಯಿಂದ ಕೊಲೆಗೆ ಯತ್ನ : ಪತಿ ದಾಖಲಿಸಿದ್ದ ದೂರು ರದ್ದು!

03:46 PM Aug 24, 2024 | Team Udayavani |

ಬೆಂಗಳೂರು: ತನ್ನನ್ನು ಹಾಗೂ ತನ್ನ ತಾಯಿಯನ್ನು ಮಾಟ ಮಾಡಿ ಕೊಲೆ ಮಾಡಲು ಯತ್ನಿಸುತ್ತಿದ್ದಾ ರೆಂದು ಆರೋಪಿಸಿ ಪತ್ನಿಯ ವಿರುದ್ಧ ಪತಿ ದಾಖಲಿ ಸಿದ್ದ ಪ್ರಕರಣವನ್ನು ಹೈಕೋರ್ಟ್‌ ರದ್ದುಗೊಳಿಸಿದೆ. ಬೆಂಗಳೂರಿನ ಮೊಹಮ್ಮದ್‌ ಶಾಹೀದ್‌ ಮತ್ತಿತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠವು, ಪತಿ ದಾಖಲಿಸಿದ್ದ ಖಾಸಗಿ ದೂರನ್ನು ಆಧರಿಸಿ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಪತ್ನಿ ವಿರುದ್ಧ ತನಿಖೆಗೆ ನೀಡಿದ್ದ ಆದೇಶವನ್ನು ರದ್ದುಗೊಳಿಸ ಲಾಗುತ್ತಿದೆ ಎಂದು ಆದೇಶಿಸಿದೆ.

Advertisement

ದೂರಿನ ಬಗ್ಗೆ ಯಾಂತ್ರಿಕವಾಗಿ ತನಿಖೆಗೆ ಆದೇಶಿಸುವ ಮುನ್ನ ನ್ಯಾಯಾಧೀಶರು ಸ್ವಲ್ಪ ವಿವೇಚನೆಯನ್ನು ಬಳಸಬೇಕಿತ್ತು. ಈ ರೀತಿ ಮಾಡಿದ್ದರೆ ನಕಲಿ ಕೇಸನ್ನು ಬುಡದಲ್ಲಿಯೇ ಕಿತ್ತು ಹಾಕಬಹುದಿತ್ತು. ಪತಿ-ಪತ್ನಿ ನಡುವಿನ ಸಾಮಾನ್ಯ ಕೌಟುಂಬಿಕ ಜಗಳಕ್ಕೆ ಮಾಟ ಮಂತ್ರ, ಕಳವು ಮತ್ತು ಕೊಲೆಯತ್ನ ಆರೋಪಗಳನ್ನು ಹೊರಿಸಲಾಗಿದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ.

ಪತ್ನಿ ಸಲ್ಲಿಸಿದ್ದ ವರದಕ್ಷಿಣೆ ಕಿರುಕುಳ ದೂರಿಗೆ ಪ್ರತಿಯಾಗಿ ಪತಿ ಈ ದೂರು ದಾಖಲಿಸಿದ್ದಾರೆ. ಅಲ್ಲದೆ, ತನ್ನ ಜೇಬಿನಿಂದ ಕದ್ದ ಹಣವನ್ನು ಪತ್ನಿ ಕೊಲೆಗೆ ಸುಪಾರಿ ನೀಡಿದ್ದಾರೆಂದು ಪತಿ ಆರೋಪಿಸಿದ್ದಾರೆ. ಈ ಆರೋಪವನ್ನು ಒಪ್ಪಲಾಗದು. ಈ ದೂರು ಸ್ವೀಕಾರಾರ್ಹವಲ್ಲ. ಪತಿ ಅನಗತ್ಯವಾಗಿ ಪತ್ನಿ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ನ್ಯಾಯಪೀಠ ಹೇಳಿದೆ. ಮೊಹಮ್ಮದ್‌ ಶಾಹೀದ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ನಲ್ಲಿ ಬ್ಲ್ಯಾಕ್‌ ಮ್ಯಾಜಿಕ್‌ ಬಳಸಿ ಪತ್ನಿ ತನ್ನನ್ನು, ತನ್ನ ತಾಯಿಯನ್ನು ಕೊಲೆ ಮಾಡಲು ಯತ್ನಿಸುತ್ತಿದ್ದಾ ರೆಂದು 2023ರ ಫೆ.21ರಂದು ಖಾಸಗಿ ದೂರು ದಾಖಲಿಸಿದ್ದರು. ಆ ಕುರಿತು ವಿಚಾರಣೆ ನಡೆಸಿದ ನ್ಯಾಯಾಧೀಶರು ತನಿಖೆಗೆ ಆದೇಶಿಸಿದ್ದರು. ಅದರಂತೆ ಪೊಲೀಸರು ಎಫ್‌ಐಆರ್‌ ದಾಖಲಿಸಿ ತನಿಖೆ ಆರಂಭಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next