Advertisement
ನಿವೃತ್ತ ಬ್ಯಾಂಕ್ ವ್ಯವಸ್ಥಾಪಕ ನಾಗೇಶ್ವರ ರಾವ್, ಹಾಸನ ಜಿಲ್ಲೆ ಚನ್ನರಾಯಪಣ್ಣದ ಕಲ್ಪನಾ, ದಿಲೀಪ್, ತರುಣಾ, ಗೌತಮ್, ಚಾಲಕ ಮಂಜು ಬಂಧಿತರು.
Related Articles
Advertisement
ನಾಗೇಶ್ವರ ರಾವ್, ಸಜರಿತಾ ಹಾಗೂ ಚಾಲಕ ಮಂಜು ಸಮ್ಮುಖದಲ್ಲಿ ಶಾಂತಿ ಅವರಿಂದ ಕಲ್ಪನಾ 15 ಲಕ್ಷ ರೂ. ಪಡೆದಿದ್ದರು. 15 ದಿನಗಳ ಬಳಿಕ ಹಣ ವಾಪಸ್ ಕೇಳಿದಾಗ, ಕಪ್ಪು ಹಣವನ್ನು ಕಾನೂನು ಬದ್ಧವಾಗಿ ಪರಿವರ್ತಿಸಲು 100 ಕೋಟಿಗೆ ಶೇ.30ರಂತೆ 30 ಕೋಟಿ ಪಾವತಿಸಬೇಕಿದೆ. ತಮ್ಮ ಹಣಕ್ಕೆ 10 ಪಟ್ಟು ಹೆಚ್ಚು ಹಣ ನೀಡುತ್ತೇವೆ. ಜೊತೆಗೆ 2 ಕೆ.ಜಿ ಚಿನ್ನ, 20 ಕೆ.ಜಿ ಬೆಳ್ಳಿ ವಿಗ್ರಹ ನೀಡುತ್ತೇವೆ. ಈ ವ್ಯವಹಾರದಲ್ಲಿ ಆರ್‌ಬಿಐ ಅಧಿಕಾರಿಗಳು ನಮ್ಮೊಂದಿಗೆ ಇದ್ದಾರೆ. ಬಂಧಿತರ ಪೈಕಿ ಒಬ್ಬ ಶಾಂತಿ ಅವರಿಗೆ ಕರೆ ಮಾಡಿ ತಾನು ಇ.ಡಿ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ನಂಬಿಸಿದ್ದ.
ಗೋದಾಮಿನಲ್ಲಿರುವ ಹಣದ ಕಂತೆಗಳಿಗೆ ಔಷಧಿ ಹಾಕಬೇಕು. ಇಲ್ಲದಿದ್ದರೆ ಹಣವು ಒಂದಕ್ಕೊಂದು ಅಂಟಿಕೊಂಡು ನಾಶವಾಗುತ್ತದೆ. ಹಣವನ್ನು ಈಗಲೇ ಕೊಟ್ಟರೆ 2 ದಿನಗಳಲ್ಲಿ 10 ಪಟ್ಟು ಹೆಚ್ಚಿನ ಹಣ ಕೊಡುವುದಾಗಿ ನಂಬಿಸಿದ್ದರು. ಇದನ್ನು ನಂಬಿದ ದೂರುದಾರೆ ಶಾಂತಿ ಸೇರಿದಂತೆ ನಾಲ್ವರು 4 ಕೋಟಿ ರೂ.ವನ್ನು ಹಂತ-ಹಂತವಾಗಿ ಆರೋಪಿಗಳಿಗೆ ನೀಡಿದ್ದರು.
ನಂತರ ಆರೋಪಿಗಳು ಲಾಭವನ್ನೂ ನೀಡದೇ, ಅಸಲು ದುಡ್ಡನ್ನು ಕೊಟ್ಟಿರಲಿಲ್ಲ. ಈ ಬಗ್ಗೆ ನಾಲ್ವರು ಪ್ರಶ್ನಿಸಿದಾಗ ದುಡ್ಡು ಕೊಡುವುದಿಲ್ಲ. ಇನ್ನು ಹಣ ಕೇಳಿದರೆ ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಬೆದರಿಕೆ ಹಾಕಿದ್ದರು. ಆರೋಪಿಗಳು ನಾಲ್ವರಿಂದ 4 ಕೋಟಿ ರೂ. ಪಡೆದು ವಂಚಿಸಿರುವುದು ಕಂಡು ಬಂದಿದೆ. ಘಟನೆ ಸಂಬಂಧ ಹೆಬ್ಟಾಳ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.