ಬೆಂಗಳೂರು: ನಗರದ ಜಯನಗರದಲ್ಲಿ ಶನಿವಾರ ಎರಡು ಕಾರು ಒಂದು ಬೈಕನ್ನು ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದು, ಕೋಟ್ಯಂತರ ರೂ. ಹಣ ಪತ್ತೆಯಾಗಿದೆ.
ಬೈಕ್ನಲ್ಲಿ ಒಂದು ಬ್ಯಾಗ್, ಎರಡು ಕಾರುಗಳಲ್ಲಿ ತಲಾ ಒಂದು ಬ್ಯಾಗ್ ಜಪ್ತಿ ಮಾಡಲಾಗಿದೆ. ಕಾರಿನಲ್ಲಿದ್ದ ಐವರು ಸ್ಥಳದಿಂದ ಪರಾರಿಯಾ ಗಿದ್ದಾರೆ. ಜಪ್ತಿ ಮಾಡಲಾದ ಹಣವನ್ನು ಚುನಾವಣಾಧಿಕಾರಿಗಳು ಪೊಲೀಸ್ ಠಾಣೆಗೆ ತಂದಿದ್ದು ಎಣಿಸಲು ಕೌಂಟಿಂಗ್ ಮೆಷಿನ್ ತರಿಸಿಕೊಂಡಿದ್ದಾರೆ. ಎಷ್ಟು ಹಣ ಪತ್ತೆಯಾಗಿದೆ ಎನ್ನುವ ವಿವರ ಇನ್ನಷ್ಟೇ ಲಭ್ಯವಾಗಬೇಕಾಗಿದೆ.
ನೋಡಲ್ ಅಧಿಕಾರಿ ಮನೀಷ್ ಮೌದ್ಗಿಲ್ ಸ್ಥಳಕ್ಕೆ ಆಗಮಿಸಿ ಮಾಹಿತಿ ನೀಡಿದ್ದು,ಹಣ ಸಾಗಿಸುತ್ತಿದ್ದ ಬಗ್ಗೆ ನಮಗೆ ಒಂದು ಕರೆ ಬಂದಿದ್ದು, ಚುನಾವಣಾಧಿಕಾರಿ ವಿನೋದಪ್ರಿಯ ಸ್ಥಳಕ್ಕೆ ಭೇಟಿ ನೀಡಿ ಹಣವನ್ನು ವಶಕ್ಕೆ ಪಡೆಡಿದ್ದಾರೆ. ಲೆಕ್ಕ ನಡೆಯುತ್ತಿದ್ದು 1 ಕೋಟಿ ರೂ.ಗೂ ಹೆಚ್ಚು ಹಣ ಇದ್ದು ಕಾರು ಯಾರದ್ದು ಎನ್ನುವ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತನಿಖೆಗೆ ಇಳಿದಿದ್ದು, ಬೈಕ್ ಧನಂಜಯ ಎಂಬುವರಿಗೆ ಸೇರಿದ್ದು, ಕಾರು ಸೋಮಶೇಖರ್ ಎನ್ನುವವರಿಗೆ ಸೇರಿದ್ದು ಎಂದು ಹೇಳಲಾಗಿದೆ.
ಕಾರಿನಲ್ಲಿದ್ದ ದಾಖಲಾತಿಗಳನ್ನ ಚುನಾವಣಾಧಿಕಾರಗಳು ವಶಕ್ಕೆ ಪಡೆದಿದ್ದು, ಮೊಬೈಲ್ ಮತ್ತು ದಾಖಲಾತಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.