Advertisement
ಪಶ್ಚಿಮ ಬಂಗಾಲದ ಮಹಿಳೆಯರ ಸಾಂಪ್ರದಾಯಿಕ ಉಡುಗೆ ಹತ್ತಿ ಅಥವಾ ರೇಶ್ಮೆಯಿಂದ ಮಾಡಿರುವ ಸೀರೆ. ಕಲ್ಕತ್ತಾ ಕಾಟನ್ ಸೀರೆಗಳೆಂದೇ ಪ್ರಸಿದ್ಧವಾಗಿರುವ ಕೆಂಪು ಮಿಶ್ರಿತ ಕಂದು ಬಣ್ಣದ ಅಂಚು ಮತ್ತು ಬಿಳಿಯ ಬಣ್ಣದ ಸಮಾವೇಶ ಹೊಂದಿರುವ ಸರಳ ಉಡುಗೆ ಉಡಲೂ ಸುಲಭ ಹಾಗೂ ಆರಾಮದಾಯಕ.
Related Articles
Advertisement
ಢಕಾಯಿ ಜಮದಾನಿ ಸೀರೆಇದು ಪ್ರಾಚೀನ ಕಾಲದಲ್ಲಿ ಢಾಕಾ ಪ್ರದೇಶದಿಂದ ಮೂಲ ಸ್ವರೂಪವನ್ನು ಪಡೆದಿದ್ದು, ತದನಂತರ ಪಶ್ಚಿಮ ಬಂಗಾಳದ ನೇಯ್ಗೆಕಾರರ ಕೈಗಳಲ್ಲಿ ವಿನೂತನ ಶೈಲಿಯನ್ನು, ಪ್ರಾದೇಶಿಕ ವಿಶೇಷತೆಯನ್ನು ಪಡೆದುಕೊಂಡಿತು. ಈ ಸೀರೆಯ ವೈಶಿಷ್ಟತೆ ಅಡಗಿರುವುದು “ಪನ್ನಾ ಹಜಾರ್’ ಎಂದು ಕರೆಯಲಾಗುವ ವಿಶೇಷ ಆಕರ್ಷಕ ವಿನ್ಯಾಸದಲ್ಲಿ. ಈ ಸೀರೆಯ ತಯಾರಿಗೆ ಸಮಯವೂ ಬಹಳ ಕಾಲ ಬೇಕಾಗಿದೆ. ಆದರೆ, ಅಷ್ಟೇ ಕಾಲಾತೀತ. ಕಲಾವಂತಿಕೆಯ ಮೆರುಗಿನಿಂದ ಬಹುಕಾಲ ಬಾಳಿಕೆ ಹೊಂದಿರುವ ಹಾಗೂ ಬೇಡಿಕೆ ಹೊಂದಿರುವ ಸೀರೆ ಇದಾಗಿದೆ. ಬಂಗಾರದ ಹಾಗೂ ಬೆಳ್ಳಿಯ ನೂಲುಗಳಿಂದ, ಆಕರ್ಷಕ ಹೂವಿನ ವಿನ್ಯಾಸಗಳಿಂದ ಈ ಸೀರೆಯನ್ನು ನೇಯಲಾಗುತ್ತದೆ. ಜಮದಾನಿ ಶೈಲಿಯ ಸೀರೆಯೇ ಎಂದು ಹೆಸರು ಪಡೆದಿರುವ ಈ ಪಶ್ಚಿಮ ಬಂಗಾಳದ ಸೀರೆ ಭಾರತದ ಎಲ್ಲೆಡೆಯೂ ಬೇಡಿಕೆ ಹೊಂದಿರುವುದರ ಜೊತೆಗೆ ವಿಶ್ವದ ಹಲವು ಭಾಗಗಳಿಗೂ ರಫ್ತಾಗುತ್ತದೆ. ಬಲೂಚರಿ ಸೀರೆ
ಮುರ್ಶಿ ದಾಬಾದ್ ಎಂಬ ಜಿಲ್ಲೆಯ ಸಣ್ಣ ಪ್ರದೇಶದಲ್ಲಿ ಆರಂಭವಾದ ಈ ಸೀರೆಯ ಮಹತ್ವವೆಂದರೆ ವಿಶೇಷ ಹಾಗೂ ಲಘುವಾದ ರೇಶೆ¾ಯ ಬಟ್ಟೆಗೆ ಚಿನ್ನದ ಜರಿಯ ಚಾರಿತ್ರಿಕ ವಿನ್ಯಾಸಗಳಿಂದ ಅಲಂಕರಿಸಲಾಗುತ್ತದೆ. ಅಂತೆಯೇ ಪೌರಾಣಿಕ ಮಹಣ್ತೀದ ಕಸೂತಿ ವಿನ್ಯಾಸಗಳಿಂದ, ವೈಭವೋಪೇತವಾಗಿ ಕಾಣುವ ಈ ಸೀರೆ ಬಂಗಾಲದ ದುಬಾರಿ ಬಗೆಯ ಸೀರೆಗಳಲ್ಲಿ ಒಂದು. ಟಂಟ್ ಸೀರೆ
ಮಗ್ಗದ ಈ ಸೀರೆಗಳು ಹತ್ತಿಯಿಂದ ತಯಾರಾಗಿದ್ದು, ಕೊರಿಯಲ್ ಮತ್ತು ಗಡದ್ ಬಗೆಯ ಬಂಗಾಲಿ ಹತ್ತಿ ಸೀರೆಗಳಂತೆ ಜನಸಾಮಾನ್ಯರ ನಿತ್ಯದ ಉಡುಗೆ-ತೊಡುಗೆಯಾಗಿ ಈ ಸೀರೆ ಜನಪ್ರಿಯ. ತುಂಬಾ ಲಘುವಾಗಿರುವ ಈ ಸೀರೆ ಪಶ್ಚಿಮ ಬಂಗಾಲದ ಅಧಿಕ ಉಷ್ಣತೆಯ ಹವಾಮಾನಕ್ಕೆ ಉಡಲು ಆರಾಮದಾಯಕವಾಗಿರುವ ಸೀರೆ. ಮಸ್ಲಿನ್ ಹತ್ತಿ ಸೀರೆಗಳು
ಹತ್ತಿಯ ಬಟ್ಟೆಯೊಂದಿಗೆ ಮಸ್ಲಿನ್ ಬಟ್ಟೆಯ ಲಘುತ್ವ ಹಾಗೂ ಹೊಳಪು ಹೊಂದಿದ್ದು, ಈ ಸೀರೆ ಆಕರ್ಷಕವಾಗಿದೆ. ಇದರ ತಯಾರಿ ಗಾಢವಲ್ಲದ ಬಣ್ಣಗಳಿಂದ ಕೂಡಿದೆ. ಈ ಸೀರೆ ಜನಸಾಮಾನ್ಯರ ಕೈಗೆಟುಕುವ ಸೀರೆಯೂ ಹೌದು. ವಿಶೇಷ ಸಮಾರಂಭಗಳಿಗಾಗಿ ಅಧಿಕ ಬೆಲೆ ಬಾಳುವ ದುಬಾರಿ ಮಸ್ಲಿನ್ ಹತ್ತಿ ಸೀರೆಗಳೂ ಇವೆ. ಕಾಂತಾ ಸಿಲ್ಕ್ ಸೀರೆ
ಕೈಮಗ್ಗದ ಈ ಸೀರೆಗಳು ಶಾಂತಿನಿಕೇತನ ಭಾಗದ ಬಂಗಾಲಿ ಸೀರೆಗಳು. ಬಗೆ ಬಗೆಯ ವಿನ್ಯಾಸಗಳಿಂದ ವೈಶಿಷ್ಟಪೂರ್ಣವಾಗಿವೆ.