ಕೋಲ್ಕತ್ತಾ : ತೃಣಮೂಲ ಕಾಂಗ್ರೆಸ್ ಪಶ್ಚಿಮ ಬಂಗಾಳವನ್ನು ಮತ್ತೊಂದು ಕಾಶ್ಮೀರವನ್ನಾಗಿ ಮಾಡಲು ಉತ್ಸುಕವಾಗಿದ ಎಂದು ಬಿಜಪಿ ನಾಯಕ, ನಂದಿಗ್ರಾಮ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಸುವೇಂದು ಕುಮಾರ್ ಹೇಳಿದ್ದಾರೆ.
ಇನ್ನು, ಶ್ಯಾಮ್ ಸುಂದರ್ ಮುಖರ್ಜಿ ಅವರನ್ನು ಕೂಡ ಈ ಸಂದರ್ಭ ಉಲ್ಲೇಖಿಸಿದ್ದು, ದಿವಂಗತ ಜನ ಸಂಘದ ಸ್ಥಾಪಕ ಇಲ್ಲದಿದ್ದಿದ್ದರೆ, ಭಾರತ ಭಾಂಗ್ಲಾದೇಶದಂತೆ ಇಸ್ಲಾಮಿಕ್ ರಾಷ್ಟ್ರವಾಗುತ್ತಿತ್ತು ಎಂದೂ ಸಹ ಹೇಳಿದ್ದಾರೆ.
ಓದಿ : ಆಧುನಿಕ ಯುಗದ ಗ್ರಾಫಿಕ್ಸ್ ಗೆ ಬಲಿಪಶುವಾಗುವ ಭಯ ಕಾಡುತ್ತಿದೆ: ಸಿ.ಪಿ. ಯೋಗೇಶ್ವರ್
ಶ್ಯಾಮ್ ಪ್ರಸಾದ್ ಮುಖರ್ಜಿ ಇಲ್ಲದಿದ್ದಿದ್ದರೆ, ಈ ದೇಶ ಬಾಂಗ್ಲಾದೇಶದಂತೆ ಇಸ್ಲಾಮಿಕ್ ರಾಷ್ಟ್ರವಾಗುತ್ತಿತ್ತು, ನಾವು ಬಾಂಗ್ಲಾದೇಶದಲ್ಲಿ ಬದುಕಬೇಕಿತ್ತು, ಒಂದು ವೇಳೆ ಪಶ್ಚಿಮ ಬಂಗಾಳದಲ್ಲಿ ಮತ್ತೆ ತೃಣಮೂಲ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪಶ್ಚಿಮ ಬಂಗಾಳ ಮತ್ತೊಂದು ಕಾಶ್ಮೀರವಾಗುತ್ತದೆ ಎಂದು ಮುಚಿಪಾರ ಹಾಗೂ ಬೆಹಾಲದಲ್ಲಿ ಚುನಾವಣಾ ಮತ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ ಅಧಿಕಾರಿ ಈ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
Related Articles
ಫೆಬ್ರವರಿ 14 ರಂದು ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್ ‘ಜೈ ಬಾಂಗ್ಲಾ’ ಘೋಷಣೆಯನ್ನು ಆಮದು ಮಾಡಿಕೊಳ್ಳುವುದರ ಮೂಲಕ ಪಶ್ಚಿಮ ಬಂಗಾಳವನ್ನು ಬಾಂಗ್ಲಾದೇಶವನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ ಎಂದು ಅಧಿಕಾರಿ ಆರೋಪಿಸಿದ್ದರು.
ಸಂಸದ ಶಮೀಮ್ ಉಸ್ಮಾನ್ ನಾಲ್ಕು ವರ್ಷಗಳ ಹಿಂದೆ “ಖೆಲಾ ಹೋಬ್” ಘೋಷಣೆ ಬಾಂಗ್ಲಾದೇಶದ ನಾರಾಯಂಗಂಜ್ ನಲ್ಲಿ ಮೊದಲು ಬಳಕೆಗೆ ತಂದಿದ್ದರು. ತೃಣಮೂಲ ಕಾಂಗ್ರೆಸ್ ಪಶ್ಚಿಮ ಬಂಗಾಳವನ್ನು ಬಾಂಗ್ಲಾದೇಶವಾಗಿ ಪರಿವರ್ತಿಸಲು ಬಯಸಿದೆ, ಹಾಗಾಗಿ ‘ಜೈ ಬಾಂಗ್ಲಾ’ ಘೋಷಣೆಯನ್ನು ಅವರು ಆಮದು ಮಾಡಿಕೊಂಡಿದ್ದಾರೆ. ‘ಭಾರತ್ ಮಾತಾ ಕಿ ಜೈ’ ಹಾಗೂ ‘ಜೈ ಶ್ರೀರಾಮ್’ ನಮ್ಮ ಘೋಷಣೆ ಎಂದು ಮಾಧ್ಯಮದವರಿಗೆ ಅಧಿಕಾರಿ ಪ್ರತಿಕ್ರಿಯಿಸಿದ್ದಾರೆ.
ಸುವೇಂದು ಅಧಿಕಾರಿಯವರ ಈ ಹೇಳಿಕೆಗೆ ಟ್ವೀಟರ್ ನಲ್ಲಿ ಪ್ರತಿಕ್ರಿಯಿಸಿದ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ, ಬಿಜೆಪಿಯವರ ಪ್ರಕಾರ, ಆಗಷ್ಟ್ 2019ರ ನಂತರ ಸ್ವರ್ಗವಾಗಿದೆ. ಹಾಗಾದಲ್ಲಿ ಪಶ್ಚಿಮ ಬಂಗಾಳ ಕಾಶ್ಮೀರದಂತಾದರೆ ಏನು ತಪ್ಪಿದೆ..? ಎಂದು ಅವರು ಬರೆದು ಕೊಂಡಿದ್ದಾರೆ.
ಓದಿ : 7,500ನೇ ಜನೌಷಧಿ ಕೇಂದ್ರವನ್ನು ದೇಶಕ್ಕೆ ಅರ್ಪಿಸಿದ ಪ್ರಧಾನಿ..!