ನೆಲಮಂಗಲ: ಉಡವನ್ನು ಕೊಂದು ಮಾಂಸವನ್ನು ಟೆಂಪೋ ಮೂಲಕ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ತಾಲೂಕು ಅರಣ್ಯ ಅಧಿಕಾರಿಗಳು ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದ್ದಾರೆ.
ಮಲ್ಲಪ್ಪ ಬಿ ಮುತ್ತಣ್ಣನವರ್(31) ಬಂಧಿತ ಆರೋಪಿ. ಈ ನೆಲಮಂಗಲದಿಂದ ಬೆಂಗಳೂರು ಮಾರ್ಗವಾಗಿ ಟೆಂಪೋದಲ್ಲಿ ಉಡದ ಮಾಂಸವನ್ನು ಫ್ರೈ ಮಾಡಿಕೊಂಡು ಸಂಚರಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಮಾದ ನಾಯಕನಹಳ್ಳಿಯ ರಾಷ್ಟ್ರೀಯ ಹೆದ್ದಾರಿ ಸಮೀ ಪದಲ್ಲಿ ದಾಳಿ ಮಾಡಿದ ವಲಯ ಅರಣ್ಯಾಧಿಕಾರಿ ಲಶ್ಕರ್ ನೇತೃತ್ವದ ಅಧಿಕಾರಿಗಳ ತಂಡ, ಆರೋಪಿಯನ್ನು ಬಂಧಿಸಿದೆ. 600 ಗ್ರಾಂ ಫ್ರೈ ಮಾಡಿರುವ ಉಡದ ಮಾಂಸ ಹಾಗೂ ಟೆಂಪೋವನ್ನುವಶಕ್ಕೆ ಪಡೆದುಕೊಳ್ಳಲಾಗಿದ್ದು, ವನ್ಯಜೀವಿ ಸಂರಕ್ಷಣಾ ಕಾಯ್ದೆಯಅನ್ವಯ ದೂರು ದಾಖಲು ಮಾಡಲಾಗಿದೆ ಎಂದು ಸಹಾಯಕ ಅರಣ್ಯಸಂರಕ್ಷಣಾಧಿಕಾರಿ ಸುಬ್ಬರಾವ್ ತಿಳಿಸಿದರು.
ತನಿಖೆ ಆರಂಭ: ಉಡವನ್ನು ಕೊಂದು ಮಾಂಸವನ್ನು ಸಾಗಾಟ ಮಾಡುತ್ತಿರುವ ಹಿನ್ನೆಲೆಯಲ್ಲಿ ಅನೇಕ ವ್ಯಕ್ತಿಗಳು ಈ ಪ್ರಕರಣದಲ್ಲಿರುವುದು ಕಂಡು ಬಂದಿದೆ. ಉಡವನ್ನು ಸೆರೆ ಹಿಡಿದಿದ್ದು ಎಲ್ಲಿ? ಯಾರುಆರೋಪಿಯ ಜೊತೆಯಾಗಿದ್ದರು? ಮಾಂಸವನ್ನು ಫ್ರೈ ಮಾಡಿದ್ದು ಎಲ್ಲಿ, ಎಲ್ಲಿಗೆ ಸಾಗಾಟ ಮಾಡುತ್ತಿದ್ದರು ಎಂಬ ಸಮಗ್ರ ಮಾಹಿತಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಕಲೆಹಾಕುತ್ತಿದ್ದಾರೆ. ವಿಶೇಷ ತಂಡದ ಮೂಲಕ ಹೆಚ್ಚಿನ ತನಿಖೆ ಆರಂಭಿಸಿದ್ದಾರೆ.
ಮಾಹಿತಿ ನೀಡಿ: ವನ್ಯಜೀವಿಗಳನ್ನು ಬೇಟೆ ಆಡುವುದು, ಸಾಗಾಟ ಮಾಡುವುದು, ಉಡಗಳಂತಹ ಅಳಿವಿನಂಚಿನ ಪ್ರಾಣಿಗಳನ್ನು ಸೆರೆಹಿ ಡಿಯುವುದು ಕಂಡುಬಂದರೆ ತಕ್ಷಣ ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಗಳು ಅಥವಾಮೇಲಧಿಕಾರಿಗಳಿಗೆ ಮಾಹಿತಿ ನೀಡಬೇಕು, ಮಾಹಿತಿ ನೀಡಿದವರ ಹೆಸರುಗಳನ್ನು ಗೌಪ್ಯವಾಗಿ ಇಟ್ಟು ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ ಎಂದು ವಲಯ ಅರಣ್ಯಾಧಿಕಾರಿ ಲಶ್ಕರ್ ತಿಳಿಸಿದರು.