ಕೋಲ್ಕತ್ತಾ : 10 ಲಕ್ಷ ರೂಪಾಯಿಗಳ ಮಿತಿಯನ್ನು ಹೊಂದಿರುವ ಕ್ರೆಡಿಟ್ ಕಾರ್ಡ್ ನನ್ನು ವಿದ್ಯಾರ್ಥಿಗಳಿಗಾಗಿ ಬಿಡುಗಡೆ ಮಾಡುವುದಾಗಿ ಇಂದು(ಬುಧವಾರ, ಜೂನ್ 30) ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭರವಸೆ ನೀಡಿದ್ದಾರೆ.
ಆನ್ ಲೈನ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದೀದಿ, ಬಂಗಾಳದಲ್ಲಿ ವಾಸವಾಗಿರುವ 10 ವರ್ಷ ಮೇಲ್ಪಟ್ಟ ಹಾಗೂ 40 ವರ್ಷದೊಳಗಿನವರು ಈ ವಿದ್ಯಾರ್ಥಿ ಕ್ರೆಡಿಕಟ್ ಕಾರ್ಡ್ ಗೆ ಅರ್ಹನಾಗಿರುತ್ತಾನರೆ. ಭಾರತದಲ್ಲಿ ಅಥವಾ ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಸಾಲ ಪಡೆಯಲು ಈ ಕ್ರೆಡಿಟ್ ಕಾರ್ಡ್ ನನ್ನು ಬಳಸಬಹುದು. “ಈ ಸಾಲಕ್ಕೆ ಯಾವುದೇ ಗ್ಯಾರಂಟಿ ಅಗತ್ಯವಿಲ್ಲ. ರಾಜ್ಯವು ಖಾತರಿಪಡಿಸುತ್ತದೆ”. ಇದು ರಾಜ್ಯ ಸರ್ಕಾರದ “ಅನನ್ಯ ಯೋಜನೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : ‘ಮಾರೊ ಜಾವೊ’:ಸಮಸ್ಯೆ ಹೇಳಿಕೊಂಡು ಬಂದ ಪೋಷಕರಿಗೆ ಮ.ಪ್ರ ಶಿಕ್ಷಣ ಸಚಿವರ ಉದ್ಧಟತನದ ಉತ್ತರ
ಭಾರತದಲ್ಲಿ ಅಥವಾ ವಿದೇಶದಲ್ಲಿ ಪದವಿಪೂರ್ವ, ಸ್ನಾತಕೋತ್ತರ, ಡಾಕ್ಟರೇಟ್ ಮತ್ತು ಪೋಸ್ಟ್ ಡಾಕ್ಟರೇಟ್ ಅಧ್ಯಯನಕ್ಕೆ ಹಾಗೂ . ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್ ತರಗತಿಗಳಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಈ ಕ್ರೆಡಿಟ್ ಕಾರ್ಡ್ ಸಾಲ ಯೋಜನೆ ಲಭ್ಯವಿರಲಿದೆ ಎಂದು ಅವರು ತಿಳಿಸಿದ್ದಾರೆ.
ಈ ಕ್ರೆಡಿಟ್ ಕಾರ್ಡ್ ನ ಮೂಲಕ ಸಾಲವನ್ನು ಸಾಲವನ್ನು ಯಾವುದೇ ಬ್ಯಾಂಕ್‌ನಿಂದ ತೆಗೆದುಕೊಳ್ಳಬಹುದು – ಸರ್ಕಾರಿ ಅಥವಾ ಖಾಸಗಿ – ಅಥವಾ ಸಹಕಾರಿ ಸಂಸ್ಥೆಗಳಿಂದ ಕೋರ್ಸ್ ಶುಲ್ಕ, ಬೋಧನೆ, ಹಾಸ್ಟೆಲ್ ಶುಲ್ಕ, ಪುಸ್ತಕಗಳು, ಅಧ್ಯಯನ ಸಾಮಗ್ರಿಗಳು, ಕಂಪ್ಯೂಟರ್ ಅಥವಾ ಲ್ಯಾಪ್ ಟಾಪ್‌ಗಳಿಗಾಗಿ ತೆಗೆದುಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.
ಕಾರ್ಡ್ ನ ಮೂಲಕ 10 ಲಕ್ಷ ಸಾಲ ತೆಗೆದುಕೊಳ್ಳುವ ಯಾವುದೇ ವಿದ್ಯಾರ್ಥಿ ಅದನ್ನು ಮರುಪಾವತಿಸಲು 15 ವರ್ಷಗಳನ್ನು ಕಾಲಾವಧಿಯನ್ನು ಹೊಂದಿರುತ್ತಾನೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಕೋವಿಡ್ ನಿಂದ ಪತ್ನಿ ಸಾವು : ಖಿನ್ನತೆಯಿಂದ ಇಬ್ಬರು ಮಕ್ಕಳೊಂದಿಗೆ ನೇಣಿಗೆ ಶರಣಾದ ಪತಿ.!