Advertisement
ನಾಸಿರುದ್ದೀನ್ ಶಾ ಮತ್ತು ಅವರ ಪತ್ನಿ ರತ್ನಾ ಪಾಠಕ್ ಅವರು ಬೆಂಬಲ ಸೂಚಿಸಿ ನೀಡಿರುವ ಸಂದೇಶದ ವೀಡಿಯೊವನ್ನು ಸೈರಾ ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅವರು ತಮ್ಮ ಸೋದರ ಸೊಸೆಯಾಗಿರುವ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಅಭ್ಯರ್ಥಿ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Related Articles
Advertisement
“ಕುಟುಂಬ ಸಂಬಂಧಗಳನ್ನು ಬದಿಗಿಟ್ಟು, ಯಾವಾಗಲೂ ಧೈರ್ಯಶಾಲಿ ಮತ್ತು ಪ್ರಾಮಾಣಿಕತೆಯ ಕಾಳಜಿಯುಳ್ಳ ವ್ಯಕ್ತಿ ಸೈರಾ ಎಂದು ಕಂಡುಕೊಂಡಿದ್ದೇನೆ, ಅವರು ಯಾವಾಗಲೂ ತಳ ಮಟ್ಟದ ಜನರಿಗೆ ಸಹಾಯ ಮಾಡಲು ಉತ್ಸುಕರಾಗಿದ್ದಾರೆ. ಅವರು ನಮ್ಮ ಹಕ್ಕುಗಳ ಧ್ವನಿ ರಕ್ಷಕರಾಗಿದ್ದಾರೆ, ”ಎಂದು ಅವರು ಹೇಳಿದ್ದಾರೆ.
ಟಿಎಂಸಿ ಅಭ್ಯರ್ಥಿಯಾಗಿ ಮಾಜಿ ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ ಮತ್ತು ಬಿಜೆಪಿ ಅಭ್ಯರ್ಥಿಯಾಗಿ ಕಿಯಾ ಘೋಷ್ ಅವರು ಕಣದಲ್ಲಿದ್ದಾರೆ.