Advertisement

ಬಿರ್ ಭೂಮ್ ಹಿಂಸಾಚಾರ; ಬಂಗಾಳ ವಿಧಾನಸಭೆಯಲ್ಲಿ ಘರ್ಷಣೆ, 5 ಬಿಜೆಪಿ ಶಾಸಕರ ಅಮಾನತು

01:44 PM Mar 28, 2022 | Team Udayavani |

ಕೋಲ್ಕತಾ: ಇತ್ತೀಚೆಗೆ ಬಿರ್ ಭೂಮ್ ನಲ್ಲಿ ನಡೆದ ಎಂಟು ಜನರ ಸಜೀವ ದಹನ ಪ್ರಕರಣದ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ (ಮಾರ್ಚ್ 28) ಪಶ್ಚಿಮಬಂಗಾಳದ ವಿಧಾನಸಭೆಯಲ್ಲಿ ವಿರೋಧ ಪಕ್ಷದ ಭಾರತೀಯ ಜನತಾ ಪಕ್ಷದ ಶಾಸಕರು ಕೋಲಾಹಲ ಎಬ್ಬಿಸಿದ್ದು, ಐವರು ಬಿಜೆಪಿ ಶಾಸಕರನ್ನು ಅಮಾನತುಗೊಳಿಸಿದ ಘಟನೆ ನಡೆದಿದೆ.

Advertisement

ಇದನ್ನೂ ಓದಿ:ಬದುಕಿರುವ ಎಸ್ಎಸ್ಎಲ್ ಸಿ ವಿದ್ಯಾರ್ಥಿಗೆ ತಿಥಿ ಪೂಜೆ : ಆತಂಕದಲ್ಲಿ ಪೋಷಕರು

ವರದಿಯ ಪ್ರಕಾರ, ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷದ ಶಾಸಕರು ಹಾಗೂ ವಿಪಕ್ಷದ ಬಿಜೆಪಿ ಶಾಸಕರ ನಡುವೆ ವಿಧಾನಸಭೆ ಕಲಾಪದಲ್ಲಿ ಬಿರ್ ಭೂಮ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆದು, ಕಲಾಪಕ್ಕೆ ಅಡ್ಡಿಯನ್ನುಂಟು ಮಾಡಿರುವುದಾಗಿ ತಿಳಿಸಿದೆ.

ಕಲಾಪದಲ್ಲಿ ಬಿಜೆಪಿ ಶಾಸಕರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದರಿಂದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜೀನಾಮೆ ನೀಡಬೇಕೆಂದು ಪಟ್ಟು ಹಿಡಿದು ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದರು.

ಬಿರ್ ಭೂಮ್ ಹಿಂಸಾಚಾರದ ವಿಚಾರದಲ್ಲಿ ಟಿಎಂಸಿ ಮತ್ತು ಬಿಜೆಪಿ ಶಾಸಕರ ನಡುವೆ ಘರ್ಷಣೆ ನಡೆದಿದ್ದು, ಅನುಚಿತವಾಗಿ ವರ್ತಿಸಿದ ಸುವೇಂದು ಅಧಿಕಾರಿ ಸೇರಿದಂತೆ 5 ಬಿಜೆಪಿ ಶಾಸಕರನ್ನು ಸ್ಪೀಕರ್ ಅಮಾನತುಗೊಳಿಸಿರುವುದಾಗಿ ವರದಿ ವಿವರಿಸಿದೆ.

Advertisement

ಕಲಾಪದಲ್ಲಿ ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚಿಸಲು ನಾವು (ಬಿಜೆಪಿ) ಬೇಡಿಕೆಯನ್ನು ಇಟ್ಟರೂ ಕೂಡಾ ಸರ್ಕಾರ ಅದನ್ನು ತಿರಸ್ಕರಿಸಿದೆ. ಪಶ್ಚಿಮಬಂಗಾಳ ಸರ್ಕಾರ ಕೋಲ್ಕತಾ ಪೊಲೀಸರನ್ನು ಸಿವಿಲ್ ಡ್ರೆಸ್ ನಲ್ಲಿ ಕಲಾಪಕ್ಕೆ ಕರೆಯಿಸಿದ್ದು, ಇದರಿಂದಾಗಿ ಘರ್ಷಣೆ ಉಂಟಾಗಿರುವುದಾಗಿ ಸುವೇಂದು ಅಧಿಕಾರಿ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next