Advertisement
249ಸಿಸಿಯ ಈ ಬೈಕು 25.8 ಎಚ್‌ಪಿಯ ಶಕ್ತಿ ಮತ್ತು 21 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಹಿಂಭಾಗ ಮೋನೋಕ್ ಮತ್ತು ಮುಂಭಾಗ ಅಪ್‌ಸೆçಡ್ ಆ್ಯಂಡ್ ಡೌನ್ ಶಾಕ್ಸ್‌ಗಳನ್ನು ಹೊಂದಿದೆ. ಡಿಜಿಟಲ್ ಮೀಟರ್, ಸಂಪೂರ್ಣ ಡಿಜಿಟಲ್ ಲೈಟುಗಳು, ಮುಂಭಾಗ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗ್ಳು ಇದರ ಪ್ಲಸ್ ಪಾಯಿಂಟ್. ಇದರೊಂದಿಗೆ ಮುಂಭಾಗ 280 ಎಂ.ಎಂ.ನ ಡಿಸ್ಕ್ ಮತ್ತು ಹಿಂಭಾಗ 240 ಎನ್‌ಎಂನ ಡಿಸ್ಕ್ ಹೊಂದಿದೆ. 110/70 ಆರ್ 17 ಮುಂಭಾಗದ ಟಯರ್ ಮತ್ತು 150/60 ಆರ್ 17 ಹಿಂಭಾಗದ ಟಯರ್ ಹೊಂದಿದೆ.
ಪೆಟ್ಟಿಗೆಯಲ್ಲಿ ಹಿಡಿಯುವಂಥದ್ದು ಎನ್ನುವ ಅರ್ಥ. ನಿಜವಾಗಿ ಇದು ಸೂಪರ್ ಬೈಕ್‌ಗಳಿಗಿಂತ ತುಸು ಸಣ್ಣದಾಗಿರುತ್ತವೆ. ಆದರೆ ಇವುಗಳಲ್ಲಿ ಶಕ್ತಿಶಾಲಿ ಎಂಜಿನ್ ಇರುತ್ತದೆ. 60, 70ರ ದಶಕದಲ್ಲಿ ಅಮೆರಿಕದಲ್ಲಿ ಇವುಗಳು ಅತಿ ಪ್ರಚಾರ ಪಡೆದಿದ್ದವು. ಇಂತಹ ಬೈಕ್‌ಗಳು ನಗರದ ಚಾಲನೆ ಮತ್ತು ಆಫ್ರೋಡಿಂಗ್‌ಗೆ ಹೆಸರುವಾಸಿ.