Advertisement

ಬಹುಪಯೋಗಿ ಕಪ್ಪು ಉಪ್ಪು 

10:59 AM May 28, 2020 | sudhir |

ಭಾರತೀಯ ಕುಟುಂಬಗಳು ತಮ್ಮ ಅಡುಗೆ ಮನೆಯಲ್ಲಿಯೇ ಹಲವಾರು ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ತಂತ್ರವನ್ನು ಹೊಂದಿದ್ದಾರೆ. ಕಪ್ಪು ಉಪ್ಪು ಅಥವಾ ಬ್ಲಾಕ್ ಸಾಲ್ಟ್‌ ಸಾಮನ್ಯವಾಗಿ ಎಲ್ಲರ ಮನೆಯಲ್ಲಿ ಕಂಡುಬರುವ ಅಡುಗೆ ಪದಾರ್ಥಗಳಲ್ಲಿ ಒಂದಾಗಿದ್ದು, ಇದು ಆಯುರ್ವೇದ ಮತ್ತು ಚಿಕಿತ್ಸಕ ಗುಣಗಳಿಗೆ ಹೆಸರುವಾಸಿಯಾಗಿದೆ. ಹೊಟ್ಟೆ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಕಾಯಿಲೆಗಳನ್ನು ಗುಣಪಡಿಸಲು ಕಪ್ಪು ಉಪ್ಪಿನ ಬಳಕೆ ಉತ್ತಮವಾಗಿದೆ. ಖನಿಜಗಳು ಮತ್ತು ಜೀವಸತ್ವಗಳ ಉತ್ತಮತೆಯೊಂದಿಗೆ ಇರುವ ಕಪ್ಪು ಉಪ್ಪಿನ ಪ್ರಯೋಜನಗಳನ್ನು ಅದರ ನಿಯಮಿತ ಬಳಕೆಯಿಂದ ಪಡೆಯಬಹುದಾಗಿದೆ. ಇದು ಕರುಳಿನ ಸಮಸ್ಯೆ ಮತ್ತು ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಹಾಗೂ ಹಲವಾರು ಕಾಯಿಲೆಗಳನ್ನು ಎದುರಿಸಲು ಸಹಾಯ ಮಾಡುತ್ತದೆ.

Advertisement

ಜೀರ್ಣಕ್ರಿಯೆಗೆ ಸಹಕಾರಿ: ಕಪ್ಪು ಉಪ್ಪಿನ ಕ್ಷಾರಿಯ ಗುಣಗಳು ಹೊಟ್ಟೆ ಉಬ್ಬುವುದು ಮತ್ತು ಮಲಬದ್ದತೆಯನ್ನು ತಡೆದು ಹೊಟ್ಟೆಯ ತೊಂದರೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಇದು ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ಮತ್ತು ಆಸಿಡ್‌ ರಿಫ್ಲಕ್ಸ್‌ಗಳನ್ನು ನಿವಾರಿಸುತ್ತದೆ. ಇದರಲ್ಲಿ ಸೋಡಿಯಂ ಕ್ಲೋರೈಡ್‌ , ಸಲ್ಫೆಟ್‌, ಕಬ್ಬಿಣ ಮತ್ತು ಮ್ಯಾಂಗನೀಸ್‌ ಅಂಶ ಇರುವುದರಿಂದ ಜೀರ್ಣಕ್ರಿಯೆಯಲ್ಲಿನ ಎಲ್ಲಾ ಸಮಸ್ಯೆಗಳನ್ನು ನಿವಾರಿಸುತ್ತದೆ.

ಸ್ನಾಯು ಸೆಳೆತವನ್ನು ನಿಯಂತ್ರಿಸುತ್ತದೆ: ಈ ದ್ರಾವಣದಲ್ಲಿರುವ ಅಧಿಕ ಪೊಟ್ಯಾಶಿಯಂ ನಮ್ಮ ಸ್ನಾಯುಗಳ ಕಾರ್ಯನಿರ್ವಹಣೆಗೆ ಅವಶ್ಯಕವಾಗಿದೆ. ಕಪ್ಪು ಉಪ್ಪು ಸ್ನಾಯು ಸೆಳೆತವನ್ನು ನಿಯಂತ್ರಿಸುತ್ತದೆ. ಜತೆಗೆ ಇದು ನಮ್ಮ ದೇಹದಲ್ಲಿನ ಆಹಾರದಿಂದ ಅಗತ್ಯವಾದ ಖನಿಜಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.

ಮಧುಮೇಹವನ್ನು ನಿಯಂತ್ರಿಸುತ್ತದೆ: ಆಹಾರದಲ್ಲಿ ಕಪ್ಪು ಉಪ್ಪಿನ ಬಳಕೆಯಿಂದ ಮಧುಮೇಹವನ್ನು ನಿಯಂತ್ರಿಸಬಹುದಾಗಿದೆ.

ರಕ್ತ ಪರಿಚಲನೆಯನ್ನು ಸರಾಗಗೊಳಿಸುತ್ತದೆ: ಕಪ್ಪು ಉಪ್ಪಿನ ಪ್ರಯೋಜನವೆಂದರೆ ಅದು ಸರಿಯಾದ ರಕ್ತ ಪರಿಚಲನೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಕಡಿಮೆ ಸೋಡಿಯಂ ಮಟ್ಟದಿಂದಾಗಿ ಕಪ್ಪು ಉಪ್ಪು ರಕ್ತವನ್ನು ತೆಳುವಾಗಿಸಲು ಸಹಾಯ ಮಾಡುತ್ತದೆ. ಇದು ಸರಿಯಾದ ರಕ್ತ ಪರಿಚಲನೆಗೆ ಸಹಕರಿಸುವುದಲ್ಲದೆ ರಕ್ತದೊತ್ತಡದ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಜತೆಗೆ ರಕ್ತ ಹೆಪ್ಪುಗಟ್ಟುವಿಕೆಯನ್ನು ತೆಗೆದು ಹಾಕುತ್ತದೆ ಮತ್ತು ಕೊಲೆಸ್ಟ್ರಾಲ್‌ ಸಮಸ್ಯೆಯೊಂದಿಗೆ ಪರಿಣಾಮಕಾರಿಯಾಗಿ ವ್ಯವಹರಿಸುತ್ತದೆ.

Advertisement

ಕೀಲು ನೋವಿಗೆ ಸಹಕಾರಿ: ಕಪ್ಪು ಉಪ್ಪು ಬಳಸಿ ಶಾಖ ನೀಡುವುದರಿಂದ ಕೀಲು ನೋವು ನಿವಾರಣೆಗೆ ಸಹಾಯ ಮಾಡುತ್ತದೆ.

ಎದೆಉರಿ ನಿಯಂತ್ರಿಸಲು ಸಹಕಾರಿ: ಹೊಟ್ಟೆಯಲ್ಲಿನ ಆಮ್ಲ ಉತ್ಪಾದನೆಯನ್ನು ಸಮತೋಲನಗೊಳಿಸಲು ಸಹಾಯ ಮಾಡುವುದರ ಜತೆಗೆ ಎದೆ ಉರಿಯನ್ನು ಗುಣಪಡಿಸಲು ಸಹಕರಿಸುತ್ತದೆ. ಆಮ್ಲೀಯತೆ ಮತ್ತು ಮಲಬದ್ದತೆಯನ್ನು ಗುಣಪಡಿಸಲು ಕಪ್ಪು ಉಪ್ಪು ಸಹಕಾರಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next