Advertisement

ಕಿತ್ತಳೆ ಹಣ್ಣಿನ ಸಿಪ್ಪೆಯ ಪ್ರಯೋಜನ

10:06 PM Dec 02, 2019 | mahesh |

ಪ್ರತಿದಿನ ಕಿತ್ತಳೆ ಹಣ್ಣಿನ ಸಿಪ್ಪೆಯ ರಸವನ್ನು ಒಂದು ಚಮಚ ಸೇವಿಸುವುದರಿಂದ ವಿಟಮಿನ್‌ ಸಿ ಅಧಿಕವಾಗಿ ಲಭಿಸುತ್ತದೆ. ಕಿತ್ತಳೆ ಹಣ್ಣಿಗಿಂತಲೂ ಅಧಿಕ ವಿಟಮಿನ್‌ ಇದರಲ್ಲಿದೆ. ಇದರಲ್ಲಿ ವಿಟಮಿನ್‌ ಎ ಅಂಶಗಳು ಅಧಿಕವಾಗಿವೆ . ಇದರಲ್ಲಿ ರುವ ಫೈಬರ್‌ ಅಂಶಗಳು ಕ್ಯಾನ್ಸರ್‌ ರೋಗವನ್ನು ತಡೆಗಟ್ಟಲು ಸಹಕಾರಿ. ಡಯಾಬಿಟೀಸ್‌ ನಿಯಂತ್ರಣದಲ್ಲಿಡಲು ಕೂಡ ಇದು ಸಹಕಾರಿ.

Advertisement

ಕಿತ್ತಳೆ ಹಣ್ಣಿನಲ್ಲಿ ಅತಿ ಹೆಚ್ಚು ವಿಟಮಿನ್‌ಗಳು ಹಾಗೂ ಶರೀರಕ್ಕೆ ಬೇಕಾಗುವಂತಹ ಪ್ರೊಟೀನ್‌ ಅಂಶಗಳಿವೆ. ಹೆಚ್ಚಿನವರು ಕೇವಲ ಕಿತ್ತಳೆಹಣ್ಣಿನ ಸೇವನೆಯಿಂದ ಆರೋಗ್ಯಕ್ಕೆ ಪ್ರಯೋಜನವಿದೆ ಎಂದು ನಂಬಿಕೊಂಡಿದ್ದಾರೆ. ಆದರೆ ಕಿತ್ತಳೆ ಸಿಪ್ಪೆಯಿಂದಲೂ ಹಲವಾರು ಪ್ರಯೋಜನಗಳು ಲಭಿಸುತ್ತವೆ. ಅದರಲ್ಲಿರುವ ಹುಳಿಯ ಅಂಶಗಳು ಶರೀರಕ್ಕೆ ಹೆಚ್ಚು ಅಗತ್ಯವಾಗಿ ಬೇಕಾಗುತ್ತವೆ. ಕಿತ್ತಳೆ ಹಣ್ಣಿನಲ್ಲಿ ವಿಟಮಿನ್‌ ಸಿ ಅಧಿಕವಾಗಿರುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವಂತಹ ವಿಷಯಗಳೇ. ಆದರೆ ಕಿತ್ತಳೆ ಹಣ್ಣಿನ ಸಿಪ್ಪೆಯಲ್ಲಿ ಕೂಡ ವಿಟಮಿನ್‌ ಸಿ ಇದೆ. ಕೇವಲ ಈ ವಿಟಮಿನ್‌ ಮಾತ್ರವಲ್ಲದೆ ಪ್ರೋಟಿನ್‌ ಅಂಶಗಳೂ ಕಿತ್ತಳೆ ಹಣ್ಣಿನ ಸಿಪ್ಪೆಯಲ್ಲಿವೆ.

ಕಿತ್ತಳೆಹಣ್ಣಿನ ಸಿಪ್ಪೆಯ ರಸವನ್ನು ಸೇವಿಸುವುದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ. ಹಾಗೂ ಹೃದಯದ ಆರೋಗ್ಯವನ್ನು ಹೆಚ್ಚಿಸಲು ಸಹಕಾರಿ.

ಕಿತ್ತಳೆ ಹಣ್ಣಿನ ಸಿಪ್ಪೆಯಲ್ಲಿ ಹಿಸ್ಟಮೈನ್‌ಗಳು ಇರುವುದರಿಂದ ಇವು ಅಲರ್ಜಿಯನ್ನು ನಿಯಂತ್ರಿಸಲು ಸಹಕಾರಿ. ಇವುಗಳನ್ನು ಚರ್ಮಕ್ಕೆ ಹಚ್ಚುವುದರಿಂದ ವೈರಸ್‌ಗಳು ನಾಶವಾಗುತ್ತವೆ. ತೂಕ ಇಳಿಕೆಗೂ ಕಿತ್ತಳೆ ಹಣ್ಣಿನ ಸಿಪ್ಪೆಗಳು ಸಹಕಾರಿ. ಪ್ರತಿನಿತ್ಯ ಇದರ ರಸವನ್ನು ಸೇವಿಸುವುದರಿಂದ ಅನಗತ್ಯ ಕೊಬ್ಬು ಕರಗಿ ತೂಕ ಇಳಿಕೆಯಾಗುತ್ತದೆ.

ಉಸಿರಿನ ದುರ್ವಾಸನೆ ಹೊಂದಿರುವವರು ಕಿತ್ತಳೆಹಣ್ಣಿನ ಸಿಪ್ಪೆಯನ್ನು ಜಗಿದು ಸೇವಿಸಬೇಕು. ಇದರಿಂದ ಉಸಿರಿನ ದುರ್ಗಂಧ ನಿವಾರಣೆಯಾಗುತ್ತದೆ. ಸೌಂದರ್ಯ ವರ್ಧನೆಯಲ್ಲೂ ಕಿತ್ತಳೆಹಣ್ಣಿನ ಸಿಪ್ಪೆ ಪ್ರಮುಖ ಪಾತ್ರವಹಿಸುತ್ತದೆ. ಇದನ್ನು ನಿರಂತರವಾಗಿ ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ.

Advertisement

-  ಸುಶ್ಮಿತಾ ಶೆಟ್ಟಿ ಸಿರಿಬಾಗಿಲು

Advertisement

Udayavani is now on Telegram. Click here to join our channel and stay updated with the latest news.

Next