ಕುಳಿತಾಗ, ಉಸಿರ ಮೇಲೆ ಗಮನ ಕೊಡಿ. ಉಸಿರನ್ನು ಒಳಗೆ ತೆಗೆದುಕೊಂಡಾಗ, ಹೊಟ್ಟೆ ಉಬ್ಬಬೇಕು, ಬಿಟ್ಟಾಗ ಪೂರ್ತಿ ಖಾಲಿಯಾಗಬೇಕು. ಇದನ್ನು ಗಮನಿಸುತ್ತಲೇ, ಕುಂಭಕವನ್ನು ಮಾಡಬೇಕಾಗುತ್ತದೆ. ಕುಂಭಕ ಅಂದರೆ, ಮತ್ತೇನಿಲ್ಲ. ಉಸಿರನ್ನು ಎಳೆದುಕೊಂಡ ನಂತರ, ಬಿಡುವ ಮೊದಲು ಸ್ವಲ್ಪ ಹೊತ್ತು ಒಳಗೇ ಇಟ್ಟುಕೊಳ್ಳುವುದು. ಇದನ್ನು ಕುಂಭಕ ರೇಚಕ ಅಂತಾರೆ. ಉಸಿರನ್ನು ಪೂರ್ತಿ ಬಿಟ್ಟು ಒಂದು ನಿಮಿಷದ ನಂತರ ಎಳೆದುಕೊಳ್ಳುವುದಕ್ಕೆ ಕುಂಭಕ ಪೂರಕ ಅಂತಾರೆ.
Advertisement
ಪ್ರಾಣಾಯಾಮದ ಜೊತೆಗೇ ವೀರಾಸನವನ್ನೂ ಮಾಡಿ. ಅದು ಹೀಗೆ- ಎರಡೂ ಕಾಲುಗಳನ್ನು ಚಾಚಿ ನೇರವಾಗಿ ಕುಳಿತುಕೊಳ್ಳಿ. ಬಲಗಾಲನ್ನು ಹಿಂದಕ್ಕೆ ಮಡಚಿ, ಪಕ್ಕಕ್ಕೆ ಇಟ್ಟುಕೊಳ್ಳಿ. ಬಲಪಾದ ಕಾಲಿನ ನೇರಕ್ಕಿರಲಿ. ಮಂಡಿಗಳನ್ನು ಸಾಧ್ಯವಾದಷ್ಟು ಹತ್ತಿರ ತನ್ನಿ. ಈ ಭಂಗಿಯಲ್ಲಿ ಉಸಿರಾಡುತ್ತಾ, ಎರಡು ನಿಮಿಷ ಹಾಗೇ ಕುಳಿತುಕೊಳ್ಳಿ.