Advertisement

ಎಚ್‌-1ಬಿ ರದ್ದತಿಯಿಂದ ಅನುಕೂಲ

08:10 AM Jun 25, 2020 | mahesh |

ನವದಿಲ್ಲಿ: ಅಮೆರಿಕಕ್ಕೆ ವಲಸಿಗರನ್ನು ತಡೆಯುವ ನಿಟ್ಟಿನಲ್ಲಿ ಎಚ್‌-1ಬಿ ಸೇರಿದಂತೆ ಹಲವಾರು ಉದ್ಯೋಗ ಸಂಬಂಧಿ ವೀಸಾಗಳನ್ನು ಈ ವರ್ಷಾಂತ್ಯದವರೆಗೆ ತಾತ್ಕಾಲಿಕವಾಗಿ ರದ್ದು ಮಾಡಿರುವ ಟ್ರಂಪ್‌ ಅವರ ನಿರ್ಧಾರ, ಭಾರತೀಯರಿಗೆ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Advertisement

ಈ ಆದೇಶ ಹೊಸ ಕಾರ್ಮಿಕರು ಅಮೆರಿಕಕ್ಕೆ ಬರುವುದನ್ನು ತಡೆಯುತ್ತದೆ. ಇದರಿಂದಾಗಿ ಅಮೆರಿಕದಲ್ಲಿ ನುರಿತ ಕೆಲಸಗಾರರ ಕೊರತೆ ಎದುರಾಗಲಿದೆ. ಆದರೆ, ಈಗಾಗಲೇ ಎಚ್‌-1ಬಿ ವೀಸಾದಡಿ ಅಮೆರಿಕದಲ್ಲಿ ಕೆಲಸ ಮಾಡುತ್ತಿರುವವರಿಗೆ ಇದರಿಂದ ತೊಂದರೆಯಿಲ್ಲ. ಇವರು ಹೆಚ್ಚಿನ ಸಂಬಳ ಪಡೆಯುವ ಮೂಲಕ, ಪ್ರಯೋಜನ ಪಡೆಯಬಹುದು. ಇದೇ ವೇಳೆ, ನುರಿತ ಕಾರ್ಮಿಕರ ಕೊರತೆಯಿಂದ ಹೊರ ಗುತ್ತಿಗೆ ಹೆಚ್ಚಾಗುವ ಸಾಧ್ಯತೆಯಿದ್ದು, ಭಾರತೀಯ ಉದ್ಯೋಗಾವಕಾಶಕ್ಕೆ ದಾರಿ ಮಾಡಿ ಕೊಡಬಹುದು ಎನ್ನುತ್ತಾರೆ ಒಂದು ವಲಯದ ತಜ್ಞರು ಮತ್ತೂಂದೆಡೆ, ಅಮೆರಿಕಕ್ಕೆ ತೆರಳಲು ಸಜ್ಜಾಗಿರುವ ನುರಿತ ಕಾರ್ಮಿಕರ ಸೇವೆಯನ್ನು ಭಾರತದಲ್ಲಿಯೇ ಬಳಸಿಕೊಳ್ಳಬಹುದು. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ದುಡಿಯುವ ಅವಕಾಶ ಕೊಟ್ಟು, ಭಾರತದ ಆರ್ಥಿಕತೆ ಪ್ರಗತಿಗೆ ಬಳಸಿಕೊಳ್ಳಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next