Advertisement
ಬೆಳ್ತಂಗಡಿ ತಾ| ಕಚೇರಿಯಲ್ಲಿ ಸಾರ್ವ ಜನಿಕರಿಗೆ ಆಗುತ್ತಿರುವ ತೊಂದರೆ ಸರಿಪಡಿಸುವಂತೆ ಹಾಗೂ ವಿವಿಧ ಬೇಡಿಕೆ ಮುಂದಿಟ್ಟು ಸೆ. 15ರಂದು ಮಿನಿ ವಿಧಾನಸೌಧದಲ್ಲಿ ಪುತ್ತೂರು ಸಹಾಯಕ ಕಮಿಷನರ್ ಯತೀಶ್ ಉಳ್ಳಾಲ್ ಅವರಿಗೆ ಮನವಿ ಸಲ್ಲಿಸಿ, ಬಳಿಕ ಮಾತನಾಡಿದರು. ತಾ|ನಲ್ಲಿ 94ಸಿ ಯೋಜನೆಯಡಿ ತಯಾರಾದ ಸುಮಾರು ಒಂದು ಸಾವಿರ ಹಕ್ಕುಪತ್ರಗಳನ್ನು ಅರ್ಹ ಫಲಾನುಭವಿ ಗಳಿಗೆ ವಿತರಿಸದೆ ಬಡವರು ಕಚೇರಿಗೆ ಅಲೆದಾಡುವಂತಾಗಿದೆ. ಈಗಾಗಲೇ ಸ್ಥಳ ತನಿಖೆ ಆದ ನಿವೇಶನಗಳ ಬಗ್ಗೆ ತಹಶೀಲ್ದಾರರು ಮರು ತನಿಖೆ ಆಗಬೇಕು ಎಂದು ಹೇಳುತ್ತಿದ್ದು, ಇದನ್ನು ತತ್‌ಕ್ಷಣ ನಿಲ್ಲಿಸಿ ಅಂಥವರಿಗೆ ಹಕ್ಕುಪತ್ರ ನೀಡಬೇಕು. ಆರ್. ಟಿ.ಸಿ., ಪಹಣಿ ಇತ್ಯಾದಿ ಕಡತಗಳ ಬಗ್ಗೆ ಶೀಘ್ರ ಆದೇಶ ನೀಡಿ ವಿಲೇವಾರಿ ಮಾಡುವಂತೆ ಆಗ್ರಹಿಸಿದರು.
ಗುಂಡೂರಿ ಗ್ರಾಮದ ವಿಮಲಾ, ಕೂಸಮ್ಮ ಅವರಿಗೆ ಸ್ಥಳದಲ್ಲೇ 94ಸಿ ಹಕ್ಕುಪತ್ರ ಕೊಡಿಸಿದ ಘಟನೆ ಸಂಭವಿಸಿತು. 2018ರಲ್ಲೇ 94ಸಿ ಯೋಜನೆಯಲ್ಲಿ ವಿಮಲಾ, ಕೂಸಮ್ಮ ಅವರಿಗೆ ಸ್ಥಳ ಮಂಜೂರಾಗಿ ಹಕ್ಕುಪತ್ರಕ್ಕೆ ತಹಶೀಲ್ದಾರ್ ಸಹಿಯಾಗಿತ್ತು. ಆದರೆ ತಾ| ಕಚೇರಿ ಸಿಬಂದಿ ನಿರ್ಲಕ್ಷ್ಯವೋ ರಾಜಕೀಯ ಒತ್ತಡದಿಂದಲೋ ಫಲಾನುಭವಿಗಳನ್ನು 2 ವರ್ಷ ಅಲೆದಾಡಿಸಲಾಗಿತ್ತು. ಈ ಕುರಿತು ಮಾಜಿ ಶಾಸಕ ವಸಂತ ಬಂಗೇರ ಅವರು ಸಹಾಯಕ ಕಮಿಷನರ್ ಗಮನಕ್ಕೆ ತಂದಾಗ, ಸ್ಥಳದಲ್ಲೇ ಹಕ್ಕುಪತ್ರ ನೀಡಲಾಯಿತು.