Advertisement
ಉಭಯ ಜಿಲ್ಲೆಗಳಲ್ಲಿ 2,76,209 ಮಂದಿ ಫಲಾನುಭವಿಗಳು ಈ ಸಮಸ್ಯೆಯಿಂದ ಬಾಧಿತರಾಗಿದ್ದಾರೆ. ಸಾಮಾಜಿಕ ಭದ್ರತಾ ಯೋಜನೆ ಅನ್ವಯ ವೃದ್ಧಾಪ್ಯ, ವಿಧವಾ, ವಿಶೇಷಚೇತನ, ಸಂಧ್ಯಾ ಸುರಕ್ಷಾ, ತೃತೀಯ ಲಿಂಗಿಗಳು, ಆ್ಯಸಿಡ್ ದಾಳಿಗೆ ಒಳಗಾದವರಿಗೆ ಪಿಂಚಣಿ ನೀಡಲಾಗುತ್ತಿದೆ. ಹತ್ತು ಹಲವು ಯೋಜನೆಗಳಿಗೆ ಸಾವಿರಾರು ಕೋಟಿ ರೂ. ವ್ಯಯಿಸುವ ಸರಕಾರ ಬಡವರಿಗೆ ಪಿಂಚಣಿ ಹಣ ನೀಡಲು ಏಕೆ ವಿಳಂಬ ಮಾಡುತ್ತಿದೆ ಎಂಬ ಪ್ರಶ್ನೆ ಸಂತ್ರಸ್ತರದ್ದು.
ಅಕ್ಕಿ, ಬೇಳೆ, ಔಷಧ ಇತ್ಯಾದಿಗೆ ಹಣ ಹೊಂದಿಸಲು ಸಾಧ್ಯವಾಗದೆ ಪಿಂಚಣಿ ಹಣ ನಂಬಿ ಕುಳಿತವರ ಪಾಡು ಕೇಳುವಂತಿಲ್ಲ. ವಿಶೇಷ ಚೇತನ, ವೃದ್ಧಾಪ್ಯ, ವಿಧವಾ ವೇತನ ಎರಡರಿಂದ ಮೂರು ತಿಂಗಳಷ್ಟು ಪಾವತಿಗೆ ಬಾಕಿ ಇವೆ. ಹೊಸ ತಂತ್ರಾಂಶ ಕಿರಿಕ್!
ಖಜಾನೆ 1ಮತ್ತು 2 ಎಂಬ ಹೊಸ ತಂತ್ರಾಂಶ ಅಭಿವೃದ್ಧಿ ಪಡಿಸಿದ ಬಳಿಕ ಅದಕ್ಕೆ ಕೆಲವರ ಹೆಸರು ಸೇರ್ಪಡೆಯಾಗದೆ ಕೈಬಿಡಲಾಗಿದೆ ಎಂಬ ದೂರಿದೆ. ಇದರಿಂದಲೂ ಸಮಸ್ಯೆ ಹೆಚ್ಚಾಗಿದೆ.”ವಿಳಾಸದಲ್ಲಿ ಇಲ್ಲ’, “ಮೃತಪಟ್ಟಿ¨ªಾರೆ’ ಎಂಬುದರ ಜತೆಗೆ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಯೋಜನೆ ದುರುಪಯೋಗ ವರದಿ ಹಿನ್ನೆಲೆಯಲ್ಲಿ ಸಾವಿರಾರು ಜನರ ಪಿಂಚಣಿ ರದ್ದು ಪಡಿಸಲಾಗಿದೆ. ಹೀಗೆ ಕೈಬಿಟ್ಟವರಲ್ಲಿ ಅರ್ಹರೂ ಇದ್ದು, ಅವರು ದಾಖಲೆಗಳನ್ನು ಹಿಡಿದುಕೊಂಡು ಕಚೇರಿ ಅಲೆಯುವಂತಾಗಿದೆ. ತಮ್ಮದಲ್ಲದ ತಪ್ಪಿಗೆ ಹೊಸದಾಗಿ ಅರ್ಜಿ, ದಾಖಲೆ ಒದಗಿಸಲು ಸಾವಿ ರಾರು ರೂ. ವ್ಯಯಿಸುವಂತಾಗಿದೆ ಎಂಬುದು ಫಲಾನುಭವಿಗಳ ಬೇಸರದ ನುಡಿ.
Related Articles
ಪ್ರಸ್ತುತ ಅವಳಿ ಜಿಲ್ಲೆಯಲ್ಲಿ ಸಾವಿರಾರು ಫಲಾನುಭವಿಗಳ ಪಿಂಚಣಿ 6 ತಿಂಗಳಿನಿಂದ ನಿಲುಗಡೆಯಾಗಿದೆ. ಈಗ ಅವರಿಗೆ ಮತ್ತೆ ಅರ್ಜಿ ಸಲ್ಲಿಲು ಸೂಚಿಸಲಾಗಿದೆ. ಹಾಗಾಗಿಈ ಹಿಂದೆ ಪಿಂಚಣಿ ರದ್ದಾಗಿ ಬಾಕಿಯಾದ ಪಿಂಚಣಿ ಹಣ ಬರುವ ಸಾಧ್ಯತೆ ಕಡಿಮೆ ಇದೆ ಎಂಬ ಅಭಿಪ್ರಾಯವೂ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
Advertisement
ತಾಂತ್ರಿಕ ಕಾರಣಗಳಿಂದ ಪಿಂಚಣಿ ಸರಿಯಾದ ಸಮಯಕ್ಕೆ ಫಲಾನುಭವಿಗಳ ಕೈ ಸೇರುತ್ತಿಲ್ಲ. ಹಂತ ಹಂತವಾಗಿ ಸಮಸ್ಯೆ ಪರಿಹರಿಸ ಲಾಗುತ್ತಿದೆ.-ಪ್ರದೀಪ ಕುರ್ಡೆಕರ್, ತಹಶೀಲ್ದಾರ್ ಉಡುಪಿ. – ತೃಪ್ತಿ ಕುಮ್ರಗೋಡು