Advertisement

ಭಾವಕ್ಕೆ ಅನನ್ಯತೆ ತಂದು ಕೊಟ್ಟ ಬೇಂದ್ರೆ‌

03:23 PM Jan 08, 2024 | Team Udayavani |

ಉದಯವಾಣಿ ಸಮಾಚಾರ
ಧಾರವಾಡ: ಉತ್ತರ ಕರ್ನಾಟಕದ ಆಡು ಭಾಷೆ ಶಬ್ದಗಳು, ಗಾದೆ ಮಾತು, ಲಯ, ಧ್ವನಿ ಶಕ್ತಿಯನ್ನು ಉಪಯೋಗಿಸಿಕೊಂಡು ನವೋದಯ ಕಾವ್ಯವನ್ನು ಉನ್ನತ ಸ್ಥಾನಕ್ಕೆ ತಲುಪಿಸಿರುವರು ವರಕವಿ ದ.ರಾ.ಬೇಂದ್ರೆ ಅವರು ಎಂದು ಹಿರಿಯ ಸಾಹಿತಿ ಡಾ|ಗುರುದೇವಿ ಹುಲೆಪ್ಪನವರಮಠ ಹೇಳಿದರು.

Advertisement

ಇಲ್ಲಿನ ಮಾಳಮಡ್ಡಿಯ ಕೆ.ಇ.ಬೋರ್ಡ್‌ ಪಿಯು ಮಹಾವಿದ್ಯಾಲಯದ ಸಭಾಭವನದಲ್ಲಿ ಹಮ್ಮಿಕೊಂಡ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ-2023-24ರ ಸರ್ವಾಧ್ಯಕ್ಷರಾಗಿ ಪಾಲ್ಗೊಂಡು ಮಾತನಾಡಿ ಅವರು, ವ್ಯಕ್ತಿಯ ಬದುಕಿನ, ಸಂಸಾರ, ನಿಸರ್ಗ ಹಾಗೂ ಎಲ್ಲ ಆಯಾಮಗಳಲ್ಲಿ ದೊರೆಯಬಹುದಾದ ಭಾವ ಸಂಕಿರಣಗಳನ್ನೆಲ್ಲ ಅನನ್ಯವಾದ ರೀತಿಯಲ್ಲಿ ಬರಹಗಳಿಂದ ಬೇಂದ್ರೆಯವರು ಕನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಬೇಂದ್ರೆಯವರ ಕಾವ್ಯ, ನಾಟಕ, ಸಾಹಿತ್ಯ ಅಧ್ಯಯನ ಮಾಡುವುದರಿಂದ ಆತ್ಮ ಸಂತೋಷ ಜ್ಞಾನ, ನಮ್ಮ ಜೀವನದ ನೋವು ದುಃ ಖಗಳನ್ನು ಮರೆಯಲು ಸಾಧ್ಯವಾಗುತ್ತದೆ ಎಂದರು
.
ಕೆ.ಇ.ಬೋರ್ಡನ ಕಾರ್ಯಾಧ್ಯಕ್ಷ ಶ್ರೀಕಾಂತ ಪಾಟೀಲ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿ ಸಮೂಹದಲ್ಲಿ ಕನ್ನಡ ಸಾಹಿತ್ಯದ ಆಸಕ್ತಿ, ಅಭಿರುಚಿ ಹೆಚ್ಚಿಸುವ, ಜೀವನ ಮೌಲ್ಯಗಳ ನ್ನು ಬೆಳೆಸುವ ಉದ್ದೇಶದಿಂದ ಮಕ್ಕಳ ಸಾಹಿತ್ಯ ಸಮ್ಮೇಳನ ಹಮ್ಮಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದರು. ಕೆ.ಇ.ಬೋರ್ಡಿನ ಅಧ್ಯಕ್ಷ ಡಾ|ಎಮ್‌.ಎನ್‌ ಜೋ \ಶಿ ಅದ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯದರ್ಶಿ ಡಿ.ಎಸ್‌ ರಾಜಪುರೋಹಿತ ಪ್ರಾಸ್ತಾವಿಕ ಮಾತನಾಡಿದರು. ಖಜಾಂಚಿ ಎನ್‌. ಎಸ್‌.ಕುಲಕರ್ಣಿ ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು. ಪ್ರಾಚಾರ್ಯ ಸುನೀತಾ ಕಡಪಟ್ಟಿ ಸ್ವಾಗತಿಸಿ ಪರಿಚಯಿಸಿದರು.

ಉಪನ್ಯಾಸಕಎಸ್‌.ಎಲ್‌. ಶೇಖರಗೋಳ ನಿರೂಪಿಸಿದರು. ಜಿ.ಸಿ ಕುಲಕರ್ಣಿ ವಂದಿಸಿದರು. ಕಾಲೇಜಿನ ಅಧ್ಯಕ್ಷ ಡಾ|ಎಸ್‌ ಎಸ್‌
ಹನಮಂತಗಡ ಇದ್ದರು. ಭವ್ಯ ಮೆರವಣಿಗೆ: ನಂತರ ಉಪನ್ಯಾಸಕಿ ಹೇಮಲತಾ ಕರಿಗಾರ ಮಾರ್ಗದರ್ಶನದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕನ್ನಡ ಧ್ವಜಾರೋಹಣ ನೆರೆವೇರಿಸಲಾಯಿತು. ಬೇಂದ್ರೆಯವರ ಗ್ರಂಥಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

ಸಮ್ಮೇಳನದ ಆರಂಭದಲ್ಲಿ ಮಾಳಮಡ್ಡಿಯ ವನವಾಸಿ ರಾಮಮಂದಿರದಿಂದ ಕಾಲೇಜಿನ ಸಭಾಭವನದವರೆಗೆ ವಾದ್ಯಮೇಳದೊಂದಿಗೆ ಸರ್ವಾಧ್ಯಕ್ಷರು, ಗಣ್ಯರು, ನೂರಾರು ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಸಾಹಿತಿ ಸುರೇಶ ಕುಲಕರ್ಣಿ, ಹರ್ಷ ಡಂಬಳ, ಮಲ್ಲಿಕಾರ್ಜುನ ಚಿಕ್ಕಮಠ, ರಾಜೀವ ದಿಕ್ಷೀತ, ಸಂಸ್ಥೆಯ ಸದಸ್ಯರಾದ ಸುನೀತ ಪುರೋಹಿತ, ಕೆ.ಎನ್‌. ಕಟ್ಟಿ, ಎನ್‌.ಎಸ್‌. ಗೋವಿಂದರಡ್ಡಿ. ಎನ್‌.ಎಮ್‌. ಸವಣೂರು, ಕೆ,ಇ.ಬೋರ್ಡ್‌ ಸಂಸ್ಥೆಗಳ ಪ್ರಾಚಾರ್ಯರು, ಪ್ರಧಾನ ಗುರುಗಳು, ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next