Advertisement

ಐಪಿಎಲ್‌ನಿಂದ ಬೇಗನೇ ನಿರ್ಗಮಿಸುವ ಬೆನ್‌ ಸ್ಟೋಕ್ಸ್‌

10:55 PM Feb 22, 2023 | Team Udayavani |

ವೆಲ್ಲಿಂಗ್ಟನ್‌: ಇಂಗ್ಲೆಂಡ್‌ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ 2023ನೇ ಸಾಲಿನ ಐಪಿಎಲ್‌ನಿಂದ ಬೇಗನೇ ನಿರ್ಗಮಿಸುವುದಾಗಿ ಹೇಳಿದ್ದಾರೆ. ಐರ್ಲೆಂಡ್‌ ವಿರುದ್ಧದ ಏಕೈಕ ಟೆಸ್ಟ್‌ ಹಾಗೂ ಆ್ಯಶಸ್‌ ಸರಣಿಗೆ ತಯಾರಿ ನಡೆಸುವ ಉದ್ದೇಶ ಅವರದು.

Advertisement

ಐಪಿಎಲ್‌ ಮೇ 28ಕ್ಕೆ ಕೊನೆ ಗೊಳ್ಳುತ್ತದೆ. ಇದು ಮುಗಿದ ನಾಲ್ಕೇ ದಿನಗಳಲ್ಲಿ ಐರ್ಲೆಂಡ್‌ ಎದುರಿನ ಟೆಸ್ಟ್‌ ಪಂದ್ಯ ಲಾರ್ಡ್ಸ್‌ನಲ್ಲಿ (ಜೂ. 1) ಆರಂಭಗೊಳ್ಳಲಿದೆ. ಪ್ರತಿಷ್ಠಿತ ಆ್ಯಶಸ್‌ ಜೂ. 16ಕ್ಕೆ ಮೊದಲ್ಗೊಳ್ಳುತ್ತದೆ.

ಬೆನ್‌ ಸ್ಟೋಕ್ಸ್‌ ಕಳೆದೆರಡು ಐಪಿಎಲ್‌ಗ‌ಳನ್ನು ನಾನಾ ಕಾರಣಗಳಿಂದ ತಪ್ಪಿಸಿಕೊಂಡಿದ್ದರು. ಈ ಬಾರಿ ಅವರು 16.25 ಕೋಟಿ ರೂ. ಮೊತ್ತಕ್ಕೆ ಚೆನ್ನೈ ಸೂಪರ್‌ ಕಿಂಗ್ಸ್‌ ಪಾಲಾಗಿದ್ದಾರೆ. ಚೆನ್ನೈ ಫೈನಲ್‌ ಹಂತ ತಲುಪಿದರೂ ತಾನು ಆಡುವ ಸಾಧ್ಯತೆ ಇಲ್ಲ, ಆಗ ಟೆಸ್ಟ್‌ ಪಂದ್ಯವೇ ತನ್ನ ಆಯ್ಕೆ ಆಗಿರಲಿದೆ ಎಂದಿದ್ದಾರೆ ಬೆನ್‌ ಸ್ಟೋಕ್ಸ್‌.

ಇಂಗ್ಲೆಂಡ್‌ಆಟಗಾರರು
ಇಂಗ್ಲೆಂಡ್‌ನ‌ ಬಹಳಷ್ಟು ಕ್ರಿಕೆಟಿಗರು ಐಪಿಎಲ್‌ನಲ್ಲಿದ್ದಾರೆ. ಇವರಲ್ಲಿ ಜೋ ರೂಟ್‌, ಮಾರ್ಕ್‌ ವುಡ್‌, ಜಾನಿ ಬೇರ್‌ಸ್ಟೊ, ಲಿಯಮ್‌ ಲಿವಿಂಗ್‌ಸ್ಟೋನ್‌, ಆರ್ಚರ್‌, ಸ್ಯಾಮ್‌ ಕರನ್‌, ಹ್ಯಾರಿ ಬ್ರೂಕ್‌ ಪ್ರಮುಖರು. ಇವರೆಲ್ಲರೂ ಆ್ಯಶಸ್‌ ಸರಣಿಗಾಗಿ ಹೊರಟು ನಿಂತರೆ ಐಪಿಎಲ್‌ ತಂಡಗಳಿಗೆ ಭಾರೀ ಹೊಡೆತ ಬೀಳುವುದು ಖಂಡಿತ.

Advertisement

Udayavani is now on Telegram. Click here to join our channel and stay updated with the latest news.

Next