Advertisement

ಬೆನ್‌ ಸ್ಟೋಕ್ಸ್‌ ಕ್ರಿಕೆಟ್‌ ಜೀವನ ಅತಂತ್ರ

06:45 AM Aug 07, 2018 | |

ಬರ್ಮಿಂಗ್‌ಹ್ಯಾಮ್‌: ಭಾರತ ವಿರುದ್ಧ ನಡೆಯುವ 2ನೇ ಟೆಸ್ಟ್‌ನಿಂದ ಇಂಗ್ಲೆಂಡ್‌ನ‌ ಖ್ಯಾತ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಹೊರಬಿದ್ದಿದ್ದಾರೆ. ಸೋಮವಾರದಿಂದ ಅವರ ವಿರುದ್ಧ ಇಲ್ಲಿನ ಬ್ರಿಸ್ಟಲ್‌ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗಿದೆ. ಅದು 5 ದಿನ ಮುಂದುವರಿಯಲಿದೆ.

Advertisement

ಇದು ಅವರಿಗೆ ಸದ್ಯಕ್ಕೆ ದ್ವಿತೀಯ ಟೆಸ್ಟನ್ನು ತಪ್ಪಿಸಿದರೂ ತೀರ್ಪು ಬಂದ ಮೇಲೆ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಸಾಧ್ಯತೆಯಿದೆ. ಅವರ ವೃತ್ತಿಜೀವನವನ್ನೇ ಮಬ್ಟಾಗಿಸಬಹುದು. ಕಾರಣ, ಸ್ಟೋಕ್ಸ್‌ ವಿರುದ್ಧ ದಾಖಲಾಗಿರುವುದು ಮಧ್ಯರಾತ್ರಿಯಲ್ಲಿ ಬಾರ್‌ ಹೊರಗೆ ಗಲಾಟೆ ಮಾಡಿ ಶಾಂತಿ ಕದಡಿದ ಪ್ರಕರಣ. 5 ದಿನದ ವಿಚಾರಣೆಯಲ್ಲಿ ಸ್ಟೋಕ್ಸ್‌ ತಮ್ಮನ್ನು ರಕ್ಷಿಸಿಕೊಳ್ಳಲು ವಿಫ‌ಲವಾದರೆ ಇಕ್ಕಟ್ಟಿಗೆ ಸಿಕ್ಕಲಿದ್ದಾರೆ. ಇಂಗ್ಲೆಂಡ್‌ ತಂಡವೂ ಇಕ್ಕಟ್ಟಿಗೆ ಸಿಕ್ಕಲಿದೆ. ಇಂಗ್ಲೆಂಡಿನ ಮೊದಲ ಟೆಸ್ಟ್‌ ಗೆಲುವಿನಲ್ಲಿ ಸ್ಟೋಕ್ಸ್‌ ಪಾತ್ರ ಮಹತ್ವದ್ದಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next