ಚೆನ್ನೈ: ಇಂಗ್ಲೆಂಡ್ ಟೆಸ್ಟ್ ನಾಯಕ ಬೆನ್ ಸ್ಟೋಕ್ಸ್ ಅವರು ದೀರ್ಘಕಾಲದ ಮೊಣಕಾಲು ಸಮಸ್ಯೆಯ ಹೊರತಾಗಿಯೂ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ ಕೆ) ತಂಡದ ಪರವಾಗಿ ಈ ಬಾರಿಯ ಐಪಿಎಲ್ ನಲ್ಲಿ ಆಡುವುದಾಗಿ ಘೋಷಿಸಿದ್ದಾರೆ.
ಮೊಣಕಾಲಿನ ಗಾಯವು ದೀರ್ಘಕಾಲದವರೆಗೆ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ನೀಡುವುದನ್ನು ತಡೆಯುತ್ತದೆ ಎಂದು ಸ್ಟೋಕ್ಸ್ ಹೇಳಿಕೊಂಡರು.
ವೆಲ್ಲಿಂಗ್ಟನ್ ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್ ವೇಳೆ ಸ್ಟೋಕ್ಸ್ ಬೌಲಿಂಗ್ ಮಾಡುವ ವೇಳೆ ಕಷ್ಟ ಅನುಭವಿಸಿದರು. ಇಂಗ್ಲೆಂಡ್ ತಂಡವು 162 ಓವರ್ ಬೌಲಿಂಗ್ ಮಾಡಿದರೂ ಸ್ಟೋಕ್ಸ್ ಮಾತ್ರ ಎರಡು ಓವರ್ ಗಿಂತ ಹೆಚ್ಚು ಬೌಲಿಂಗ್ ಮಾಡಲು ಸಾಧ್ಯವಾಗಲಿಲ್ಲ.
ಇದನ್ನೂ ಓದಿ:ಸರಕಾರಿ ಭೂಮಿಯಲ್ಲಿ ಸ್ಮಾರಕ ನಿರ್ಮಾಣ: ಹುತಾತ್ಮ ಯೋಧನ ತಂದೆಯನ್ನು ಥಳಿಸಿ ಬಂಧಿಸಿದ ಪೊಲೀಸರು
ಬೆನ್ ಸ್ಟೋಕ್ಸ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡವು ಈ ಬಾರಿಯ ಮಿನಿ ಹರಾಜಿನಲ್ಲಿ 16.25 ಕೋಟಿ ರೂ ನೀಡಿ ಖರೀದಿ ಮಾಡಿತ್ತು. ಸ್ಟೋಕ್ಸ್ ಗಾಗಿ ಸಿಎಸ್ ಕೆ ಜೊತೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಲಕ್ನೋ ಸೂಪರ್ ಜೈಂಟ್ಸ್, ಸನ್ ರೈಸರ್ಸ್ ಹೈದರಾಬಾದ್, ರಾಜಸ್ಥಾನ ರಾಯಲ್ಸ್ ತಂಡಗಳೂ ಹರಾಜಿನಲ್ಲಿ ಪೈಪೋಟಿ ನಡೆಸಿದ್ದವು.