Advertisement

ಕೆಲಸಕ್ಕೆಂದು ಹೋದ ಬೆಳುವಾಯಿಯ ವ್ಯಕ್ತಿ ನಾಪತ್ತೆ

10:36 PM Apr 26, 2023 | Team Udayavani |

ಮೂಡುಬಿದಿರೆ: ಬೆಳುವಾಯಿ ಗ್ರಾಮದ ಮೂಡಾಯಿಕಾಡ್‌ ನಿವಾಸಿ ಈಶ್ವರ (55) ಎ. 9ರಂದು ಕೆಲಸಕ್ಕೆಂದು ಹೊರಹೋದವರು ನಾಪತ್ತೆಯಾಗಿರುವುದಾಗಿ ಮೂಡುಬಿದಿರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅವರು ವಾಪಸ್‌ ಮನೆಗೆ ಬಾರದೇ ಅತ್ತ ಸಂಬಂಧಿಕರ ಮನೆಗೂ ಹೋಗದೆ ಕಾಣೆಯಾಗಿದ್ದಾರೆ ಎಂದು ಅವರ ಪುತ್ರ ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

ಚಹರೆ: ಸುಮಾರು 5.3 ಅಡಿ ಎತ್ತರ ಎಣ್ಣೆಗಪ್ಪು ಮೈಬಣ್ಣ , ದುಂಡು ಮುಖ, ಅರೆನರೆತ ಕಪ್ಪು ಮೀಸೆ ಹೊಂದಿರುವ ಈಶ್ವರ ಮನೆಯಿಂದ ಹೊರಗೆ ಹೋಗುವಾಗ ನೀಲಿ ಬಣ್ಣದ ಅರ್ಧತೋಳಿನ ಶರ್ಟ್‌, ಕಪ್ಪು ಪ್ಯಾಂಟ್‌ ಧರಿಸಿದ್ದರು. ಇವರು ತುಳು, ಕನ್ನಡ ಭಾಷೆ ಬಲ್ಲವರಾಗಿದ್ದು ವೀಳ್ಯದೆಲೆ ಅಡಿಕೆ ತಿನ್ನುವ ಹವ್ಯಾಸದವರು.

ಅವರ ಸುಳಿವು ಸಿಕ್ಕರೆ ಮೂಡುಬಿದಿರೆ ಪೊಲೀಸ್‌ ಠಾಣೆ (08258-236333)ಯನ್ನು ಅಥವಾ ಮಂಗಳೂರು ಪೊಲೀಸ್‌ ಆಯುಕ್ತರ ಕಚೇರಿ (0824-2220801)ಯನ್ನು ಸಂಪರ್ಕಿಸಬೇಕಾಗಿದೆ ಎಂದು ಪೊಲೀಸ್‌ ಪ್ರಕಟನೆಯಲ್ಲಿ ಕೋರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next