Advertisement

ಸಿದ್ಧಾರ್ಥ ಸಾವು ಅನುಮಾನಾಸ್ಪದ: ತನಿಖೆಗೆ ಒತ್ತಾಯ

03:24 PM Aug 01, 2019 | Team Udayavani |

ಬೇಲೂರು: ಉದ್ಯಮಿ ಬಿ.ಜಿ.ಸಿದ್ಧಾರ್ಥ ಸಾವು ಅನುಮಾನಸ್ಪದವಾಗಿದ್ದು ಅವರ ಸಾವಿನ ಬಗ್ಗೆ ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಯು.ಎಂ.ತೀರ್ಥಮಲ್ಲೇಶ್‌ ಒತಾಯ್ತಿಸಿದ್ದಾರೆ.

Advertisement

ಪ್ರತಿಷ್ಠಿತ ಉದ್ಯಮಿ: ಬೇಲೂರಿನಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ದೇಶದ ಪ್ರತಿಷ್ಠಿತ‌ ಉದ್ಯಮಿಯಾಗಿ ಕ್ರಿಯಾಶೀಲ ವ್ಯಕ್ತಿಯಾಗಿದ್ದ ಸಿದ್ಧಾರ್ಥ ಈಗಾಗಲೇ ತಮ್ಮ ಸಾವಿನ ಮುನ್ನಾ ಪತ್ರ ಬರೆದಿದ್ದು, ಅದರ ಮುಖಾಂತರ ಸಮಗ್ರ ತನಿಖೆ ನಡೆಸಿ ಅವರ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಯುವ ಜನರಿಗೆ ಉದ್ಯೋಗ: ಕಾಫಿ ಉದ್ಯಮವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಿ ಪೋಷಿಸಿದ ಅವರು, ಸಾವಿರಾರು ಯುವಕರಿಗೆ ಕಾಫಿಡೇ ಮೂಲಕ ಉದ್ಯೋಗ ನೀಡಿ ಕನ್ನಡಿಗರ ಮನದಲ್ಲಿ ಮಾತಾಗಿದ್ದು ಅವರು ಸರಳ ವ್ಯಕ್ತಿ ತ್ವದವರಾಗಿದ್ದವರು ಎಂದು ತಿಳಿಸಿದರು.

ಕಾಫಿ ಬೆಳೆಗಾರರಿಗೆ ಉತ್ತೇಜನ: ದೇಶ ದೇಶಗಳಲ್ಲಿ ಕಾಫಿಡೆ ಸ್ಥಾಪನೆ ಮಾಡುವ ಮೂಲಕ ಉತ್ತಮ ಗುಣ ಮಟ್ಟದ ಕಾಫಿ ಪರಿಚಯಿಸಿದರಲ್ಲದೇ ಶೈಕ್ಷಣಿಕವಾಗಿ ಶಾಲಾ ಕಾಲೇಜು ಸ್ಥಾಪನೆ ಕಾಫಿ ಬೆಳೆ ಬಗ್ಗೆ ಅರಿವಿದ್ದ ಅವರು ತಾಚೇ ಕಾಫಿ ತಳಿಗಳನ್ನು ಬೆಳೆದು ಇತರೆ ಬೆಳಗಾರರಿಗೆ ಉಚಿತವಾಗಿ ನೀಡಿ ಬೆಳೆಗಾರರರಲ್ಲಿ ಕಾಫಿ ಬಗ್ಗೆ ಉತ್ತೇಜನ ನೀಡಿ ಹಲವಾರು ತರಭೇತಿ ನೀಡುತ್ತಿದ್ದ ಮಹಾನ್‌ ವ್ಯಕ್ತಿ ಎಂದು ಬಣ್ಣಿಸಿದರು.

ಸರಳ ವ್ಯಕ್ತಿತ್ವ: ಸಿದ್ಧಾರ್ಥ ಅವರು ತಮ್ಮ ವೃತ್ತಿ ಜೀವನ ದಲ್ಲಿ ಎಂದಿಗೂ ತಮ್ಮ ಸರಳತೆಯನ್ನು ಬಿಡದೆ ಕಾರ್ಮಿಕರಿಂದ ಹಿಡಿದು ಯಾವುದೇ ವ್ಯಕ್ತಿ ಬಗ್ಗೆ ಹಗುರವಾಗಿ ಮಾತನಾಡದೇ ಎಲ್ಲರಿಗೂ ಗೌರವ ಕೊಡುವ ವ್ಯಕ್ತಿಯಾಗಿದ್ದರು ಎಂದರು.

Advertisement

ಅವರ ಸಾವಿನಿಂದ ಕಾಫಿ ಉದ್ಯಮ ಸೊರಗು ವಂತಾಗಿದೆ. ಅವರ ಸಾವಿನ ಸುದ್ದಿ ತಿಳಿಯುತ್ತಿದಂತೆ ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳ ಕಾಫಿ ಬೆಳೆಗಾರರು ಮತ್ತು ಕಾರ್ಮಿಕರು ಎಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಸುಮಾರು 8 ಲಕ್ಷ ಜನರು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಹಾಸನ ಜಿಲ್ಲಾ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ತೊ.ಚ. ಅನಂತ ಸುಬ್ಟಾ ರಾಯ, ತಾಲೂಕು ಅಧ್ಯಕ್ಷ ಗೋವಿಂದಶೆಟ್ಟಿ, ಸಂಘ ಟನಾ ಕಾರ್ಯದರ್ಶಿ ಉದಯ್‌, ಸುಬ್ರಹ್ಮಣ್ಯ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next