Advertisement

ಬೆಳ್ತಂಗಡಿ ಮಿನಿ ವಿಧಾನಸೌಧ: ಪ್ರವೇಶ ನಿರ್ಬಂಧ

12:12 AM Mar 21, 2020 | mahesh |

ಬೆಳ್ತಂಗಡಿ: ಶುಕ್ರವಾರ ಬೆಳ್ತಂಗಡಿ ಮಿನಿ ವಿಧಾನಸೌಧ ಸಹಿತ ಸರಕಾರಿ ಕಚೇರಿಗಳು ಖಾಲಿ ಖಾಲಿಯಾಗಿದ್ದವು. ಮಿನಿ ವಿಧಾನಸೌಧದಲ್ಲಿ ಸಾರ್ವಜನಿ ಕರಿಗೆ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸಾರ್ವಜನಿಕರು ದಯವಿಟ್ಟು ಸಹಕರಿಸಬೇಕು. ಅವಹಾಲು ಗಳನ್ನು ಹಿಡಿದುಕೊಂಡು ಬಂದಲ್ಲಿ ಮಿನಿ ವಿಧಾನಸೌಧದ ಮುಂಭಾಗದಲ್ಲಿರುವ ಕೌಂಟರ್‌ನಲ್ಲಿ ನೀಡಬಹುದು. ಅದೇ ರೀತಿ ಈ ದಿವಸಗಳಲ್ಲಿ ಯಾವುದೇ ವಿಷಯದಲ್ಲೂ ಸಿಬಂದಿಯನ್ನು ಭೇಟಿ ಮಾಡಲು ಅವಕಾಶ ಇರುವುದಿಲ್ಲ ಎಂದು ತಹಶೀಲ್ದಾರ್‌ ಗಣಪತಿ ಶಾಸ್ತ್ರಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Advertisement

ಕೋವಿಡ್-19 ಬಂದ್‌ ಹಿನ್ನೆಲೆಯ ವಿಚಾರವಾಗಿ ಗ್ರಾಮೀಣ ಭಾಗದ ಮಂದಿಗೆ ಮಾಹಿತಿ ಕೊರತೆಯಿಂದ ಸರಕಾರಿ ಕಚೇರಿಗಳಿಗೆ ಆಗಮಿಸಿ, ಹಿಂದಿರುಗುವ ದೃಶ್ಯ ಕಂಡುಬಂತು. ಅಟಲ್‌ ಜೀ ಸೇವಾ ಕೇಂದ್ರ, ಆಧಾರ್‌ ಕೇಂದ್ರ, ನೋಂದಣಿ ಕಚೇರಿಗಳು ನಿತ್ಯವೂ ತುಂಬಿರುತ್ತಿದ್ದು, ಶುಕ್ರವಾರ ಸಿಬಂದಿಯಿದ್ದರೂ ಕಚೇರಿ ಖಾಲಿಯಾಗಿತ್ತು. ಗ್ರಾ.ಪಂ. ಕಚೇರಿಗಳು, ಪುರಸಭಾ ಕಚೇರಿಗಳಲ್ಲೂ ಸೇವೆಗಳು ಸ್ಥಗಿತಗೊಂಡಿತ್ತು.

ಶಾಲಾ-ಕಾಲೇಜಿಗೆ ರಜೆ ಘೋಷಿಸಲಾ ಗಿದ್ದರೂ ಶಿಕ್ಷಕರು ಕಾಲೇಜಿಗೆ ಹಾಜರಾಗ ಬೇಕಿದ್ದರಿಂದ ಕಾಲೇಜುಗಳು ಬಣಗುಡು ತ್ತಿತ್ತು. ಹೆಚ್ಚಿನ ಶಿಕ್ಷಕರು ಮಾಸ್ಕ್ ಧರಿಸಿ ಕಾಲೇಜಿಗೆ ಆಗಮಿಸುತ್ತಿದ್ದರು. ಪೇಟೆಗಳಲ್ಲಿ ಅಂಗಡಿ ಮುಂಗಟ್ಟು ಎಂದಿನಂತೆ ತೆರೆದಿದ್ದವು.

ತೆರೆದ ಟ್ಯೂಶನ್‌ ತರಗತಿ
ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ಮಂದಿ ಸೇರದೆ ಮನೆಯಲ್ಲೇ ಉಳಿ ಯುವಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ ಬೆಳ್ತಂಗಡಿ ತಾಲೂಕಿನಲ್ಲಿ ಟ್ಯೂಶನ್‌ ಕ್ಲಾಸ್‌ಗಳು ತೆರೆದಿರುವ ಕುರಿತು ದೂರುಗಳು ಕೇಳಿಬಂದಿದ್ದವು. ಈ ಕುರಿತು ಗಮನಕ್ಕೆ ಬಂದ ಕೆಲವು ಟ್ಯೂಶನ್‌ ತರಗತಿಗಳು ಮಧ್ಯಾಹ್ನ ಬಳಿಕ ತರಗತಿಯನ್ನು ರದ್ದುಗೊಳಿದ್ದವು. ಮತ್ತೂಂದೆಡೆ ಔಷಧ ಮಳಿಗೆಗಳಲ್ಲಿ ಸಾನಿಟರಿ ಲಭ್ಯವಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next