Advertisement

ಎಸೆಸೆಲ್ಸಿ: ಬೆಳ್ತಂಗಡಿಗೆ ಶೇ. 91.64

11:19 AM May 01, 2019 | Naveen |

ಬೆಳ್ತಂಗಡಿ: ಈ ಬಾರಿಯ ಎಸೆಸೆಲ್ಸಿ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು, ಬೆಳ್ತಂಗಡಿ ತಾಲೂಕು ಶೇ. 91.64 ಫಲಿತಾಂಶ ಪಡೆಯುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದೆ. (ಖಾಸಗಿಯಾಗಿ ಪರೀಕ್ಷೆ ಬರೆದವರನ್ನು ಸೇರಿಸಿದರೆ ಜಿಲ್ಲೆಗೆ ದ್ವಿತೀಯ). ಪರೀಕ್ಷೆಗೆ ಹಾಜರಾದ ಒಟ್ಟು 3,470 ವಿದ್ಯಾರ್ಥಿ ಗಳಲ್ಲಿ 3,180 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ಬಾರಿ ಶೇ. 88.81 ಫ‌ಲಿತಾಂಶ ದಾಖಲಾಗಿತ್ತು.

Advertisement

ಉಜಿರೆಯ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಜ್ಯೋತಿಕಾ ಎನ್‌. ಅವರು 622 ಅಂಕಗಳನ್ನು ಪಡೆಯುವ ಮೂಲಕ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಉಜಿರೆ ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆಯ ವಿಕ್ರಂ ಶೆಟ್ಟಿ ಹಾಗೂ ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ ನೀತು ಮೆರಿನ್‌ ಅವರು 621 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.

ಕಳೆದ 7 ವರ್ಷಗಳಿಂದ ಸತತ ಶೇ. 100 ಫಲಿತಾಂಶ ಪಡೆಯುತ್ತಾ ಬಂದಿದ್ದ ಗುರುವಾಯನಕೆರೆ ಪ್ರೌಢಶಾಲೆಯು ಈ ಬಾರಿಯೂ ಶೇ. 100 ಫಲಿತಾಂಶ ಪಡೆದ ದಾಖಲೆ ನಿರ್ಮಿಸಿದೆ. ತಾಲೂಕಿನಲ್ಲಿ ಒಟ್ಟು 5 ಸರಕಾರಿ ಪ್ರೌಢಶಾಲೆಗಳು ಹಾಗೂ 16 ಖಾಸಗಿ ಶಾಲೆಗಳು ಶೇ. 100 ಫಲಿತಾಂಶ ದಾಖಲಿಸಿದೆ.

ಶೇ. 100 ದಾಖಲಿಸಿದ ಖಾಸಗಿ ಶಾಲೆಗಳು
ತಾಲೂಕಿನ ಖಾಸಗಿ ಶಾಲೆಗಳಾದ ಧರ್ಮಸ್ಥಳ ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆ, ಬೆಳ್ತಂಗಡಿ ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆ, ವೇಣೂರು ನಿಟ್ಟಡೆ ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲೆ, ಬೆಳ್ತಂಗಡಿ ಹಳೆಕೋಟೆ ವಾಣಿ ಆಂಗ್ಲ ಮಾಧ್ಯಮ ಶಾಲೆ, ಕಾಯರ್ತಡ್ಕ ದಿವ್ಯಜ್ಯೋತಿ ಆಂಗ್ಲ ಮಾಧ್ಯಮ ಶಾಲೆ, ಮಡಂತ್ಯಾರು ಸೇಕ್ರೆಡ್‌ ಹಾರ್ಟ್‌ ಆಂಗ್ಲ ಮಾಧ್ಯಮ ಶಾಲೆ, ಲಾೖಲ ಸಂತ ಮೇರಿಸ್‌ ಆಂಗ್ಲ ಮಾಧ್ಯಮ ಶಾಲೆ, ನೆರಿಯಾ ಸಂತ ಥೋಮಸ್‌ ಅನುದಾನಿತ ಪ್ರೌಢಶಾಲೆ, ಕೊಕ್ಕಡ ಸಂತ ಫ್ರಾನ್ಸೀಸ್‌ ಆಂಗ್ಲಮಾಧ್ಯಮ ಶಾಲೆ, ಕಾಜೂರು ರಹ್ಮಾನಿಯಾ ಪ್ರೌಢಶಾಲೆ, ಕಕ್ಕಿಂಜೆ ಕಾರುಣ್ಯ ಆಂಗ್ಲ ಮಾಧ್ಯಮ ಶಾಲೆ, ಅಳದಂಗಡಿ ಪಿಲ್ಯ ಗುಡ್‌ ಫ್ಯೂಚರ್‌ ಆಂಗ್ಲ ಮಾಧ್ಯಮ ಶಾಲೆ, ನಾರಾವಿ ಸಂತ ಪೌಲ್ ಆಂಗ್ಲ ಮಾಧ್ಯಮ ಶಾಲೆ, ತೋಟತ್ತಾಡಿ ಸಂತ ಸಾವಿಯೋ ಆಂಗ್ಲ ಮಾಧ್ಯಮ ಶಾಲೆ, ವೇಣೂರು ವಿದ್ಯೋದಯ ಆಂಗ್ಲ ಮಾಧ್ಯಮ ಶಾಲೆ, ಉರುವಾಲು ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆಗಳು ಶೇ. 100 ಫಲಿತಾಂಶ ಪಡೆದುಕೊಂಡಿವೆ.

ಶೇ. 100 ದಾಖಲಿಸಿದ ಸರಕಾರಿ ಶಾಲೆಗಳು
ಮಚ್ಚಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸತತ ಒಂಬತ್ತನೇ ಬಾರಿಗೆ ಶೇ. 100 ಫಲಿತಾಂಶ ಪಡೆದುಕೊಂಡಿದೆ. ಗುರುವಾಯನಕೆರೆ ಸರಕಾರಿ ಪ್ರೌಢಶಾಲೆ ಸಹಿತ ಸರಕಾರಿ ಪ್ರೌಢಶಾಲೆ ನೇಲ್ಯಡ್ಕ, ಸರಕಾರಿ ಪ್ರೌಢಶಾಲೆ ಮಿತ್ತಬಾಗಿಲು, ಸರಳಿಕಟ್ಟೆ ಸರಕಾರಿ ಪ್ರೌಢಶಾಲೆ ಶೇ. 100 ಫಲಿತಾಂಶವನ್ನು ದಾಖಲಿಸಿದೆ.

Advertisement

ಸಂಘಟಿತ ಪ್ರಯತ್ನ
ಹಿಂದಿನ ವರ್ಷಗಳಿಗೆ ಹೋಲಿಸಿದರೆ ತಾ|ನಲ್ಲಿ ಈ ಬಾರಿ ಉತ್ತಮ ಫಲಿತಾಂಶ ಪಡೆದಿದ್ದೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಹೀಗೆ ಎಲ್ಲರ ಸಂಘಟಿತ ಪ್ರಯತ್ನದಿಂದ ಉತ್ತಮ ಫಲಿತಾಂಶ ಸಾಧ್ಯವಾಗಿದೆ. ಸಾಮಾನ್ಯ ವಿದ್ಯಾರ್ಥಿಗಳ ಜತೆ ಖಾಸಗಿ ಪರೀಕ್ಷೆ ಬರೆದವರನ್ನೂ ಸೇರಿಸಿದರೆ ತಾ| ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆಯುತ್ತದೆ. ಖಾಸಗಿ ಶಾಲೆಗಳ ಜತೆಗೆ ಸರಕಾರಿ ಶಾಲೆಗಳೂ ಫ‌ಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದ್ದು, ಹೆಚ್ಚಿನ ಶಾಲೆಗಳು ಶೇ. 100 ಫ‌ಲಿತಾಂಶ ಪಡೆದಿವೆ.
– ಸತೀಶ್‌,
ಕ್ಷೇತ್ರ ಶಿಕ್ಷಣಾಧಿಕಾರಿ, ಬೆಳ್ತಂಗಡಿ

Advertisement

Udayavani is now on Telegram. Click here to join our channel and stay updated with the latest news.

Next