Advertisement

‘ಹಣದ ವ್ಯಾಮೋಹದಿಂದ ಮಕಳ ಸಂಸ್ಕಾರಯುತ ಬದುಕಿಗೆ ಹಿನ್ನಡೆ’ 

03:22 PM Nov 19, 2018 | |

ಬೆಳ್ತಂಗಡಿ: ಪ್ರಸ್ತುತ ದಿನಗಳಲ್ಲಿ ಮಕ್ಕಳು ಅಜ್ಜ-ಅಜ್ಜಿ, ತಂದೆ-ತಾಯಿಯರ ಪ್ರೀತಿ, ವಾತ್ಸಲ್ಯದಿಂದ ದೂರವಾಗುತ್ತಿದ್ದು, ಅದರಿಂದ ಸಂಸ್ಕಾರದ ಕಲಿಕೆಯೂ ದೂರವಾಗುತ್ತದೆ. ಹೆತ್ತವರು ಹಣದ ಹಿಂದೆ ಹೋಗಿ ಮಕ್ಕಳ ಸಂಸ್ಕಾರಯುತ ಬದುಕಿಗೆ ಹೊಡೆತ ನೀಡುತ್ತಿದ್ದಾರೆ ಎಂದು ಮಂಗಳೂರು ಶ್ರೀ  ರಾಮಕೃಷ್ಣ ಬಾಲಕಾಶ್ರಮದ ಸ್ವಾಮಿ ಧರ್ಮವ್ರತಾನಂದಜಿ ತಿಳಿಸಿದರು.

Advertisement

ಅವರು ರವಿವಾರ ಗುರುವಾಯನಕೆರೆ ಹವ್ಯಕ ಭವನದ ಬಳಿ ಪಂ| ದೀನದಯಾಳ್‌ ಉಪಾಧ್ಯಾಯ ಸೇವಾ ಟ್ರಸ್ಟ್‌ ವತಿಯಿಂದ ನಿರ್ಮಿಸಲಾದ ಅಷ್ಟಭುಜಾಕೃತಿಯ ಶ್ರೀ ವೇದವ್ಯಾಸ ಶಿಶುಮಂದಿರದ ಲೋಕಾರ್ಪಣೆ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಆರ್‌ಎಸ್‌ಎಸ್‌ ದಕ್ಷಿಣ ಮಧ್ಯ ಕ್ಷೇತ್ರಿಯ ಕಾರ್ಯಕಾರಿಣಿ ಸದಸ್ಯ ಡಾ| ಪ್ರಭಾಕರ ಭಟ್‌ ಕಲ್ಲಡ್ಕ ಮಾತನಾಡಿ, ಭಾರತವು ವಿಶ್ವಗುರುವಿನ ಸ್ಥಾನದಲ್ಲಿ ನಿಲ್ಲಬೇಕಾದರೆ ರಾಷ್ಟ್ರೀಯತೆಯ ಮನೋಭಾವವುಳ್ಳ ಯುವಶಕ್ತಿಯನ್ನು ಬೆಳೆಸಬೇಕು. ಶಿಶುಮಂದಿರದ ಮೂಲಕ ಸಂಸ್ಕಾರವನ್ನು ನೀಡಲಾಗುತ್ತಿದೆ. ಇಂತಹ ಶಿಕ್ಷಣ ಪಡೆದಾಗ ಮಕ್ಕಳು ಬದಲಾವಣೆಗೆ ಕಾರಣವಾಗುವ ಜತೆಗೆ ಮತ್ತೊಬ್ಬರಿಗೆ ಬದುಕುವ ಅವಕಾಶವನ್ನೂ ನೀಡುತ್ತಾರೆ ಎಂದರು.

ಕುವೆಟ್ಟು ಗ್ರಾ.ಪಂ. ಅಧ್ಯಕ್ಷ ಅಶೋಕ್‌ ಕೋಟ್ಯಾನ್‌, ತಾ.ಪಂ. ಸದಸ್ಯ ಗೋಪಿನಾಥ ನಾಯಕ್‌, ಟ್ರಸ್ಟ್‌ ಅಧ್ಯಕ್ಷ ಬಿ. ವಿಟ್ಠಲ ಭಟ್‌, ಕಟ್ಟಡ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ, ಮಾತೃ ಮಂಡಳಿ ಅಧ್ಯಕ್ಷೆ ರಕ್ಷಿತಾ ಶೆಟ್ಟಿ ಉಪಸ್ಥಿತರಿದ್ದರು.

ಸಮ್ಮಾನ
ಶಿಶುಮಂದಿರಕ್ಕೆ 40 ಸೆಂಟ್ಸ್‌ ಜಾಗವನ್ನು ದಾನವಾಗಿ ನೀಡಿದ ದಿ| ವಾಮನ ನಾಯಕ್‌ ಅವರ ಪುತ್ರ ಗೋಪಿನಾಥ ನಾಯಕ್‌, ಟ್ರಸ್ಟ್ ಅಧ್ಯಕ್ಷ ಬಿ. ವಿಟ್ಠಲ ಭಟ್‌, ಶಿಶುಮಂದಿರದ ಅಭಿವೃದ್ಧಿಗೆ ಸಹಕರಿಸಿದ ಪದ್ಮಿನಿ ನಾಯರ್‌, ಎಂ.ಜಿ. ಗಣೇಶ್‌, ರಾಜಗೋಪಾಲ ಭಟ್‌, ಜಯಶ್ರೀ ದಂಪತಿ, ಪುರುಷೋತ್ತಮ, ಆನಂದ ಕೋಟ್ಯಾನ್‌, ರಚನಾ ಕಾಶಿನಾಥ್‌, ಸುಧಾಮಣಿ, ಸುಜಾತಾ ಮಾತಾಜಿ, ಪೂರ್ಣಿಮಾ ಮಾತಾಜಿ ಅವರನ್ನು ಸಮ್ಮಾನಿಸಲಾಯಿತು. ಶಿಶುಮಂದಿರ ಸಲಹೆಗಾರ ರಾಜಗೋಪಾಲ ಭಟ್‌ ಪ್ರಸ್ತಾವಿಸಿದರು. ಅಧ್ಯಕ್ಷೆ ರಚನಾ ಕಾಶೀನಾಥ್‌ ಸ್ವಾಗತಿಸಿ, ಉಪಾಧ್ಯಕ್ಷೆ ಇಂದುಮತಿ ವಂದಿಸಿದರು. ಕಾರ್ಯದರ್ಶಿ ಸುಧಾಮಣಿ, ಶಿಕ್ಷಕಿ ಮಂಗಳಾ ನಿರೂಪಿಸಿದರು.

Advertisement

 ಸಂಸ್ಕಾರ ಅಗತ್ಯ
ಇಂದು ನಾವು ಮಕ್ಕಳಿಗೆ ಪ್ರೀತಿ ನೀಡದೇ ಇದ್ದರೆ ನಮಗೆ ಅವಶ್ಯವಿರುವಾಗ ಅವರ ಪ್ರೀತಿಯೂ ಲಭ್ಯವಾಗುವುದಿಲ್ಲ. ಹೀಗಾಗಿ ಸಂಸ್ಕಾರ ಅಗತ್ಯವಾಗಿದ್ದು, ಅದಕ್ಕಾಗಿ ನಾವು ಕಡಿಮೆ ಸತ್ಯದಿಂದ ಸಂಪೂರ್ಣ ಸತ್ಯದಕಡೆಗೆ ಮುಂದಡಿ ಇಡಬೇಕು.
 - ಸ್ವಾಮಿ ಧರ್ಮವ್ರತಾನಂದಜಿ
ಶ್ರೀ ರಾಮಕೃಷ್ಣ ಬಾಲಕಾಶ್ರಮ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next