Advertisement

ಮೂಲಸೌಕರ್ಯ ಅಭಿವೃದ್ಧಿಯೇ ವಾರ್ಡ್‌ಗಳಿಗೆ ಸವಾಲು

10:30 AM May 26, 2019 | Team Udayavani |

ಚೈತ್ರೇಶ್‌ ಇಳಂತಿಲ
ಬೆಳ್ತಂಗಡಿ:
ತಾಲೂಕಿನ ಉಜಿರೆ ಹಾಗೂ ಕೊಯ್ಯೂರು ಗ್ರಾ.ಪಂ.ಗಳ 3 ವಾರ್ಡ್‌ಗಳಿಗೆ ಉಪ ಚುನಾವಣೆ ಮೇ 29ರಂದು ನಡೆಯಲಿದ್ದು, ವಾರ್ಡ್‌ ಗಳಲ್ಲಿ ಪ್ರಗತಿಯ ನಿರೀಕ್ಷೆ ಹೆಚ್ಚಿದೆ.

Advertisement

ಉಜಿರೆ ವಾರ್ಡ್‌ ನಂ. 4ರಲ್ಲಿ ಇರುವ ರಸ್ತೆಗಳ ಅಭಿವೃದ್ಧಿಗಾಗಿ ಶಾಶ್ವತ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಬೇಡಿಕೆ ಹೆಚ್ಚಿದೆ. ಉಜಿರೆ ಗ್ರಾ.ಪಂ.ನ ಪಟ್ಟಣ ಅಭಿವೃದ್ಧಿಯಲ್ಲಿ ಮುಂದಿದ್ದರೂ ವಾರ್ಡ್‌ಗಳಲ್ಲಿ ಕೊರತೆ ಎದ್ದು ಕಾಣುತ್ತಿದೆ. ಈ ಬಾರಿ ಬೇಸಗೆಯಲ್ಲಿ ನೀರಿನ ಅಭಾವ ಎದುರಾಗಿದ್ದು, ಶ್ರೀನಗರದಿಂದ ಕಲ್ಲೆ ವರೆಗೆ ನೀರಿನ ಪೈಪ್‌ಲೈನ್‌ ಅಳವಡಿಸುವಂತೆ ಹಲವು ವರ್ಷಗಳಿಂದ ಕೂಗು ಕೇಳಿಬಂದಿದ್ದರೂ ಇನ್ನು ಫಲಪ್ರದವಾಗಿಲ್ಲ.

ನಿವೇಶನ ಹಂಚಿಕೆಗೆ ಬೇಡಿಕೆ
ನಿವೇಶನ ಇನ್ನೇನು ಅರ್ಜಿಸಲ್ಲಿಸಿ ಹಂಚಿಕೆಯಾಗ ಬೇಕು ಅನ್ನುವಷ್ಟರಲ್ಲಿ ಚುನಾವಣೆ ನೀತಿಸಂಹಿತೆಯಿಂದ ಕೆಲಸಗಳು ತಟಸ್ಥಗೊಂಡಿವೆ. ದಾರಿದೀಪ ದುರಸ್ತಿ, ಹೊಸ ದೀಪ ಅಳವಡಿಕೆ ಅಳವಡಿಕೆಯಾಗಬೇಕು. ರಸ್ತೆ ಬದಿ ಸ್ವಚ್ಛತೆಗೆ ಆದ್ಯತೆ ಸಿಗಬೇಕಿದೆ.

ಉಜಿರೆ ವಾರ್ಡ್‌ ನಂ. 4ರಲ್ಲಿ ಅತ್ತಾಜೆ ಶಾಲೆಗೆ ಆವರಣ ಗೊಡೆ ನಿರ್ಮಾಣವಾಗಿಲ್ಲ. ಕುಡಕಂಡ ಎಂಬಲ್ಲಿ ಇರು ಕೊಳವೆ ಬಾವಿ ಬತ್ತಿಹೋಗಿದ್ದು, ಹೊಸ ಕೊಳವೆ ಬಾವಿ ಕೊರೆಯಲು ಬೇಡಿಕೆ ಹೆಚ್ಚಿದೆ. ದಾರಿದೀಪ ಕೆಲಸ ಸಂಪೂರ್ಣವಾಗಿಲ್ಲ. ಸುಮದಾಯ ಭವನ ನಿರ್ಮಾಣದ ಬೇಡಿಕೆಯೂ ಇದೆ.

ಕೊಯ್ಯೂರು ವಾರ್ಡ್‌ – 2
ಕೊಯ್ಯೂರು ಕೃಷಿ ಪ್ರಧಾನ ಕ್ಷೇತ್ರವಾಗಿದ್ದು, ಉತ್ತಮ ಸ್ಥಿತಿವಂತರಲ್ಲದಿದ್ದರೂ ಶ್ರಮಿಕರು. ಆದರೆ ನಿರೀನ ಅಭಾವ ತಲೆದೋರಿದ್ದು, ರಸ್ತೆ ದುರಸ್ತಿಯಾಗಿಲ್ಲ. ಕೊಯ್ಯೂರು ಮೂಲಕ ಉಪ್ಪಿನಂಗಡಿ, ಗೇರುಕಟ್ಟೆ, ಬೆಳ್ತಂಗಡಿ ಸಂಪರ್ಕಿ ಸುವ ರಸ್ತೆಗಳು ತೀರ ಹದಗೆಟ್ಟಿವೆ. ಇಲ್ಲಿನ ದ.ಕ. ಜಿ.ಪಂ. ಹಿ.ಪ್ರಾ. ಶಾಲೆ ಕೊಯ್ಯೂರು ದೇವಸ್ಥಾನ 50 ವರ್ಷ ಸಂದಿದ್ದು, ಮುಂದಿನ ವರ್ಷ ಬೆಳ್ಳಿಹಬ್ಬ ಆಚರಿಸುತ್ತಿದೆ. ಶೌಚಾಲಯ, ಆವರಣ ಗೊಡೆ ನಿರ್ಮಾಣವಾಗದೆ ಶಾಲೆ ಬಡವಾಗಿದೆ. ಇನ್ನೂ ಶಾಶ್ವತ ರಸ್ತ, ನೀರು ದಾರಿದೀಪದ ನಿರೀಕ್ಷೆಯಲ್ಲಿದ್ದಾರೆ ನಿವಾಸಿಗಳು. ಸ್ಥಳೀಯರು ಎಣಿಲೆಗುತ್ತು ಎಂಬಲ್ಲಿ 97-98ರಲ್ಲಿ ಕಂಬಳ ಕ್ರೀಡೆಯನ್ನು ಆರಂಭಿಸಿ ಸತತ ಮೂರು ವರ್ಷ ವಲಯಮಟ್ಟದ ಕಂಬಳ ಜರಗಿತ್ತು. ಬಳಿಕ ನಿಂತುಹೋಗಿದೆ.

Advertisement

ಅದೃಷ್ಟ ಪರೀಕ್ಷೆಯ ಕಣದಲ್ಲಿರುವವರು
ಕೊಯ್ಯೂರು ವಾರ್ಡ್‌ – 2ರಲ್ಲಿ ನೇರ ಸ್ಪರ್ಧೆ ಏರ್ಪಟ್ಟಿದ್ದು, ಬಾಬು ಹೇಮಲ್ಕೆ (ಕಾಂಗ್ರೆಸ್‌ ಬೆಂಬಲಿತ) ಕೊರಗಪ್ಪ (ಬಿಜೆಪಿ ಬೆಂಬಲಿತ) ಕಣದಲ್ಲಿದ್ದಾರೆ. ಉಜಿರೆ ವಾರ್ಡ್‌ ನಂ. 4ರಲ್ಲಿ ಸುಮಂಗಲಾ (ಕಾಂಗ್ರೆಸ್‌ ಬೆಂಬಲಿತ) ಹೇಮಾವತಿ (ಬಿಜೆಪಿ ಬೆಂಬಲಿತ), ವಾಡ್‌ ನಂ. 11ರಲ್ಲಿ ಜಿನ್ನಪ್ಪ ನಾಯ್ಕ (ಕಾಂಗ್ರೆಸ್‌ ಬೆಂಬಲಿತ) ಸತೀಶ್‌(ಬಿಜೆಪಿ ಬೆಂಬಲಿತ) ಬೆಂಬಲಿತರಾಗಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.


ಉಜಿರೆ: ವಾರ್ಡ್‌ ನಂ. 4
ಮೀಸಲಾತಿ: ಪರಿಶಿಷ್ಟ ಪಂಗಡ (ಮಹಿಳೆ) ವ್ಯಾಪ್ತಿ: ಶಾಂತಿನಗರ, ವಿಜಯನಗರ, ಜಯನಗರ ಮತಗಳು: ಪುರುಷರು-524, ಮಹಿಳೆಯರು-545, ಒಟ್ಟು -1,069. ಮತಗಟ್ಟೆ ಸ್ಥಳ: ಎಸ್‌.ಡಿ.ಎಂ. ಬಿಎಡ್‌ ಕಾಲೇಜು ಉಜಿರೆ

ಉಜಿರೆ: ವಾರ್ಡ್‌ ನಂ. 11

ಮೀಸಲಾತಿ: ಪರಿಶಿಷ್ಟ ಪಂಗಡ ವ್ಯಾಪ್ತಿ: ಪಾರ, ಅತ್ತಾಜೆ, ಕುಂಟಿನಿ, ಇಜಂಕುರಿ ಮತಗಳು: ಪುರುಷರು – 385, ಮಹಿಳೆಯರು-398. ಒಟ್ಟು -783 ಮತಗಟ್ಟೆ ಸ್ಥಳ : ಎಸ್‌.ಡಿ.ಎಂ. ಅನುದಾನಿತ ಹಿ.ಪ್ರಾ. ಶಾಲೆ, ಉಜಿರೆ

ಕೊಯ್ಯೂರು: ವಾರ್ಡ್‌- 2

ಮೀಸಲಾತಿ: ಪರಿಶಿಷ್ಟ ಜಾತಿ ವ್ಯಾಪ್ತಿ: ಕನ್ನಾಜೆ, ಕೊಯ್ಯೂರು ಬೈಲು, ಪಿಜಕ್ಕಳ ಬೈಲು, ಉಣಿಲೆಬೈಲು ಮತಗಳು: ಪುರುಷರು-469, ಮಹಿಳೆಯರು-469, ಒಟ್ಟು -938 ಮತಗಟ್ಟೆ ಸ್ಥಳ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ ಹಿರಿಯ ಪ್ರಾಥಮಿಕ ಶಾಲೆ ಕೊಯ್ಯೂರು.
Advertisement

Udayavani is now on Telegram. Click here to join our channel and stay updated with the latest news.

Next