Advertisement

Belthangady ಶಾಸಕ ಹರೀಶ್‌ ಪೂಂಜ ಠಾಣೆಗೆ ಹಾಜರು; ಜಾಮೀನು

01:31 AM May 23, 2024 | Team Udayavani |

ಬೆಳ್ತಂಗಡಿ: ಪೊಲೀಸರು ನೋಟಿಸ್‌ ನೀಡಿದ ವಿಚಾರದಲ್ಲಿ ಶಾಸಕ ಹರೀಶ್‌  ಪೂಂಜ ರಾತ್ರಿ 9.30ಕ್ಕೆ ಠಾಣೆಗೆ ಹಾಜ ರಾದರು. ಬಳಿಕ ಬೆಳ್ತಂಗಡಿ ಠಾಣಾ 58/2024, ಕಲಂ: 143, 147, 341, 504, 506 ಜತೆಗೆ 149 ಐಪಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಹರೀಶ್‌ ಪೂಂಜರನ್ನು ಬೆಳ್ತಂಗಡಿ ಠಾಣೆಯಲ್ಲಿ ವಿಚಾರಣೆ ನಡೆಸಿ, ಸ್ಟೇಶನ್‌ ಜಾಮೀನಿನಲ್ಲಿ ಬಿಡುಗಡೆ ಮಾಡಲಾಗಿರುತ್ತದೆ ಎಂದು ಠಾಣೆಯ ಮೂಲಗಳು ತಿಳಿಸಿವೆ.

Advertisement

ವಿಚಾರಣೆ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ಸುನಿಲ್‌ ಕುಮಾರ್‌, ಶಾಸಕರ ಬಂಧನ ಯತ್ನ ಅತ್ಯಂತ ಖಂಡನೀಯ. ಪಾಕಿಸ್ಥಾನಕ್ಕೆ ಜಿಂದಾಬಾದ್‌ ಹಾಕಿದವನಿಗೆ ನೋಟಿಸ್‌ ನೀಡಲು 4 ದಿನ ತೆಗೆದುಕೊಂಡವರು ಓರ್ವ ಜನಪ್ರತಿನಿಧಿಯ ಬಂಧನ ಹುನ್ನಾರ ಕಂಡಾಗ ರಾಜ್ಯ ಯಾವ ಪ್ರಜಾಪ್ರಭುತ್ವದಲ್ಲಿದೆ ಎಂಬ ಪ್ರಶ್ನೆ ಮೂಡುತ್ತದೆ. ನಾವೆಲ್ಲ ಶಾಸಕರು ಈ ಪ್ರಕರಣ ತಾರ್ಕಿಕ ಹಂತ ಕಾಣುವವರೆಗೆ ನಾವು ಬಿಡುವುದಿಲ್ಲ. ನಾಳೆ ನಾಡಿದ್ದರಲ್ಲಿ ಗೃಹಸಚಿವರನ್ನು ಭೇಟಿಯಾಗಿ ಉತ್ತರ ಕೇಳುತ್ತೇವೆ. ರಾಜಕೀಯ ಹುನ್ನಾರವಾದರೆ ವಿಧಾನಸಭೆ ನಡೆಸಲು ಬಿಡುವುದಿಲ್ಲ. ಶಾಸಕರು ಸೌಜನ್ಯದಿಂದ ವರ್ತಿಸಿದರೂ ಪೊಲೀಸರು ಗೂಂಡಾ ವರ್ತನೆ ತೋರಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

 

Advertisement

Udayavani is now on Telegram. Click here to join our channel and stay updated with the latest news.

Next