Advertisement
ವಿವಿಧ ಇಲಾಖೆಗಳು, ನಾನಾ ವ್ಯಾಪಾರಗಳು ಸೇರಿ 318 ಮಳಿಗೆಗಳು ಇಲ್ಲಿವೆ. ಪುಸ್ತಕಗಳು, ಕೃಷಿ ಸಲಕರಣೆಗಳು, ವಿಜ್ಞಾನಕ್ಕೆ ಸಂಬಂಧಿಸಿದ ವಸ್ತುಗಳು, ಕಲೆ, ಸಂಸ್ಕೃತಿ ಹಾಗೂ ಗ್ರಾಮೀಣ ಕರಕುಶಲ ಕಲೆಗಳಿಗೆ ಸಂಬಂಧಪಟ್ಟ ಮಣ್ಣಿನ ಮಡಿಕೆ, ಬುಟ್ಟಿ, ಪಾರಂಪರಿಕವಾಗಿ ಬಳಸುತ್ತಿದ್ದ ಗುಡಿಕೈಗಾರಿಕೆ ವಸ್ತುಗಳು, ಕೈಮಗ್ಗದ ಸೀರೆಗಳು, ಮಕ್ಕಳು, ಮಹಿಳೆಯರಿಗೆ ಬೇಕಾದ ತರಹೇವಾರಿ ವಸ್ತುಗಳ ಮಳಿಗೆಗಳು ಪ್ರೇಕ್ಷಕರ ಗಮನ ಸೆಳೆಯುತ್ತಿವೆ.
Related Articles
Advertisement
ಭಕ್ತರಿಂದ ಕ್ಷೇತ್ರಕ್ಕೆ ಬೆಳೆ ಅರ್ಪಣೆರಾಜ್ಯದ ವಿವಿಧ ಭಾಗಗಳಿಂದ ಸರಕಾರಿ ಬಸ್ಗಳ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ. ಹಲವಾರು ಮಂದಿ ಪಾದಯಾತ್ರೆಯಲ್ಲಿ, ಸೈಕಲ್ ಮೂಲಕವೂ ಬರುತ್ತಿರುವುದು ವಿಶೇಷವಾಗಿದೆ. ಭಕ್ತರು ತಾವು ಬೆಳೆದ ತರಕಾರಿ, ಹಣ್ಣುಹಂಪಲು, ಅಕ್ಕಿ, ದವಸಧಾನ್ಯಗಳನ್ನು ಕ್ಷೇತ್ರಕ್ಕೆ ಕಾಣಿಕೆಯಾಗಿ ಅರ್ಪಿಸುತ್ತಿದ್ದಾರೆ. ಸಾವಿರಾರು ಮಂದಿ ಸೇರಿದರೂ ಶಿಸ್ತು, ಸ್ವತ್ಛತೆ, ದಕ್ಷತೆ ಹಾಗೂ ದೇಗುಲ ಸಿಬಂದಿ ಮತ್ತು ಸ್ವಯಂ ಸೇವಕರ ನಗುಮೊಗದ ಸೇವೆ ಭಕ್ತರ ಮುಕ್ತ ಪ್ರಶಂಸೆಗೆ ಪಾತ್ರವಾಗಿದೆ. ವಾರ್ಷಿಕ ಖರೀದಿ ಕೇಂದ್ರವಾಗಿತ್ತು!
ಕೆಲವು ದಶಕಗಳ ಹಿಂದೆ ಲಕ್ಷದೀಪೋತ್ಸವ ವಸ್ತುಪ್ರದರ್ಶನವೆಂದರೆ ಗ್ರಾಮೀಣ ಭಾಗದ ಜನರಿಗೆ ವಾರ್ಷಿಕ ಖರೀದಿಯ ಹಬ್ಬ. ಹಿಂದೆಲ್ಲ ಸ್ಟೀಲ್ ಪಾತ್ರೆಗಳು, ಮನೆ ಸಾಮಗ್ರಿ, ಪ್ಲಾಸ್ಟಿಕ್ ವಸ್ತುಗಳು, ಮಹಿಳೆಯರ ಫ್ಯಾನ್ಸಿ ವಸ್ತುಗಳು ಊರಿನಲ್ಲಿ ಸಿಗುತ್ತಿರಲಿಲ್ಲ. ಆಗೆಲ್ಲ ವರ್ಷಕ್ಕೊಮ್ಮೆ ಲಕ್ಷದೀಪೋತ್ಸವಕ್ಕೆ ಬಂದೇ ಖರೀದಿ ಮಾಡಲಾಗುತ್ತಿತ್ತು.