Advertisement

‘ವಿದ್ಯಾರ್ಥಿಗಳ ಸತ್‌ಚಿಂತನೆಯಿಂದ ದೇಶ ಬಲಿಷ್ಠ’

06:13 AM Jan 14, 2019 | Team Udayavani |

ಬೆಳ್ತಂಗಡಿ : ದೇಶ ಬಲಿಷ್ಠ ವಾಗಲು ಜನಪ್ರತಿನಿಧಿಗಳಿಂದ ಮಾತ್ರ ಸಾಧ್ಯವಿಲ್ಲ. ತರಗತಿ ಕೋಣೆಯಲ್ಲಿ ಕುಳಿತು ಪಾಠ ಕೇಳುವ ವಿದ್ಯಾರ್ಥಿಗಳಲ್ಲಿ ಸತ್‌ಚಿಂತನೆ ಮೂಡಿದಾಗಲೇ ದೇಶ ಬಲಿಷ್ಠಗೊಳ್ಳುತ್ತದೆ. ಸಾಧಕ ಮಕ್ಕಳನ್ನು ಅಭಿನಂದಿಸಿದಾಗ ಇತರರಿಗೂ ಅದು ಪ್ರೇರಣೆ ನೀಡುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಹೇಳಿದರು.

Advertisement

ಎಸೆಸೆಲ್ಸಿ ಪರೀಕ್ಷೆಯಲ್ಲಿ ಸತತ 7ನೇ ಬಾರಿಗೆ ಶೇ. 100 ಫಲಿತಾಂಶ ದಾಖಲಿಸಿದ ಗುರುವಾಯನಕೆರೆ ಸರಕಾರಿ ಪ್ರೌಢಶಾಲೆ ಹಾಗೂ 8ನೇ ಬಾರಿಗೆ ಶೇ. 100 ಫಲಿತಾಂಶ ದಾಖಲಿಸಿದ ಮಚ್ಚಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಮಾಜಿ ಶಾಸಕ ಕೆ. ವಸಂತ ಬಂಗೇರ ಹಾಗೂ ಸುಜಿತಾ ವಿ. ಬಂಗೇರ ಅವರ ನೇತೃತ್ವದಲ್ಲಿ ರವಿವಾರ ಇಲ್ಲಿನ ಶ್ರೀ ಗುರುನಾರಾಯಣ ಸಭಾಭವನದಲ್ಲಿ ನಡೆದ ಅಭಿನಂದನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮ್ಮಾನ
ಗುರುವಾಯನಕೆರೆ ಶಾಲೆಯನ್ನು ಮಂಜೂರುಗೊಳಿಸಿದ ಮಾಜಿ ಸಚಿವ ಕೆ. ಗಂಗಾಧರ ಗೌಡ, ಅಭಿವೃದ್ಧಿಗೆ ಸಹಕರಿಸಿದ ನಾಗರಿಕ ಸೇವಾ ಟ್ರಸ್ಟ್‌ನ ಅಧ್ಯಕ್ಷ ಕೆ. ಸೋಮನಾಥ ನಾಯಕ್‌, ಉಪಾಧ್ಯಕ್ಷೆ ವಿದ್ಯಾ ಎಸ್‌. ನಾಯಕ್‌, ಕಾರ್ಯದರ್ಶಿ ಜಯಪ್ರಕಾಶ್‌ ಭಟ್ ಅವರನ್ನು ಸಮ್ಮಾನಿಸಲಾಯಿತು.

ಶಿಕ್ಷಕ ಅಜಿತ್‌ಕುಮಾರ್‌ ಕೊಕ್ರಾಡಿ ಮಾತನಾಡಿ, ಹಲವು ಕೊರತೆಗಳ ನಡು ವೆಯೂ ಈ 2 ಸರಕಾರಿ ಶಾಲೆಗಳ ವಿದ್ಯಾರ್ಥಿಗಳ ಸಾಧನೆ ಅನನ್ಯವಾಗಿದೆ. ಇಲ್ಲಿ ಶಿಕ್ಷಕರ ಶ್ರಮವೂ ಅತ್ಯಂತ ಮಹತ್ವ ಪೂರ್ಣವಾಗಿದ್ದು, ಅವರ ಪರಿಶ್ರಮವನ್ನೂ ಅಭಿನಂದಿಸಬೇಕಿದೆ. ಈ 2 ಶಾಲೆಗಳು ತಾಲೂಕಿನ 2 ಕಣ್ಣುಗಳಿದ್ದಂತೆ ಎಂದರು.

ವಿಧಾನ ಪರಿಷತ್‌ ಸದಸ್ಯ ಹರೀಶ್‌ಕುಮಾರ್‌, ಜಿ.ಪಂ. ಸದಸ್ಯರಾದ ಶಾಹುಲ್‌ ಹಮೀದ್‌, ಧರಣೇಂದ್ರಕುಮಾರ್‌, ನಮಿತಾ, ಶೇಖರ್‌ ಕುಕ್ಕೇಡಿ, ತಾ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ವಿ.ಟಿ. ಸೆಬಾಸ್ಟಿನ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಶ್ರೀನಿವಾಸ ಕಿಣಿ, ರಾಜಶೇಖರ ಅಜ್ರಿ ಮೊದಲಾದವರಿದ್ದರು.

Advertisement

ಶ್ರೀ ಗುರುದೇವ ಕಾಲೇಜಿನ ಉಪ ನ್ಯಾಸಕ ವಿನಯಕುಮಾರ್‌ ಸಮ್ಮಾನಿತರ ವಿವರ ನೀಡಿದರು. ಪತ್ರಕರ್ತ ದೇವಿಪ್ರಸಾದ್‌ ಸ್ವಾಗತಿಸಿ, ಜಯಾನಂದ ಲಾೖಲ ಕಾರ್ಯಕ್ರಮ ನಿರೂಪಿಸಿದರು.

ದೇಶಪ್ರೇಮ
ನಾವು ಹಿರಿಯರಿಂದ ಪಡೆಯುವ ಆಸ್ತಿ, ಐಶ್ವರ್ಯಕ್ಕಿಂತಲೂ ಅವರ ಅನುಭವವೇ ದೊಡ್ಡ ಸಂಪತ್ತಾಗಿದ್ದು, ಈ ವಿಚಾರವನ್ನು ಎಲ್ಲ ಮಕ್ಕಳು ಅರಿಯಬೇಕಿದೆ. ಸರಕಾರಿ ಶಾಲೆಯಲ್ಲಿ ಕಲಿತರೂ ಸಾಧನೆಗೆ ಬಡತನ ಅಡ್ಡಿಯಿಲ್ಲ ಎಂಬುದನ್ನು ಈ ಎರಡು ಶಾಲೆಗಳ ಮಕ್ಕಳು ತೋರಿಸಿಕೊಟ್ಟಿದ್ದಾರೆ. ಇಂತಹ ವಿದ್ಯಾರ್ಥಿಗಳನ್ನು ಅಭಿನಂದಿಸುವುದು ನಿಜವಾದ ದೇಶಪ್ರೇಮ.
 ಯು.ಟಿ. ಖಾದರ್‌
ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next