Advertisement
ದಡ್‌ಹಿತ್ಲು ಗಿರಿಧರ ರಾವ್ ಅವರ ತೋಟಕ್ಕೆ ನುಗ್ಗಿ ಬಾಳೆ ಹಾಗೂ ತೆಂಗಿನಗಿಡವನ್ನು ಧ್ವಂಸಗೊಳಿಸಿದೆ.ಪಡ್ಡಡ್ಕ ಸುಬ್ರಾಯ ಭಟ್ಟರ ತೆಂಗಿನ ತೋಟದಲ್ಲಿ ಬಾಳೆ, ಅಡಿಕೆ ಹಾಗೂ ತೆಂಗಿನಗಿಡಗಳಿಗೆ ಹಾನಿ ಮಾಡಿದೆ. ಸೂರ್ಯಕಾಂತ ಭಟ್ ಅವರ ಮನೆ ಪಕ್ಕದ ಈಚಲು ಮರವನ್ನು ಮಗುಚಿದ ಕಾರಣ ಅದು ವಿದ್ಯುತ್ ಲೈನಿನ ಮೇಲೆ ಬಿದ್ದು 2-3 ಕಂಬಗಳು ವಾಲಿದ್ದು, ದಿನವಿಡೀ ವಿದ್ಯುತ್ ಸಂಪರ್ಕವಿರಲಿಲ್ಲ. ಪರಿಸರದಲ್ಲಿ ಪದೇಪದೆ ಆನೆ ದಾಳಿಯಿಡುತ್ತಿದ್ದು, ನಾಗರಿಕರು ಮನೆಯ ಹೊರಬರಲು ಭಯಪಡುತ್ತಿದ್ದಾರೆ.
ಕಾಸರಗೋಡು: ಅರಣ್ಯ ಗಡಿ ಪ್ರದೇಶದ ಜನರ ನಿದ್ದೆಗೆಡಿಸಿದ ಕಾಡಾನೆಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಕ್ರಮ ಆರಂಭಿಸಿದೆ. ಮುಳ್ಳೇರಿಯ ಚಂದ್ರಂಪಾರ, ಕಯ ಮೊದಲಾದ ಭಾಗಗಳಲ್ಲಿ ಕಾಡಾನೆಗಳ ಹಾವಳಿಯಿಂದ ಕೃಷಿ ನಾಶ ಸಂಭವಿಸಿತ್ತು. ಇಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಕಾಡಿಗಟ್ಟಲು ಕ್ರಮ ಆರಂಭಿಸಿದ್ದು, ಅದರಂತೆ ಕಾರಡ್ಕ ಅರಣ್ಯ ಪ್ರದೇಶದಲ್ಲಿರುವ ಕಾಡಾನೆಗಳನ್ನು ಪಯಸ್ವಿನಿ ಹೊಳೆ ಆಚೆಗೆ ಸಾಗಿಸಲು ಕಾರ್ಯಾಚರಣೆ ಆರಂಭಿಸಿದ್ದಾರೆ.