Advertisement

ಬೆಳ್ತಂಗಡಿ: ಶಿವರಾತ್ರಿಯಂದೇ ರಸ್ತೆ ಬದಿ ಸಾಲು ಸಾಲು ಮರ ಕಡಿದು ವಿಕೃತಿ !

12:47 PM Mar 12, 2021 | Team Udayavani |

ಬೆಳ್ತಂಗಡಿ: ಪ್ರಕೃತಿಯಿಲ್ಲದೆ ಜೀವಿಗಳಿಲ್ಲ ಎಂಬುದು ಎಷ್ಟು ಸತ್ಯವೋ, ಪ್ರಕೃತಿಯ ನರಹಂತಕರು ಮನುಷ್ಯರೇ  ಎಂಬುದು ಅಷ್ಟೇ ಸತ್ಯ.

Advertisement

ಇದಕ್ಕೆ ಉದಾಹರಣೆ ಎಂಬಂತೆ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ನೇತ್ರಾವತಿಯಿಂದ ಮುಂಡಾಜೆ ಸಾಗುವ ಇರ್ನಡಿ ಎಂಬಲ್ಲಿ ರಸ್ತೆಬದಿಯಲ್ಲಿ ಅರಣ್ಯ ಇಲಾಖೆ ಬೆಳೆಸಿದ ನಾಲ್ಕು ವರ್ಷದಷ್ಟು ಹಳೆಯ 15ಕ್ಕೂ ಅಧಿಕ ಬೆಲೆಬಾಳುವ ಮರಗಳನ್ನು ಕಡಿದು ವಿಕೃತಿ ಮೆರೆದ ಘಟನೆ ಶಿವರಾತ್ರಿಯಂದು ನಡೆದಿದೆ.

ಪ್ರತಿವರ್ಷ ವಲಯ ಅರಣ್ಯ ಇಲಾಖೆಯಿಂದ ನಡುತೋಪು ವಿಸ್ತರಿಸುವ ಸಲುವಾಗಿ ರಸ್ತೆ ಅಂಚಿನಲ್ಲಿ ಮರಗಳನ್ನು ನೆಟ್ಟು ಸಂರಕ್ಷಿಸುತ್ತಿದೆ. ಅದೆ ರೀತಿ ನೇತ್ರಾವತಿ-ಮುಂಡಾಜೆ ರಸ್ತೆಯಲ್ಲಿ ಮಾಗಣಿ, ಹೆಬ್ಬಲಸು, ಪುನರ್ಪುಳಿ ಇತ್ಯಾದಿ ಜಾತಿ ಮರ ನೆಡಲಾಗಿತ್ತು. ಇದೀಗ ಅಷ್ಟು ಮರಗಳನ್ನ ಕಡಿದು ಹಾಕಿ ವಿಕೃತಿ ಮೆರೆದಿದ್ದಾರೆ.

ಇದನ್ನೂ ಓದಿ: ಬೆಳ್ತಂಗಡಿ: ರಾ.ಹೆ 73ರ ಸಮೀಪದ ಅರಣ್ಯದಲ್ಲಿ 6 ಮಂಗಗಳ ಮೃತದೇಹ ಪತ್ತೆ, ಆತಂಕ ಸೃಷ್ಟಿ

Advertisement

ಮಾತ್ರವಲ್ಲದೆ‌ ಶಿವರಾತ್ರಿಗೆ ಬಂದ ಪಾದಯಾತ್ರಿಗಳ ಪಾದರಕ್ಷೆ ಸೇರಿದಂತೆ‌ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ರಸ್ತೆಗೆ ಎಸೆದು ವಿಕೃತ ಮೆರೆದಿದ್ದಾರೆ.

ವಲಯ ಅರಣ್ಯಧಿಕಾರಿ ತ್ಯಾಗರಾಜ್ ಅವರ ನಿರ್ದೇಶನದಂತೆ ಧರ್ಮಸ್ಥಳ ಉಪವಲಯರಣ್ಯಧಿಕಾರಿ ಹರಿಪ್ರಸಾದ್, ಅರಣ್ಯ ರಕ್ಷಕ ರಾಜೇಶ್, ವಾಚರ್ ಸದಾನಂದ್  ಸ್ಥಳಕ್ಕೆ‌ ಭೇಟಿ‌ ನೀಡಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ:  ಭೂಮಿ ನುಂಗುವ ದಂಧೆ ಬೆಳೆಯಲು ಎರಡು ರಾಷ್ಟ್ರೀಯ ಪಕ್ಷಗಳು ಕಾರಣ: HDK ವಾಗ್ದಾಳಿ

Advertisement

Udayavani is now on Telegram. Click here to join our channel and stay updated with the latest news.

Next