Advertisement

Belthangady: ಸಂತ ಲಾರೆನ್ಸ್‌ ದೇವಾಲಯದಲ್ಲಿ ಕ್ರಿಸ್ಮಸ್‌ ಬಲಿಪೂಜೆ

01:24 AM Dec 25, 2024 | Team Udayavani |

ಬೆಳ್ತಂಗಡಿ: ದ.ಕ. ಸಹಿತ ನಾಲ್ಕು ಜಿಲ್ಲೆಗೆ ಒಳಪಟ್ಟಂತೆ ಬೆಳ್ತಂಗಡಿಯಲ್ಲಿರುವ ಸಂತ ಲಾರೆನ್ಸ್‌ ಪ್ರಧಾನ ದೇವಾಲಯದಲ್ಲಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಬಿಷಪ್‌ ರೆ| ಫಾ| ಬಿಷಪ್‌ ಲಾರೆನ್ಸ್‌ ಮುಕ್ಕುಯಿ ಅವರ ನೇತೃತ್ವದಲ್ಲಿ ಕ್ರಿಸ್‌ ಮಸ್‌ ಹಬ್ಬದ ಪೂರ್ವವಾಗಿ ಡಿ.24ರಂದು ಸಂಜೆ 7ರಂದು ದಿವ್ಯಬಲಿಪೂಜೆ ನೆರವೇರಿಸಿದರು.

Advertisement

ಯೇಸುವಿನ ಜನನ ಸಂದೇಶ ಸಾರುವ ಗೋದಲಿ ಉದ್ಘಾಟನೆ, ಬಾಲ ಏಸುವಿನ ಪ್ರತಿಮೆ ಮೆರವಣಿಗೆ ಸಹಿತ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು.

ಈ ವೇಳೆ ವಿಕಾರ್‌ಫಾ| ತೋಮಸ್‌ ಕಣ್ಣಾಂಕಲ್‌, ಫಾ|ಅಬ್ರಹಾಂ ಪಟ್ಟೇರಿಲ್‌ ಜತೆಗಿದ್ದರು. ಚರ್ಚ್‌ ವ್ಯಾಪ್ತಿಗೆ ಒಳಪಟ್ಟಂತೆ 700ಕ್ಕೂ ಅಧಿಕ ಮಂದಿ ಬಲಿಪೂಜೆಯಲ್ಲಿ ಭಾಗವಹಿಸಿದರು.

ಧರ್ಮಪ್ರಾಂತ್ಯಕ್ಕೆ ಒಳಪಟ್ಟಂತೆ ತಾಲೂಕಿನ 55 ಚರ್ಚ್‌ಗಳಲ್ಲಿ ಕ್ರಿಸ್ಮಸ್‌ ಹಬ್ಬದ ಪ್ರಯುಕ್ತ ಪೂಜೆ ನೆರವೇರಿತು.

Advertisement

Udayavani is now on Telegram. Click here to join our channel and stay updated with the latest news.

Next