Advertisement
ಪ್ರತಿಭಟನೆಯನ್ನುದ್ದೇಶಿಸಿ ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ತೀಕ್ಷಿತ್ ಕೆ. ದಿಡುಪೆ ಮಾತನಾಡಿ, ಪ.ಪೂ. ಶಿಕ್ಷಣ ಇಲಾಖೆಗೆ ನಿರ್ದೇಶಕರಿಲ್ಲದೆ ವರ್ಷಗಳೇ ಕಳೆದರೂ ಇನ್ನೂ ರಾಜ್ಯ ಸರಕಾರ ನಿರ್ದೇಶಕರ ನೇಮಕಕ್ಕೆ ಮುಂದಾಗಿಲ್ಲ. ಇದರಿಂದ ವಿದ್ಯಾರ್ಥಿಗಳು ಸಾಕಷ್ಟು ಗೊಂದಲದಲ್ಲಿದ್ದಾರೆ. ಜತೆಗೆ ಶಿಕ್ಷಣ ಸಚಿವರ ರಾಜೀನಾಮೆ ಬಳಿಕ ಇನ್ನೂ ಹೊಸ ಸಚಿವರನ್ನೂ ನೇಮಿಸಿಲ್ಲ. ಪ್ರಶ್ನೆಪತ್ರಿಕೆ ಹಗರಣದ ಆರೋಪಿ ಶಿವಕುಮಾರ್‌ಗೆ ಶಿಕ್ಷೆ ವಿಧಿಸಬೇಕು. ಈ ಎಲ್ಲ ವಿಚಾರಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಎಬಿವಿಪಿ ಉಗ್ರ ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯ ಬಳಿಕ ಶಾಸಕ ಹರೀಶ್ ಪೂಂಜ, ಪುತ್ತೂರು ಸಹಾಯಕ ಕಮೀಷನರ್ ಡಾ| ಎಚ್.ಕೆ. ಕೃಷ್ಣಮೂರ್ತಿ ಅವರ ಮೂಲಕ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಮುಖ್ಯಮಂತ್ರಿಗೆ ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ಬೆಳ್ತಂಗಡಿಯ ನಿರ್ಗಮಿತ ತಹಶೀಲ್ದಾರ್ ಮದನ್ ಮೋಹನ್ ಸಿ., ನ.ಪಂ. ಸದಸ್ಯ ಜಯಾನಂದ ಗೌಡ ಮೊದಲಾದವರಿದ್ದರು.