Advertisement
800 ವರ್ಷದಷ್ಟು ಪುರಾತನ ಐತಿಹ್ಯವುಳ್ಳ ದೇವಸ್ಥಾನವಿದ್ದರೂ ಪಜಿರಡ್ಕ ಕ್ಷೇತ್ರದ ಅಭಿವೃದ್ಧಿ ದೃಷ್ಟಿಕೋನದಲ್ಲಿ ಬಹಳಷ್ಟು ಹಿಂದುಳಿದೆ. ಇದು 1923ರಲ್ಲಿ ಹಾಗೂ 2019ರಲ್ಲಿ ಪ್ರವಾಹಕ್ಕೆ ತುತ್ತಾದ ಊರಾಗಿದೆ. ಹಲವು ವರ್ಷಗಳ ಹಿಂದಿನಿಂದಲೇ ಕಲ್ಮಂಜ ಪಜಿರಡ್ಕ ಮಂದಿ ಸೇತುವೆ, ರಸ್ತೆಯ ಬೇಡಿಕೆ ಇಟ್ಟಿದ್ದರು. ಇದೀಗ ಕಾಲ ಸನ್ನಿಹಿತವಾಗಿದೆ. 2019 ಜೂನ್ 11ರಂದು ಉದಯವಾಣಿ ಸುದಿನ ಇಲ್ಲಿನ ಸಮಸ್ಯೆ ಕುರಿತು ವರದಿ ಪ್ರಕಟಿಸಿತ್ತು.
Related Articles
Advertisement
ಕಾಮಗಾರಿ ಪೂರ್ಣ ಪಜಿರಡ್ಕ ದೇವಸ್ಥಾನ ಸಹಿತ ಇಲ್ಲಿನ ಜನರ ಬಹುವರ್ಷದ ಬೇಡಿಕೆಯಾಗಿ ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಜ. 31ರಿಂದ ಫೆ. 6ರ ತನಕ ಪಜಿರಡ್ಕ ದೇವಸ್ಥಾನದ ಬ್ರಹ್ಮಕಲಶೋತ್ಸವ ನಡೆಯಲಿರುವುದರಿಂದ ಬಹುಬೇಗನೆ ರಸ್ತೆ ಕಾಮಗಾರಿ ಪೂರ್ಣಗೊಳಿಸಲಾಗುವುದು.
-ಹರೀಶ್ ಪೂಂಜ, ಶಾಸಕರು ಕ್ಷೇತ್ರಕ್ಕೆ ವಿಶೇಷ ಮಹತ್ವ
ಪಜಿರಡ್ಕ ದೇವಸ್ಥಾನ ಸಂಗಮ ಕ್ಷೇತ್ರವಾದ್ದರಿಂದ ಪಿಂಡಪ್ರದಾನಕ್ಕೆ ವಿಶೇಷ ಮಹತ್ವವಿದೆ. ಇಲ್ಲಿರುವ ಮೋಕ್ಷ ಪದವನ್ನು ಅಭಿವೃದ್ಧಿಗೊಳಿಸುವ ಯೋಜನೆ ರೂಪಿಸಲಾಗಿದೆ. ನದಿಗೆ ಇಳಿಯುವ ಪ್ರದೇಶದಲ್ಲಿ ಮೆಟ್ಟಿಲುಗಳನ್ನು ಕಟ್ಟುವ ಕುರಿತು ಯೋಚಿಸಲಾಗಿದೆ. ಶಾಸಕ ಹರೀಶ್ ಪೂಂಜ ಅವರ ನೇತೃತ್ವದಲ್ಲಿ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳು ನಡೆದಿದೆ.
-ತುಕಾರಾಮ ಸಾಲ್ಯಾನ್, ಪಜಿರಡ್ಕ ದೇಗುಲ ವ್ಯವಸ್ಥಾಪನ ಸಮಿತಿ