Advertisement

ಬೆಳ್ತಂಗಡಿ: ಅಚ್ಚರಿ ಮೂಡಿಸಿದ ಸೂರ್ಯನ ಸುತ್ತಲಿನ ವೃತ್ತ

09:44 AM Oct 03, 2019 | Suhan S |

ಬೆಳ್ತಂಗಡಿ: ಸೂರ್ಯನ ಸುತ್ತ ವೃತ್ತಾಕಾರದ ಬೆಳಕು ಗೋಚರಿಸಿದ ಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ಬುಧವಾರ ಬೆಳಗ್ಗೆ ಕಂಡು ಬಂತು.

Advertisement

ಈ ಪ್ರಕ್ರಿಯೆ ಜನಸಾಮಾನ್ಯರಲ್ಲಿ ಕುತೂಹಲ ಮೂಡಿಸಿದ್ದು, ಇದು ಕಾಮನಬಿಲ್ಲು ಎಂದು ಭಾವಿಸಿ ವೀಕ್ಷಣೆಯಲ್ಲಿ ತೊಡಗಿರುವುದು ಕಂಡು ಬಂತು. ಆದರೆ ಸೂರ್ಯನ ಸುತ್ತ ವಿಭಿನ್ನ ಬೆಳಕು ಗೋಚರಿಸಿದ್ದು, ಈ ವಿಶೇಷತೆ  ಈಗ ಎಲ್ಲರ ಮೊಬೈಲ್ ನಲ್ಲಿ ಸ್ಟೇಟಸ್ ಆಗಿ ಹರಿದಾಡುತ್ತಿದೆ.

ಸೂರ್ಯನ ಸುತ್ತಲೂ ಆವರಿಸಿರುವ ಮೋಡದಲ್ಲಿ ಹುದುಗಿರುವ ಮಂಜುಗಡ್ಡೆ ಕಣಗಳ ಮೇಲೆ ಬೆಳಕು ಹರಿದ ಪರಿಣಾಮ ಆಕರ್ಷಕ ವೃತ್ತ ಗೋಚರಿಸಿದೆ. ಕಾಮನಬಿಲ್ಲು ಸೃಷ್ಟಿಯಾದಂತೆ ನಡೆದ ವಿದ್ಯಮಾನ ಇದಾಗಿದ್ದು ಬಣ್ಣಗಳಲ್ಲಿ ಮಾತ್ರ ವ್ಯತ್ಯಾಸ ಕಂಡುಬಂದಿದೆ. ವಾತಾವರಣದಲ್ಲಿ ತೇವಾಂಶ ಹೆಚ್ಚು ಇರುವ ಮತ್ತು ಮಳೆ ಬರುವ ಮುನ್ಸೂಚನೆಯನ್ನು ಇದು ನೀಡುತ್ತದೆ.

ಸೂರ್ಯನ ಬೆಳಕು ಹಾದುಹೋಗುವಾಗ, ಕಿರಣವು ಕಾಮನಬಿಲ್ಲಿನ ಏಳು ಬಣ್ಣಗಳಾಗಿ ಚದುರಿ, ಆಕರ್ಷಕ ಕಾಮನಬಿಲ್ಲು ಗೋಚರಿಸುತ್ತದೆ. ಇದು ತೀರಾ ಅಪರೂಪವೇನಲ್ಲ ಎನ್ನುತ್ತಾರೆ ವಿಜ್ಞಾನಿಗಳು. ವಿಭಿನ್ನ ಸ್ಥಳಗಳಲ್ಲಿ ವಿಭಿನ್ನ ಸಮಯದಲ್ಲಿ ಇದು ಗೋಚರಿಸುತ್ತದೆ ಎಂದು ಸ್ಥಳೀಯ ವಿಜ್ಞಾನಿಗಳು ಎನ್ನುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next