Advertisement
ಬುಧವಾರ ಪ್ರವಾಸಿ ಬಂಗಲೆಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಳಜಿ ರಲೀಫ್ ಫಂಡ್ ಗೆ ಈವರೆಗೆ ಒಟ್ಟು 2,59,04,503.85 ಕೋ.ರೂ. ಸಂಗ್ರಹವಾಗಿದೆ.
Related Articles
Advertisement
ಬ್ಯಾಂಕ್ ವತಿಯಿಂದ ಸೇವಾ ಶುಲ್ಕ ರೂಪದಲ್ಲಿ 39 ರೂ. ಹೊರತು ಪಡಿಸಿ ಖಾತೆಯಿಂದ ಯಾವುದೇ ಹಣ ಹಿಂಪಡೆದಿಲ್ಲ ಎಂಬುದಕ್ಕೆ ಬ್ಯಾಂಕ್ ಬ್ಯಾಲೆನ್ಸ್ ಸರ್ಟಿಫಿಕೇಟ್ ಸಹಿತ ದಾಖಲೆ ಪತ್ರ ನೀಡಿದರು.
ಯಾರೇ ಬಂದು ಮಾಹಿತಿ ಕೇಳಿದರೂ ಸಂಪೂರ್ಣ ದಾಖಲೆ ನೀಡಲು ಸಿದ್ಧ. ತಾಲೂಕಿನಲ್ಲಿ ಮನೆಕಳೆದುಕೊಂಡ 298 ಮಂದಿಗೂ ನಮ್ಮ ಪರಿಹಾರ ಮೊತ್ತ ತಲುಪಲಿದೆ. ಆದರೆ ಸಹಾಯಸ್ತ ವಿತರಿಸುವಾಗ ಸರಕಾರದಿಂದ ಎ,ಬಿ,ಸಿ ಕೆಟಗರಿಯಲ್ಲಿ ಹಾನಿಯಾದ ಮನೆಗಳ ಅನುಪಾತಕ್ಕೆ ಸರಿಯಾಗಿ ಧನ ಸಹಾಯ ನೇರವಾಗಿ ಅವರ ಖಾತೆಗೆ ತಲುಪಲಿದೆ.
ಕೋವಿಡ್ ನಿಂದ 298 ಮಂದಿಯನ್ನು ಒಂದೆಡೆ ಸೇರಿಸಲು ಅಸಾಧ್ಯ. ಕಾನೂನಾತ್ಮಕವಾಗಿ ಪರಿಹಾರ ವಿತರಿಸುವ ಸಲುವಾಗಿ ಜಿಲ್ಲಾಧಿಕಾರಿ ಅನುಮತಿ ಪಡೆದೇ ವಿತರಣೆ ನಡೆಸುವೆವು ಎಂದು ಸ್ಪಷ್ಟಪಡಿಸಿದರು.
ಪ್ರವಾಹದ ಸಂದರ್ಭದಲ್ಲಿ ಜನರ ಕಷ್ಟಕ್ಕೆ ನೇರ ಸ್ಪಂದಿಸುವ ಹಂಬಲದಿಂದ ಕಾಳಜಿ ರಿಲೀಫ್ ಫಂಡ್ ಸಮಾನ ಮನಸ್ಕರು ಒಗ್ಗೂಡಿ ತಾಲೂಕಿನಲ್ಲಿ ಬೇರೆ ಬೇರೆ ವೃತ್ತಿಯಲ್ಲಿದ್ದವರು ಸೇರಿಕೊಂಡು ಕಟ್ಟಿದ ತಂಡ.
ನಮ್ಮ ಇಂಗಿತ ಶಾಸಕರ ಗಮನಕ್ಕೆ ಬಂದು ಅವರು ನಮ್ಮ ಜತೆಗೂಡಿ ನೆರವಿಗೆ ಮುಂದಾಗಿದ್ದಾರೇ ಹೊರತು ಶಾಸಕರು ಸಮಿತಿ ರಚಿಸಿಲ್ಲ. ತಾಲೂಕಿನ ಶಾಸಕರಾಗಿದ್ದರಿಂದ ಅವರನ್ನು ಅಧ್ಯಕ್ಷರಾಗಿ ನೇಮಕ ಮಾಡಬೇಕಾಯಿತೆ ಹೊರತು ಇದರಲ್ಲಿ ರಾಜಕೀಯವಿಲ್ಲ.
ಸಮಾಜದ ಹಿತ ದೃಷ್ಟಿಯಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಸಮಾಜದ ಒಕ್ಕೂಟದಲ್ಲಿ ದಾನಿಗಳು ಸೇರಿ ಮಾಡಿದ ಚಿಂತನೆ.
ನಿರಾಧಾರ ಆರೋಪ ಮಾಡುವ ಮಾಜಿ ಶಾಸಕ ವಸಂತ ಬಂಗೇರ ಅವರಿಗೆ ಗೌರವಯುತವಾಗಿ ನಮ್ಮ ಕರ್ತವ್ಯ ನಿರ್ವಹಿಸಿದ್ದೇವೆ ಎಂದು ಪ್ರತಿಕ್ರೀಯೆ ನೀಡಿದರು.