Advertisement
ಸುಟ್ಟ ಸ್ಥಳದಲ್ಲಿ ಮಹಿಳೆಯರು ಧರಿಸುವ ಅನೇಕ ವಸ್ತುಗಳು ಪತ್ತೆಯಾಗಿವೆ. ಮಂಗಳವಾರ ಪ್ರಾದೇಶಿಕ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞ ವೈದ್ಯರು, ದೇರಳಕಟ್ಟೆ ಆಸ್ಪತ್ರೆಯ ವೈದ್ಯಕೀಯ ತಂಡ ಪರಿಶೀಲಿಸಿ ಸುಮಾರು 30ರಿಂದ 40 ವರ್ಷದ ಮಹಿಳೆಯ ಮೃತದೇಹ ಎಂಬುದನ್ನು ಖಚಿತಪಡಿಸಿದ್ದಾರೆ. ಶವದ ಸ್ಥಳದಲ್ಲಿ ಎರಡು ಕಾಲು ಉಂಗುರ, ಕೈಯಲ್ಲಿ ಉಂಗುರ, ಬಳೆಗಳು, ಸುಟ್ಟ ರೀತಿಯಲ್ಲಿ ಚೈನ್ ಮಾದರಿ ವಾಚ್, ಕೊರಳಿಗೆ ಧರಿಸುವ ಶಿವಲಿಂಗ ಧಾರಣೆ ಸಹಿತ ಇತರ ಸೊತ್ತುಗಳು ಪತ್ತೆಯಾಗಿವೆ.
ಘಟನೆ ನಡೆದ ಸ್ಥಳದಲ್ಲಿಯೇ ದೇರಳಕಟ್ಟೆ ಆಸ್ಪತ್ರೆಯ ಡಾ| ಮಹಾಬಲ ಶೆಟ್ಟಿ, ಡಾ| ಸೂರಜ್ ತಂಡ, ಮಂಗಳೂರು ಪ್ರಾದೇಶಿಕ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞೆ ವೀಣಾ ಮತ್ತು ತಂಡ ಬೆರಳಚ್ಚುಗಾರರು, ಶ್ವಾನ ದಳ ತಜ್ಞರು ಶವ ಪರೀಕ್ಷೆಗೆ ಸಹಕರಿಸಿದರು. ಬಳಿಕ ನಡ ಗ್ರಾ.ಪಂ. ವ್ಯಾಪ್ತಿಯ ಮಂಚಕಲ್ಲಿನಲ್ಲಿರುವ ರುದ್ರ ಭೂಮಿಯಲ್ಲಿ ದಫನ ಮಾಡಲಾಗಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ಆಯುಕ್ತ ಹೃಷಿಕೇಶ್ ಭಗವಾನ್ ಸೋನಾವಣೆ, ಹೆಚ್ಚುವರಿ ಪೊಲೀಸ್ ಆಯುಕ್ತ ಕುಮಾರ್ ಚಂದ್ರ, ಬೆಳ್ತಂಗಡಿ ವೃತ್ತ ನಿರೀಕ್ಷಕ ಶಿವಕುಮಾರ್, ಉಪನಿರೀಕ್ಷಕ ನಂದಕುಮಾರ್ ಎಂ.ಎಂ., ಎಎಸ್‌ಐ ತಿಲಕ್ ರಾಜ್, ಪೊಲೀಸ್ ತಂಡ ಭೇಟಿ ನೀಡಿದ್ದಾರೆ.
Related Articles
ಮಹಿಳೆಯ ಮೃತದೇಹವು ಶೇ.90ರಷ್ಟು ಸುಟ್ಟು ಹೋಗಿದ್ದರಿಂದ ಗುರುತು ಪತ್ತೆ ಸಾಧ್ಯವಾಗಿರಲಿಲ್ಲ. ಘಟನೆ ಸ್ಥಳ ಗುಡ್ಡ ಪ್ರದೇಶವಾದ್ದರಿಂದ ಜನರ ಓಡಾಟವಿಲ್ಲ. ಬೇರೆ ಜಿಲ್ಲೆಯವರಾಗಿದ್ದು, ಈ ಸ್ಥಳದಲ್ಲಿ ಕೊಲೆ ಮಾಡಿ ಸುಟ್ಟು ಹಾಕಿರುವ ಸಾಧ್ಯತೆ ಮೇಲ್ನೋಟಕ್ಕೆ ಕಂಡುಬಂದಿದೆ. ಮಳೆ ಸುರಿದಿದ್ದರಿಂದ ಭಾಗಶಃ ಸುಟ್ಟ ದೇಹ ಕೊಳೆತು ದುರ್ವಾಸನೆ ಹೆಚ್ಚಾಗಿದೆ. ಇದರಿಂದ ಸ್ಥಳ ದ ಮಾಲಕರು ತೆರಳಿದಾಗ ಘಟನೆ ಬೆಳಕಿಗೆ ಬರಲು ಕಾರಣವಾಗಿದೆ. ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement